ನಸಲಾಪುರ ಗ್ರಾಮಸ್ಥರ ಆಕ್ರೋಶ ಹಳ್ಳಕ್ಕೆ – ಸೇತುವೆ ನಿರ್ಮಿಸಲು ಒತ್ತಾಯದ ಆಗ್ರಹ.
ನಸಲಾಪುರ ಸ.28





ಮಾನ್ವಿ ತಾಲೂಕಿನ ನಸಲಾಪುರ ಗ್ರಾಮದಲ್ಲಿರುವ ಹಳ್ಳ ಸಣ್ಣ ಮಳೆಯಾದರೂ ಕೂಡ ತುಂಬಿ ಹರಿಯುತ್ತಿದೆ ಗ್ರಾಮದಿಂದ ಪಟ್ಟಣಕ್ಕೆ ಬರಬೇಕಾದರೆ ಅರಸಾಹಸ ಪಡಬೇಕಾಗುತ್ತದೆ ಊರಿನ ಹಳ್ಳವು ಸ್ವಲ್ಪ ಮಳೆಯಾದರೂ ತುಂಬಿ ಹರಿಯುತ್ತಿವೆ ಗ್ರಾಮಸ್ಥರಿಗೆ ಸಂಚಾರದಲ್ಲಿ ಭಾರಿ ತೊಂದರೆ ಉಂಟಾಗಿದೆ ನಸಲಾಪುರ ಗ್ರಾಮವು 2 ಹಳ್ಳಗಳ ಮಧ್ಯ ಭಾಗದಲ್ಲಿ ಇರುವುದರಿಂದ ಊರಿನ ಸಾರ್ವಜನಿಕರಿಗೆ ಪಟ್ಟಣ ಪ್ರದೇಶಕ್ಕೆ ಸ್ವಂತ ಜಮೀನುಗಳಿಗೆ ಹೋಗಲು ತೊಂದರೆ ಯಾಗುತ್ತಿದೆ ಕಾರಣ ಜನ ಪ್ರತಿನಿಧಿಗಳು ಆದಷ್ಟು ಬೇಗನೆ ಮೇಲ್ಸೇತುವೆ ನಿರ್ಮಿಸಿ ಈ ಸಮಸ್ಯೆಯನ್ನು ಬಹು ಬೇಗನೆ ಈಡೇರಿಸ ಬೇಕೆಂದು ಗ್ರಾಮದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹಾಗೂ ರೈತರ ಬೇಡಿಕೆ ಯಾಗಿದೆ.
ಈ ಗ್ರಾಮದ ಹಿರಿಯರು ಹಲವು ಬಾರಿ ಸ್ಥಳೀಯ ಜನ ಪ್ರತಿನಿಧಿಗಳಿಗೆ ಮನವಿ ಮಾಡಿದರು. ಸಮಸ್ಯೆ ಪರಿಹಾರವಾಗದೆ ಶೋಚನೀಯ ಸ್ಥಿತಿಯಲ್ಲಿ ಇರುವಂತಾಗಿದೆ ತುರ್ತು ಸೇವೆಗಳಾದ ಆಸ್ಪತ್ರೆಗೆ ಗರ್ಭಿಣಿ ಮಹಿಳೆಯರನ್ನು ಕರೆದುಕೊಂಡು ಹೋಗಬೇಕಾದರೆ ಪರಿಸ್ಥಿತಿ ಬಂದಾಗ ಜೀವನದ ಹಂಗು ತೊರೆದು ಹಳ್ಳದಾಟ ಬೇಕಾಗುತ್ತದೆ ದೈನಂದಿನ ಜೀವನಕ್ಕೆ ಸಂಚಾರ ಕಲ್ಪಿಸಿ ಕೊಡಬೇಕೆಂದು ಗ್ರಾಮಸ್ಥರು ಜನ ಪ್ರತಿನಿಧಿಗಳಿಗೆ ಮೊರೆ ಹೋಗಿದ್ದಾರೆ. ಒಂದು ವೇಳೆ ಜನ ಪ್ರತಿನಿಧಿಗಳು ಸ್ಪಂದಿಸದಿದ್ದರೆ ಮುನ್ನೊಂದು ದಿನ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮದ ಯುವಕರು ಹಿರಿಯರು ಎಚ್ಚರಿಕೆ ನೀಡಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ