ಪಿ.ಕೆ.ಪಿ.ಎಸ್ ನೂತನವಾಗಿ ಆಯ್ಕೆಯಾದ – ಸದಸ್ಯರಿಗೆ ಸನ್ಮಾನ
ಅಸ್ಕಿ ಸ.29





ತಾಳಿಕೋಟೆ ತಾಲೂಕಿನ ಅಸ್ಕಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭವ್ಯ ಸನ್ಮಾನ ಕಾರ್ಯಕ್ರಮ ನಡೆಯಿತು.ಸಮಾಜ ಸೇವಕ, ಖ್ಯಾತ ನೇತ್ರ ತಜ್ಞರಾದ ಡಾ, ಪ್ರಭುಗೌಡ ಲಿಂಗದಳ್ಳಿ ಅವರು ಸದಸ್ಯರಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸಹಕಾರ ಸಂಘಗಳು ರೈತರ ಹಿತ ಕಾಪಾಡಲು ಅಸ್ತಿತ್ವಕ್ಕೆ ಬಂದಿವೆ. ಸದಸ್ಯರು ನಿಮ್ಮ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಸಂಘದ ಹಿತಕ್ಕಾಗಿ ಕೆಲಸ ಮಾಡಿ” ಎಂದು ನೂತನ ಸದಸ್ಯರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮಡಿವಾಳಪ್ಪ ಚೌದ್ರಿ, ಉಪಾಧ್ಯಕ್ಷ ಶಂಕರಪ್ಪ ಕೆಳಗಿನಮನಿ, ಸದಸ್ಯರಾದ ಹಣಮಗೌಡ ಬಿರಾದಾರ, ಮಲ್ಲನಗೌಡ ಕರಿಗೌಡರ, ವಿಶ್ವನಾಥರೆಡ್ಡಿ ಬಿರಾದಾರ, ಶಿವರುದ್ರಪ್ಪ ಮಗದಾಳ, ಬಸವರಾಜ ಬ್ಯಾಕೋಡ, ರುದ್ರಗೌಡ ಬಿರಾದಾರ, ಸಿದ್ದರಾಮಪ್ಪ ವಡಗೇರಿ, ಈರಗಂಟೆಪ್ಪ ದೊಡ್ಡಮನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಇದೇ ವೇಳೆ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಬಾಲು ತಳವಾರ, ರಾಯನಗೌಡ ಬಿರಾದಾರ, ಮುಖಂಡರಾದ ಮಲ್ಲನಗೌಡ ಬಿರಾದಾರ, ಡಾ, ಪ್ರಭುಗೌಡ ಬಿರಾದಾರ, ಶಿವನಗೌಡ ಬಿರಾದಾರ ಅಸ್ಕಿ, ನಾನಾಗೌಡ ಬಿರಾದಾರ, ಕಾರ್ಯದರ್ಶಿ ಎಂ.ಎಂ ತಳವಾರ, ಸಂಗನಗೌಡ ಪಾಟೀಲ, ನಬಿ ಕೊಂಡಗೂಳಿ ಮತ್ತಿತರರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನೆಲ್:ಎಮ್.ಬಿ ಮನಗೂಳಿ. ತಾಳಿಕೋಟೆ