ಭೀಮಾ ನದಿ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ – ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ.
ಕುಮಸಗಿ ಸ.29





ಆಲಮೇಲ ತಾಲೂಕಿನ ಕುಮಸಗಿ ಗ್ರಾಮದ ನೆರೆ ಸಂತ್ರಸ್ತರ ಅಳಲನ್ನು ಆಲಿಸಲು ಟ್ಯಾಕ್ಟರ್ ಮೂಲಕ ನೆರೆ ಸಂತ್ರಸ್ತರ ಭೇಟಿ ಯಾಗುವ ಮೂಲಕ ಸಾಂತ್ವನ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲ ಹಾಗೂ ಶಾಸಕ ಅಶೋಕ್.ಮನಗೂಳಿ ಆಲಮೇಲ ತಾಲೂಕಿನ ಪ್ರವಾಹಕ್ಕೆ ತುತ್ತಾಗಿರುವ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಭೇಟಿ ನೀಡಿ ಸಂತ್ರಸ್ಥರ ಅಳಲನ್ನು ಆಲಿಸಿ ಶಾಶ್ವತ ಪರಿಹಾರವಾಗಿ ಪುನರ್ವಸತಿ ಕೇಂದ್ರಗಳನ್ನು ಮಾಡುವ ನಿಟ್ಟಿನಲ್ಲಿ ಮಾನ್ಯ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಮಾಡುವುದಾಗಿ ಮತ್ತು ರೈತರ ಬೆಳೆ ಹಾನಿಯಾದ ತೊಗರಿ, ಹತ್ತಿ, ಉಳಾಗಡ್ಡಿ 100% ರಷ್ಟು ಹಾನಿಯಾಗಿದ್ದು. ಕಬ್ಬು 50% ರಷ್ಟು ಹಾನಿಯಾಗಿದ್ದು. ಸೂಕ್ತ ಪರಿಹಾರ ಒದಗಿಸುವುದಾಗಿ ತಿಳಿಸಿದರು. ನಂತರ ಮಾತನಾಡಿದ ಸಿಂದಗಿಯ ಶಾಸಕ ಅಶೋಕ್ ಮನಗೂಳಿ ಅವರು ಕುಮಸಿಗಿ ಗ್ರಾಮದಲ್ಲಿ ವಿಶೇಷವಾಗಿ ಸಂತ್ರಸ್ತರ ಬೇಡಿಕೆ 100 ರಿಂದ 150 ಕುಟುಂಬಗಳು ನಾವು ಸ್ಥಳಾಂತರ ಗೊಳಿಸುತ್ತೇವೆ. ನಮಗೆ 5 ಎಕರೆ ಜಮೀನು ಕೊಡಿಸಿ ಶಾಶ್ವತ ಪರಿಹಾರ ಮಾಡಿಸಿ ಕೊಡುಬೇಕೆಂದು ಗ್ರಾಮಸ್ಥರು ಕೇಳಿ ಕೊಂಡರು ಮುಂದಿನ ದಿನ ಮಾನಗಳಲ್ಲಿ ಒದಿಗಿಸಬೇಕೆಂದು ಊರಿನ ಜನತೆಯ ಬೇಡಿಕೆ ಯಾಗಿದೆ ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲ ಅವರೊಂದಿಗೆ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ಮಾಡಿರುವುದಾಗಿ ಮುಂದಿನ ದಿನ ಮಾನಗಳಲ್ಲಿ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.ದೇವಣಗಾವ ಗ್ರಾಮ ಹತ್ತಿರ ಇರುವ ಬ್ರಿಡ್ಜ್ ಶಾಸಕರು ಭೇಟಿ ನೀಡಿ ಬ್ರಿಡ್ಜ್ 1972 ರಲ್ಲಿ ನಿರ್ಮಾಣ ಗೊಂಡಿದ್ದು. ಅದು ರಿಪೇರಿ ಸ್ಥಿತಿಯಲ್ಲಿದ್ದು ಆ ರಿಪೇರಿಗಾಗಿ ಮೂರು ಕೋಟಿ ರೂಪಾಯಿ ಸರ್ಕಾರದದಲ್ಲಿದು ಅದನ್ನು ಒಂದು ತಿಂಗಳ ಒಳಗಾಗಿ ರಿಪೇರಿ ಮಾಡುವುದಾಗಿ ತಿಳಿಸಿದರು. ದೇವಣಗಾವ್ ಟು ಆಲಮೇಲ 16 ಕಿಲೋ ಮಿಟರ್ ರಸ್ತೆಯು ರಿಪೇರಿ ಹಂತದಲ್ಲಿದ್ದು ಮುಂದಿನ ದಿನ ಮಾನಗಳಲ್ಲಿ ರಸ್ತೆ ಕೆಲಸ ಮಾಡುವುದಾಗಿ ಹೇಳಿದರು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಕೆ.ಆನಂದ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ನಿಂಬರಗಿ ಸಿಂದಗಿ ತಾಲೂಕ ದಂಡಾಧಿಕಾರಿ ಕರೆಪ್ಪ ಬೆಳ್ಳಿ, ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಮು.ಅಗ್ನಿ, ಸಿಂದಗಿ ಸಿ.ಪಿ.ಐ ನಾನಾಗೌಡ್ ಪೊಲೀಸ್ ಪಾಟೀಲ್ ಹಾಗೂ ಸಿಬ್ಬಂದಿ ವರ್ಗ ಆಲಮೇಲ ಪೊಲೀಸ್ ಠಾಣೆಯ ಪಿ.ಎಸ್.ಐ ಅರವಿಂದ್ ಅಂಗಡಿ ಮತ್ತು ಸಿಬ್ಬಂದಿ ವರ್ಗ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು. ಭೀಮಾ ನದಿ ತೀರದ ಗ್ರಾಮಸ್ಥರು ಮುಖಂಡರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನೆಲ್:ರೇವಣಸಿದ್ದಯ್ಯ.ಜಿ ಹೀರೆಮಠ ಆಲಮೇಲ