ಮಳೆಗೆ ಬೆಳೆ, ಮನೆ ಹಾನಿ ಸಂತ್ರಸ್ತರಿಗೆ – ಪರಿಹಾರ ಒದಗಿಸಲು ನಡಹಳ್ಳಿ ಒತ್ತಾಯ.
ಮುದ್ದೇಬಿಹಾಳ ಸ.30





ನಿರಂತರ ಸುರಿಯುತ್ತಿರುವ ಮಳೆಗೆ ಮುದ್ದೇಬಿಹಾಳ ವಿಧಾನ ಸಭಾ ಮತ ಕ್ಷೇತ್ರ ಮಾತ್ರ ಅಲ್ಲದೆ ಇಡೀ ಉತ್ತರ ಕರ್ನಾಟಕ ಭಾಗದ ರೈತರ ಪರಿಸ್ಥಿತಿ ಅಯೋಮಯವಾಗಿದೆ. ಹೀಗಿದ್ದರೂ ತಾಲೂಕಾ ಆಡಳಿತ ಶಾಸಕರು ಸಂಕಷ್ಟಕ್ಕೆ ಈಡಾದ ರೈತರ ಅಳಲು ಆಲಿಸಲು ಮುಂದಾಗದಿರುವುದು ದುರಂತ, ರೈತರ ಬಗ್ಗೆ ನಿರ್ಲಕ್ಷ್ಯ ಮುಂದುವರೆದಲ್ಲಿ ರೈತರ ಆಕ್ರೋಶ ಎದುರಿಸ ಬೇಕಾಗುತ್ತದೆ. ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಎಚ್ಚರಿಸಿದರು. ಬಿಜೆಪಿ ಕಾರ್ಯಾಲಯದಲ್ಲಿ ಮುಖಂಡರೊಂದಿಗೆ ಸೋಮವಾರ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಅತಿವೃಷ್ಟಿಗೆ ನಮ್ಮ ಭಾಗದ ಕಪ್ಪು ಮಣ್ಣು ತಡೆಯುವುದಿಲ್ಲ, ಈ ಭಾಗದ ಪ್ರಮುಖ ಬೆಳೆಗಳಾದ ತೊಗರಿ, ಹತ್ತಿ, ಈರುಳ್ಳಿ, ಸಂಪೂರ್ಣ ಹಾಳಾಗಿದೆ. ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂದಾಜು ಒಂದೂವರೆ ಲಕ್ಷ ಎಕರೆಯಷ್ಟು ಬೆಳೆ ಹಾಳಾಗಿರುವ ಮಾಹಿತಿ ಇದೆ. ಇದಲ್ಲದೆ ಮಳೆಗೆ ಇದುವರೆಗೂ ಅಂದಾಜು 1500 ಮನೆಗಳು ಹಾನಿಗೀಡಾಗಿವೆ. ಇಷ್ಟಾದರೂ ತಾಲೂಕು ಆಡಳಿತ, ಕೃಷಿ ಇಲಾಖೆ ಸ್ಥಳೀಯ ಶಾಸಕರು ನೊಂದವರ ಕಣ್ಣೀರು ಒರೆಸಲು ಮುಂದಾಗದಿರುವುದು ಪರಿಸ್ಥಿತಿಯ ಅಲಕ್ಷ್ಯವಾಗಿದೆ ಎಂದರು ಇದೇ ಸಂದರ್ಭದಲ್ಲಿ, ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣವರ್, ಕಾರ್ಯದರ್ಶಿ ಸಂಜು ಬಾಗೇವಾಡಿ, ರೈತ ಮೋರ್ಚಾ ತಾಲೂಕ ಅಧ್ಯಕ್ಷ ಶಂಕರಗೌಡ ಶಿವಣಗಿ, ಯುವ ಮೋರ್ಚಾ ಅಧ್ಯಕ್ಷ ಗಿರೀಶ್ ಗೌಡ ಪಾಟೀಲ್ ಹಿರೆ ಮುರಾಳ, ಜಿಲ್ಲಾ ಮುಖಂಡ ಅಶೋಕ್ ರಾಥೋಡ್. ಅನಿಲ್ ರಾಟೋಡ್, ನಾಗೇಶ್ ಕವಡಿಮಟ್ಟಿ, ಇನ್ನಿತರರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ