“ನವರಾತ್ರಿಯ ವೈಭವ”…..

ವಿಜಯನಗರ ಸಾಮ್ರಾಜ್ಯ ಕಾಲದ




ನಾಡಹಬ್ಬವಿದು
ವಿವಿಧೆಡೆಗಳಲಿ ದೇವಿಯ ಪೂಜೆ
ಸಂಭ್ರಮವಿದು ಮಹಿಷಾಸುರನ ಕೊಂದ
ವಿಜಯೋತ್ಸವವಿದು
ಸಾಂಸ್ಕೃತಿಕ ಹಬ್ಬವಿದು ಹಿರಿಮೆಯನು
ಸಾರುವುದು
ಚಾಮುಂಡೇಶ್ವರಿಯು ಮಹಿಷಾಸುರನನ್ನು
ಸಂಹಾರ ಮಾಡಿದ
ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯದ
ವಿಶ್ವವಿಖ್ಯಾತ ನಾಡಹಬ್ಬ ದಸಾರದ ವೈಭವವೇ
ಸುಂದರ
ನಾಡಿನಲ್ಲೆಡೆ ತುಂಬಿದೆ ಹಬ್ಬದ ಸಂಭ್ರಮ
ಸಡಗರ
ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳ
ಇದು ಶಾಂತಿಯ ಹಬ್ಬ, ಸೌಹಾರ್ದದ ಮೇಳ
ಮೈಸೂರಿನಲ್ಲಿ ಸಾಹಿತ್ಯ ಸಂಗೀತ ಸಮ್ಮೇಳನ
ಅಲ್ಲಲ್ಲಿ ನಡೆಯುವುದು ಕವಿಗೋಷ್ಠಿ
ಸಮ್ಮೇಳನ
ನವಮಿಯ ದಿನದಂದು ಆಯುಧಗಳ
ಪೂಜೆಯು
ವಾಹನಗಳಿಗೆ ಪೂಜೆ ಪುಷ್ಪಾಲಂಕಾರವು
ಕಣ್ಮನವ ಸೆಳೆಯುವುದು ದೀಪಾಲಂಕಾರವು
ಅರಮನೆಯಲ್ಲಿ ದಶದಿನವು ಪೂಜೆ
ಪುನಸ್ಕಾರವು
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ