ಕಲ್ಮಠದಲ್ಲಿ ಸುವರ್ಣ ದಸರಾ ಮಹೋತ್ಸವಕಾರ್ಯಕ್ರಮದಲ್ಲಿ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭಾಗಿ.
ಮಾನ್ವಿ ಅ.01





ಮೈಸೂರಲ್ಲಿ ದಸರಾ ಮಹೋತ್ಸವ ನಡೆದರೆ ಮಾನ್ವಿಯಲ್ಲಿಯೂ ಸಹ ಕಲ್ಮಠ ಮಠದಿಂದ ಪ್ರತಿ ವರ್ಷ ದಸರಾ ಮಹೋತ್ಸವ ನಡೆಯುತ್ತಿರುವುದು ಶ್ಲಾಘನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬಣ್ಣಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದ ಕಲ್ಮಠ ಮಠದಿಂದ ನಡೆಯುತ್ತಿರುವ ಸುವರ್ಣ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಠ ಮಾನ್ಯಗಳು ಇರುವುದರಿಂದಲೇ ಧಾರ್ಮಿಕ ಕಾರ್ಯಕ್ರಮ ಉಳಿದಿವೆ.ಮಾನ್ವಿ ಕಲ್ಮಠದ ಸುವರ್ಣ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ನನ್ನನ್ನು ಆಹ್ವಾನಿಸಿದ್ದಾಗಿ ಅನಂತ ಧನ್ಯವಾದಗಳು ತಿಳಿಸಿದರು.
ಫಾದರ್ ವಿನ್ಸೆಂಟ್ ಸುರೇಶ ಮಾತನಾಡಿ, ಯಾವುದೆ ಧರ್ಮವಿರಲಿ ಸೌಹಾರ್ದತೆ ಯುತವಾಗಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಾಗ ಮಾತ್ರ ಪ್ರೀತಿ ವಾತ್ಸಲ್ಯ ಹುಟ್ಟೋದು ಸಾಧ್ಯ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನೆಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ