ದಲಿತ ಬಾಣಂತಿ & ಮಗು ಇಬ್ಬರ ಸಾವಿಗೆ ನಿರ್ಲಕ್ಷ್ಯ ಕಾರಣ ವೈದ್ಯರನ್ನು ಹಮಾನತ್ತಿನಲ್ಲಿಟ್ಟು ಪ್ರಕರಣ ದಾಖಲಿಸಲಿಕ್ಕೆ – ಛಲವಾದಿ ನಾರಾಯಣಸ್ವಾಮಿಯವರಿಗೆ ಮನವಿ ಪತ್ರದ ಮೂಲಕ ಸರ್ಕಾರಕ್ಕೆ ಆಗ್ರಹ.
ಬಳ್ಳಾರಿ ಅ.02





ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ತಮ್ಮ ಗಮನಕ್ಕೆ ತಂದು ಮನವಿ ಮಾಡಿ ಕೊಳ್ಳುವುದು ಏನೆಂದರೆ ಕಂಪ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಲಿತ ಮಹಿಳೆ ಹೆರಿಗೆಗೆ ಬಂದ ರಾಮಸಾಗರ ಗ್ರಾಮದ ಚಂದ್ರಮ್ಮ ವಯಸ್ಸು 28 ಇವರು ದಿನಾಂಕ:- 25-9-25 ರಂದು ಗುರುವಾರ ಬೆಳಿಗ್ಗೆ, 10 ಗಂಟೆ:30 ರ ಸಮಯಕ್ಕೆ ಹೆರಿಗೆ ನೋವು ಕಾಣಿಸಿ ಕೊಂಡದ್ದರಿಂದ ತವರು ಮನೆ ಬೆಳಗೋಡ್ ಹಾಳ್ ದಿಂದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕಂಪ್ಲಿಗೆ ಹೋದಾಗ ಈ ಗರ್ಭಿಣಿಯನ್ನು ದಾಖಲಿಸಿಕೊಂಡು ಆರೋಗ್ಯದ ಪರೀಕ್ಷೆ ನಡೆಸಿದ್ದಾಗ. ನಂತರ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿ ರಿಪೋರ್ಟ್ ತಂದು ತೋರಿಸಿದ ಮೇಲೆ ವೈದ್ಯರು ಇದರಲ್ಲಿ ಮಗು ಚೆನ್ನಾಗಿದೆ ಮತ್ತು ಸಾಮಾನ್ಯ ಹೆರಿಗೆ ಯಾಗಲಿದೆ ಎಂದು ಭರವಸೆ ಹೇಳಿ, ಸಂಜೆಯ ವರೆಗೂ ಗರ್ಭಿಣಿಯ ಕಡೆಗೆ ಗಮನ ಹರಿಸಿಲ್ಲ. ನಂತರ ನರ್ಸ್ ಗಳು ಸಂಜೆ 5:30 ರ ಸುಮಾರಿಗೆ ವೈದ್ಯರ ಸಹಾಯವಿಲ್ಲದೆ, ನರ್ಸ್ ಗಳೆ ಹೆರಿಗೆ ಮಾಡಿಸಿದ್ದಾರೆ. ಮಗು ಉಸಿರಾಟದ ತೊಂದರೆಗೆ ತುತ್ತಾದಾಗ ವೈದ್ಯರನ್ನು ಕರೆಸಿದ್ದಾರೆ. ಆದರೂ ಕೂಡ ಮಗು ಜನಿಸಿದ 20 ನಿಮಿಷ ದೊಳಗೆ ಮಗು ತೀರಿ ಹೋಗಿದೆ. ನಂತರ ಬಾಣಂತಿಗೆ ತುಂಬಾ ರಕ್ತಸ್ರಾವ ವಾಗುತ್ತಿದ್ದರಿಂದ ಬಾಣಂತಿ ಭಯಗೊಂಡು ವೈದ್ಯರ ಹತ್ತಿರ ಹೇಳಿ ಕೊಂಡಿದ್ದಾಳೆ ಏನು ಹಾಗಲ್ಲ ಹೊಲಿಗೆ ಹಾಕಿ ಸರಿ ಪಡಿಸುತ್ತೇವೆ ಎಂದು ಹೇಳಿ ವೈದ್ಯರು ಸುಮ್ಮನಾಗಿದ್ದರೆ. ರಾತ್ರಿ 7 ಗಂಟೆಯ ವರೆಗೂ ತುಂಬಾ ರಕ್ತಸ್ರಾವ ವಾಗಿರುವುದರಿಂದ ಮಹಿಳೆ ತುಂಬಾ ನಿಶ್ಯಕ್ತಿ ಒಳಗಾದ ಕಾರಣ ಆಕೆಯನ್ನು ಕಾಪಾಡುವುದು ಕಷ್ಟಕರ ವಾಗಿರುವುದರಿಂದ ಬಳ್ಳಾರಿ ಓ.ಪಿ.ಡಿ ಗೆ ಕರೆದುಕೊಂಡು ಹೋಗಿ ಎಂದು ಜಾರಿ ಕೊಳ್ಳುತ್ತಾರೆ ವೈದ್ಯರು. ಓ.ಪಿ.ಡಿ ಗೆ ಹೋಗುವುದು ರೋಳಗೆ ರಾತ್ರಿ 9:30 ಸಮಯವಾಗಿದೆ. ಅಲ್ಲಿಗೆ ಹೆರಿಗೆಯಾಗಿ ನಾಲ್ಕು ತಾಸುಗಳ ಅವಧಿ ಯಾಗಿದ್ದು ಹಾಗೆ ನಿರಂತರ ರಕ್ತಸಾರ್ವವಾಗಿದೆ ಈ ಕಾರಣದಿಂದ ಓ.ಪಿ.ಡಿ ಯ ವೈದ್ಯರು ಸಹ ಎಷ್ಟೇ ಶ್ರಮ ಪಟ್ಟರು ಸಹ ಆ ತಾಯಿಯನ್ನು ಉಳಿಸಿ ಕೊಳ್ಳಲು ಸಾಧ್ಯವಾಗಲಿಲ್ಲ ಕೊನೆಗೆ ಆಕೆಯು ಕೂಡ ಸಾವಿಗೀಡಾಗಿರುತ್ತಾಳೆ. ಈಗೆ ಕಂಪ್ಲಿ ಆಸ್ಪತ್ರೆಯ ವೈದ್ಯರ ಮತ್ತು ಸಿಬ್ಬಂದಿಯವರ ನಿರ್ಲಕ್ಷ್ಯತೆ ಯಿಂದ ಒಂದು ದಲಿತ ಬಡ ಕುಟುಂಬದ ತಾಯಿ ಮತ್ತು ಮಗು ಸಾವಿಗೆ ತುತ್ತಾಗಿದ್ದಾರೆ. ಇಲ್ಲಿ ಸಂಪೂರ್ಣ ವೈದ್ಯರ ನಿರ್ಲಕ್ಷ್ಯತೆ ಯಿಂದ ಈ ಘಟನೆ ಸಂಭವಿಸಿರುವುದು ಸಾಮಾನ್ಯರಿಗೂ ಅರ್ಥವಾಗುತ್ತದೆ. ಹಾಗೆ ಇಲ್ಲಿನ ವೈದ್ಯಾಧಿಕಾರಿಗಳು ಈ ಹಿಂದೆ ಇಂಥ ಬಡಪಾಯಿ ದಲಿತ ಅಲ್ಪಸಂಖ್ಯಾತ ಹಿಂದುಳಿದ ವರ್ಗದವರು ಈ ಆಸ್ಪತ್ರೆಯನ್ನು ನಂಬಿಕೊಂಡು ಬಂದವರೆಲ್ಲ ಸುಮಾರು ಬಾಣಂತಿಯರು ಹೆರಿಗೆಯಾದ ಮಕ್ಕಳು ಸಾಯುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದ್ದರಿಂದ ನಿರಂತರವಾಗಿ ಮಕ್ಕಳು ಬಾಣಂತಿಯರು ಸಂಬಂಧಿಕರು ಈ ವೈದ್ಯಧಿಕಾರಿಗಳ ಮೇಲೆ ಇಡೀ ಶಾಪ ಹಾಕಿ ನೊಂದು ಬೆಂದು ಹೋಗಿದ್ದಾರೆ.

ಇವರಿಗೆ ಯಾರು ಹೇಳೋರಿಲ್ಲ ಕೇಳೋರಿಲ್ಲದಂತಾಗಿ ಬಿಟ್ಟಿದ್ದರಿಂದ ಕಂಪ್ಲಿ ಸಾರ್ವಜನಿಕ ಆಸ್ಪತ್ರೆ ತಾಲೂಕ ವೈದ್ಯಧಿಕಾರಿಗಳು ಮತ್ತು ಸಿಬ್ಬಂದಿಗಳು ಬಾಣಂತಿ ಹಾಗೂ ಮಗುವಿನ ಸಾವಿಗೆ ನೇರ ಹೊಣೆಗಾರರಾಗಿದ್ದು ಇವರ ಮೇಲೆ ಕೂಡಲೇ ಪ್ರಕರಣ ದಾಖಲಿಸಿಕೊಂಡು ಇವರನ್ನು ಅಮಾನತ್ತ ಗೊಳಿಸಿ, ಉನ್ನತ ತನಿಖೆಗೆ ಒಳಪಡಿಸಿ, ದಲಿತ ಬಾಣಂತಿ ಮಹಿಳೆಯ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರವನ್ನು ಒದಗಿಸಿ ಕೊಡಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿಯ ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿ.ಶಿವಕುಮಾರು ಜಿಲ್ಲಾ ಅಧ್ಯಕ್ಷರು ಛಲವಾದಿ ಮಹಾಸಭಾ ಬಳ್ಳಾರಿ. ಸಿ.ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಾಧ್ಯಕ್ಷರು, ರಾಜು ತಲಮಾಮಿಡಿ ಛಲವಾದಿ ಮುಖಂಡರು, ಮಾನಯ್ಯ ಬಿ.ಗೋನಾಳ್ ಜಿಲ್ಲಾ ಉಪಾಧ್ಯಕ್ಷರು ಛಲವಾದಿ ಮಹಾಸಭಾ ಬಳ್ಳಾರಿ,ಶಿವಕುಮಾರ್ ಕಮರ್ಚೇಡ್ ಛಲವಾದಿ ಮುಖಂಡರು,ಮಲ್ಲಿಕಾರ್ಜುನ.ಬಿ ಗೋನಾಳ್ ಛಲವಾದಿ ಮುಖಂಡರು.ಡಿ.ರಾಮಕೃಷ್ಣ ಛಲವಾದಿ ಮುಖಂಡರು, ಶ್ರೀಧರ ಗಡ್ಡಿ ಯಲ್ಲಪ್ಪ, ಚೆನ್ನಪ್ಪ ಛಲವಾದಿ ಕಂಪ್ಲಿ, ಟಿ.ಶೇಷಪ್ಪ ಛಲವಾದಿ ಮುಖಂಡರು ಬಳ್ಳಾರಿ, ಚನ್ನಪ್ಪ ಕಂಪ್ಲಿ ಛಲವಾದಿ ಯುವಿ ಮುಖಂಡರು, ಮಲ್ಲಿಕಾರ್ಜುನ.ಬಿ ಗೋನಾಳ ಛಲವಾದಿ ಮುಖಂಡರು, ಮುಕ್ಕಣ್ಣ ಸಿರುಗುಪ್ಪ ಛಲವಾದಿ ಮುಖಂಡರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಮೂಲಕ ಸರ್ಕಾರಕ್ಕೆ ಆಗ್ರಹ ಪಡಿಸಿದ್ದಾರೆ ಎಂದು ವರದಿಯಾಗಿದೆ.