ಮುತ್ತೈದೆಯರಿಗೆ ಉಡಿ ತುಂಬಿದ – ಬನ್ನಿ ಮಹಾಂಕಾಳಿ ಸಮಿತಿಯವರು.
ಇಳಕಲ್ಲ ಅ.02





ಸಮೀಪದ ಗೊರಬಾಳ ಗ್ರಾಮದಲ್ಲಿ ಒಂಬತ್ತು ದಿನಗಳ ವಿಭಿನ್ನವಾಗಿ ನಡೆದ ದಸರಾ ಹಬ್ಬದ ಬನ್ನಿ ಮಹಾಂಕಾಳಿ ಅದ್ದೂರಿ ಮಾಹಾ ಪೂಜೆಯೊಂದಿಗೆ ತೆರೆ ಕಂಡಿತು.9 ದಿನಗಳ ಮಹಿಳೆಯರು ವಿವಿಧ ವರ್ಣ ರಂಜಿತ ಸೀರೆ ಉಟ್ಟು ಬೆಳಗ್ಗೆ 4:00 ಗಂಟೆಯಿಂದ ಪೂಜೆ ಮಾಡುತ್ತಿದ್ದ ಮಹಿಳೆಯರ ಸಂಭ್ರಮವು 9 ದಿನಗಳ ಕಾಲ ಗ್ರಾಮದಲ್ಲಿ ಹಬ್ಬದ ವಾತಾವರಣದಂತಿತ್ತು ಬನ್ನಿ ಮಹಾಂಕಾಳಿಯ ಪೂಜೆ ದಿನಂ ಪ್ರತಿ ವಿಭಿನ್ನ ವಿಶೇಷ ವಿವಿಧ ಮನರಂಜನೆಯ ಕಾರ್ಯಕ್ರಮಗಳ ಆಯೋಜನೆ ಪ್ರತಿ ದಿನ ರಾತ್ರಿ ಪ್ರಸಾದ ವ್ಯವಸ್ಥೆ ಗ್ರಾಮದ ಜನರು ಹುಬ್ಬೇರಿಸುವಂತೆ ಮಾಡಿತ್ತು.

ಹಬ್ಬದ ಕೊನೆಯ ದಸರಾ ಹಬ್ಬದಂದು ಅತಿ ಹೆಚ್ಚು ಮಹಿಳೆಯರು ಬನ್ನಿ ಮಹಾಂಕಾಳಿಯ ವಿಶೇಷ ಪೂಜೆ ಸಲ್ಲಿಸಿ ಸುಮಾರು ನಾಲ್ಕೈದು ನೂರು ಮುತ್ತೈದೆಯರಿಗೆ ಉಡಿ ತುಂಬಿ ಭವಿಷ್ಯದಲ್ಲಿ ಬನ್ನಿ ಮಹಾಂಕಾಳಿ ಗ್ರಾಮದ ಸರ್ವರಿಗೂ ಒಳಿತನ್ನು ಮಾಡಿ ಭವಿಷ್ಯದ ದಿನದಲ್ಲಿ ಈ ಬನ್ನಿ ಮಹಾಂಕಾಳಿ ಹಬ್ಬವು ಗೊರಬಾಳದ ಮಹಾ ದಸರಾ ಹಬ್ಬವಾಗಿ ನೆರವೇರುವಂತೆ ಬನ್ನಿ ಮಹಾಂಕಾಳಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು. ಆಗಮಿಸಿದ್ದ ಭಕ್ತರಿಗೆ ಗೋಧಿ ಹುಗ್ಗಿ ಅನ್ನ ಸಾರು ಪ್ರಸಾದ ವ್ಯವಸ್ಥೆ ಮಾಡಿದ್ದರು.

ಬನ್ನಿ ಮಹಾಂಕಾಳಿಯ ಸಮಿತಿಯ ಸರ್ವ ಸದಸ್ಯರು ಅತ್ಯಂತ ಅಚ್ಚು ಕಟ್ಟಾಗಿ ವಿಜೃಂಭಣೆಯಿಂದ ಪೂಜಾ ಕಾರ್ಯ ನೆರವೇರುವಂತೆ ಒಂಬತ್ತು ದಿನಗಳ ವರೆಗೆ ಅದ್ದೂರಿ ಹಬ್ಬ ಆಚರಣೆ ಮಾಡುವ ಮೂಲಕ ಬನ್ನಿ ಮಹಾಂಕಾಳಿಯ ಮಹಾ ಪೂಜೆಯನ್ನು ಭವಿಷ್ಯದ ದಿನದಲ್ಲಿ ಗೊರಬಾಳ ದಸರಾ ಹಬ್ಬವನ್ನಾಗಿ ಆಚರಿಸುವ ಸಂಕಲ್ಪ ಮಾಡಿದ್ದೇವೆ ಎಂದು ಸಮಿತಿಯ ಸದಸ್ಯರು ತಿಳಿಸಿದರು.