ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಗಾಂಧಿ ಹಾಗು ಶಾಸ್ತ್ರೀಜಿಯವರ – ಜನ್ಮ ದಿನ ಆಚರಣೆ.
ರಾಯಚೂರು ಅ.02





ರಾಯಚೂರು ಜಿಲ್ಲೆಯ ಪ್ರಸಿದ್ದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಶಕ್ತಿ ನಗರದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ರವರ 156 ನೇ. ಹಾಗೂ ದೇಶದ ಎರಡನೇ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ರವರ 121 ನೇ. ಜನ್ಮ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಜನಾ ಪ್ರದೇಶದ ಮುಖ್ಯಸ್ಥರಾದ ಶ್ರೀ ಸೂರ್ಯಕಾಂತ ಆರ್ ಕಬಾಡೆ ಕಾರ್ಯನಿರ್ವಾಹ ನಿರ್ದೇಶಕರು ಇಬ್ಬರ ಮಹಾನ್ ವ್ಯಕ್ತಿಗಳ ಬಗ್ಗೆ ಮಾತನಾಡಿದರು, ಶ್ರೀ ಅಜಯ್.ಟಿ ಪಿ, ಮುಖ್ಯ ಅಭಿಯಂತರರು (ಕಾಮಗಾರಿ) ಶ್ರೀ ಸಿದ್ದಪ್ಪ ಸ್ವಾಮಿ, ಪ್ರ.ಮುಖ್ಯ ಅಭಿಯಂತರರು (ಚಾ&ನಿ) ಶ್ರೀ ಅಮರೇಶ, ಉಪ ಪ್ರಧಾನ ಪ್ರಬಂಧಕರು (ಮಾ.ಸಂ) ಶ್ರೀ ಸತ್ಯವೀರ್ ಸಿಂಗ್ ಸಿ.ಐ.ಎಸ್.ಎಫ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಆರ್.ಟಿ.ಪಿ.ಎಸ್ ನ ಎಲ್ಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.