ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಅಂಗವಾಗಿ – ಸರ್ವ ಧರ್ಮಗಳ ಪ್ರಾರ್ಥನೆ.
ಮಾನ್ವಿ ಅ.03





ಪಟ್ಟಣದ ಪುರ ಸಭೆಯ ವತಿಯಿಂದ ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಅಂಗವಾಗಿ ಮಹಾತ್ಮಗಾಂಧಿ ಉದ್ಯಾನ ವನದಲ್ಲಿನ ಮಹಾತ್ಮಗಾಂಧಿ ಪುತ್ತಳಿಗೆ ಶಾಸಕ ಹಂಪಯ್ಯ ನಾಯಕ ಮಾಲರ್ಪಣೆ ಮಾಡುವ ಮೂಲಕ ಗೌರವ ಸಮರ್ಪಿಸಿದರು. ನಂತರ ಸರ್ವ ಧರ್ಮಗಳ ಪ್ರಾರ್ಥನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮಹಾತ್ಮ ಗಾಂಧಿಜೀ ಯವರು ನಮ್ಮೆಲ್ಲರಿಗೂ ಕೂಡ ಶಾಂತಿ ಮತ್ತು ಅಹಿಂಸೆಯ ಮಾರ್ಗದಲ್ಲಿ ಸ್ವಾತ್ಯಂತ್ರವನ್ನು ತಂದು ಕೊಟ್ಟಿದ್ದಾರೆ. ಪ್ರಸ್ತುತ ದಿನಗಳಲ್ಲಿ ಮಹಾತ್ಮ ಗಾಂಧಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸುವುದಕ್ಕೆ ಸಾಧ್ಯವಾಗುತ್ತದೆ. ಮುಂದಿನ ಯುವ ಪಿಳಿಗೆಗೆ ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಮತ್ತು ಅವರ ಸಂದೇಶಗಳನ್ನು ತಿಳಿಸಿದಾಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮಾನ್ವಿ ಸೆಂಟ್ ಮೇರಿಸ್ ಚರ್ಚ್ ಫಾ.ಸುರೇಶ ವಿನ್ಸಂಟ್, ಮುಸ್ಲಿಂ ಧರ್ಮ ಗುರುಗಳಾದ ಸೈಯಾದ್ ಸಜ್ಜದ್ ಹುಸೇನಿ ಮತವಾಲೆ ಸೌಹಾರ್ಧತೆಯ ಸಂದೇಶವನ್ನು ನೀಡಿದರು. ಮೆಹಬೂಬ್ ಮದ್ಲಾಪುರ್, ರೇವಣಸಿದ್ದಯ್ಯ ಸ್ವಾಮಿ, ಹುಸೇನಪ್ಪ ರವರು ಸರ್ವ ಧರ್ಮಗಳ ಧಾರ್ಮಿಕ ಪಠಣೆ ಮಾಡಿದರು.ಪುರ ಸಭೆ ಯಿಂದ ಉದ್ಯಾನದ ವರೆಗೂ ಭಜನಾ ತಂಡದೊಂದಿಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹೂದುರು ಶಾಸ್ತ್ರಿಯವರ ಭಾವ ಚಿತ್ರದ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಮೀನಾಕ್ಷಿ ರಾಮಕೃಷ್ಣ, ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಅಬ್ದುಲ್ ಗಾಫೂರ್ ಸಾಬ್, ಪುರಸಭೆ ಸದಸ್ಯರಾದ ರಾಜಾ ಮಹೇಂದ್ರ ನಾಯಕ, ಲಕ್ಷ್ಮಿ ದೇವಿ ನಾಯಕ, ಶರಣಪ್ಪಗೌಡ, ಶರಣಪ್ಪ ಮೇದಾ, ಬಾಷ, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಬಿ.ಕೆ, ಅಂಬರೇಶಪ್ಪ, ರಾಜಾ ಸುಭಾಷಚಂದ್ರ ನಾಯಕ, ಮೂಕಪ್ಪ ಕಟ್ಟಿಮನಿ, ಪುರಸಭೆ ಆರೋಗ್ಯ ನಿರೀಕ್ಷಕರಾದ ಮಹೇಶಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮುಖಂಡರು ಭಾಗವಹಿಸಿದರು.
ಬಾಕ್ಸ್ ನ್ಯೂಸ್:-
ಪಟ್ಟಣದ ಪುರಸಭೆ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಅಂಗವಾಗಿ ಮಹಾತ್ಮ ಗಾಂಧಿಜೀಯವರ ಪುತ್ತಳಿಗೆ ಶಾಸಕ ಹಂಪಯ್ಯ ನಾಯಕ ಮಾಲಾರ್ಪಣೆ ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ