ದಸರಾ ಹಬ್ಬದ ಪ್ರಯುಕ್ತ ತಾಯಿ ಭುವನೇಶ್ವರಿಯ ಭಾವಚಿತ್ರ – ಚಾಲನೆ ನೀಡಿದ ಶಾಸಕರು.
ಮಾನ್ವಿ ಅ.03





ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ದಸರಾ ಹಬ್ಬದ ಪ್ರಯುಕ್ತ ತಾಯಿ ಭುವನೇಶ್ವರಿಯ ಭಾವಚಿತ್ರ ಮೆರವಣಿಗೆ ಚಾಲನೆ ನೀಡಿದ. ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ ಹಂಪಯ್ಯ ನಾಯಕ್ ಸಾಹುಕಾರ್ ಇವರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ತಾಯಿ ಚಾಮುಂಡೇಶ್ವರಿಯು ನಮ್ಮೆಲ್ಲರ ಬಾಳಲ್ಲಿ ಸುಖ ಸಮೃದ್ಧಿ ಆಶೀರ್ವಾದವಿರಲಿ ಎಂದು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್ ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಬಿಕೆ ಅಂಬರೇಶಪ್ಪ ವಕೀಲರು ಸೈಯದ್ ಖಾಲಿದ್ ಖಾದ್ರಿ ಪುರಸಭೆ ಅಧ್ಯಕ್ಷರಾದ ಮೀನಾಕ್ಷಿ ರಾಮಕೃಷ್ಣ ಪುರಸಭೆ ಸದಸ್ಯರುಗಳಾದ ಸಾಬೀರ್ ಪಾಷಾ ಜಯಪ್ರಕಾಶ್ ರೇವಣಸಿದ್ದಯ್ಯ ಸ್ವಾಮಿ ಹೆಚ್ ಬಿ ಎಂ ಬಾಷಾ ಜಿಲಾನಿ ಖುರೇಶಿ ಶರಣಗೌಡ ಗವಿಗಟ್ ಮುಖಂಡರುಗಳಾದ ಸುಭಾಷ್ ಚಂದ್ರ ನಾಯಕ್ ಗುಮ್ಮ ಬಸರಾಜ್ ವಕೀಲರು ಎಬಿ ಉಪ್ಪಳಮಠ ವಕೀಲರು ಹರಿಹರ ಗೌಡ ಅರುಣ್ ಚಂದ ಸಬ್ಜಲ್ಲಿ ಸಾಬ್ ಪುರಸಭೆಯ ವ್ಯವಸ್ಥಾಪಕರಾದ ಈರಣ್ಣ ನೈರ್ಮಲ್ಯ ಅಧಿಕಾರಿಯ ಮಹೇಶ್ ಪುರಸಭೆ ಸಿಬ್ಬಂದಿ ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.


ಬನ್ನಿ ಮಂಟಪದಲ್ಲಿ ಶಾಸಕರದ ಜಿ ಹಂಪಯ್ಯ ನಾಯಕ್ ಸಾಹುಕಾರ್ ಇವರಿಗೆ ಮಾಜಿ ಶಾಸಕರದ ರಾಜಾ ವೆಂಕಟಪ್ಪ ನಾಯಕ ಅವರು ಬನ್ನಿಯನ್ನು ವಿನಿಮಯ ಮಾಡಿ ಕೊಂಡರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ