ಕಾನ ಹೊಸಹಳ್ಳಿ ಪೋಲಿಸ್ ಠಾಣೆಯಲ್ಲಿ – ಆಯುಧ ಪೂಜೆ.
ಕಾನ ಹೊಸಹಳ್ಳಿ ಅ.04





ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಯುಧ ಪೂಜೆ ನಡೆಸಲಾಯಿತು. ದಿನಂ ಪ್ರತಿ ಖಾಕಿ ಬಟ್ಟೆಯಲ್ಲಿ ಜಬರ್ದಸ್ತ್ ಆಗಿ ಕಾಣುತ್ತಿದ್ದ ಪೊಲೀಸರು ಬುಧವಾರ ಸಂಜೆ ಸಾಂಪ್ರದಾಯಿಕ ಶೈಲಿಯ ಬಿಳಿ ಧಿರಿಸನ್ನು ತೊಟ್ಟು ಮಿಂಚಿದರು. ಬಿಳಿ ಪಂಚೆ, ಬಿಳಿ ಶರ್ಟ್‌ನಲ್ಲಿ ಕಂಗೊಳಿಸಿದರು. ಠಾಣೆಯಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದರು. ವಾಹನಗಳು, ರಿವಾಲ್ವಾರ್, ಬಂದೂಕುಗಳನ್ನು ಅಲಂಕಾರ ಗೊಳಿಸಿ ಪೂಜಾ ಕೈಂಕರ್ಯ ನೆರವೇರಿಸಿದರು. ಪೂಜೆಯ ಬಳಿಕ ಸಿಬ್ಬಂದಿ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿ ಕೊಂಡರು. ಈ ಸಂದರ್ಭದಲ್ಲಿ ಠಾಣೆಯ ಪಿ.ಎಸ್.ಐ ಸಿದ್ರಾಮ ಬಿದರಾಣಿ, ಎ.ಎಸ್.ಐ ಮಲ್ಲೇಶ, ಜಿಲಾನ್ ಬಾಷಾ ಎಸ್.ಕೆ, ದತ್ತಾತ್ರೇಯ, ಗುರುಬಸವರಾಜ ಹಾಗೂ ಸಿಬ್ಬಂದಿಗಳಾದ ನಾಗವೇಣಿ ಹೆಚ್.ಎನ್, ಕಲ್ಲೇಶಪ್ಪ ಪೂಜಾರ್, ಬಿ ಕೃಷ್ಣಪ್ಪ, ಮಂಜುನಾಥ್ ಬಿ.ಎಸ್, ಜಗದೀಶ, ಸುರೇಶ್ ಯು, ಜ್ಯೋತಿ ಜಿ, ವಿಜಯಕುಮಾರ, ಗೌಡ್ರ ರವಿಚಂದ್ರ, ನಟರಾಜ, ಸುರೇಶ ಎನ್.ಜಿ, ಸ್ವಾಮಿ ಎನ್.ಎಂ, ಕಲ್ಲೇಶ ಎಂ, ತಿಪ್ಪೇರುದ್ರ, ಕೊಟ್ರೇಶ್ ಅಂಗಡಿ, ಸಿದ್ದಲಿಂಗಪ್ಪ, ಪಾರ್ವತಮ್ಮ ಹೆಚ್, ತಿಪ್ಪೇಸ್ವಾಮಿ ಬಿ, ಸಂದೀಪ ಎಂ, ಶ್ರೀನಿವಾಸ ಎಸ್, ನಾಗೇಶ, ವೀರೇಶ್, ವೀಣಾ ಜಿ.ಕೆ ಬಸವರಾಜ ಎ.ಜಿ, ಚೈತನ್ಯ ಆರ್, ರೂಪಾ ಬಾಯಿ ಸೇರಿದಂತೆ ಮುಖಂಡರು, ಠಾಣೆಯ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ