ಗ್ರಾಮದಲ್ಲಿ ನಾಡ ದೇವತೆ ಉತ್ಸವ – ಅದ್ದೂರಿಯಾಗಿ ಜರುಗಿತು.
ಗುಬ್ಬೆವಾಡ ಅ.04





ಸಿಂದಗಿ ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿನಡೆದ ನಾಡ ದೇವಿ ಉತ್ಸವ ಕಾರ್ಯಕ್ರಮದ ಅಂಗವಾಗಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾದ ಶ್ರೀ ಸಿದ್ದಪ್ಪ ಕಾರಿಮುಂಗಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸುಮಿತ್ರಾ ಸಿದ್ದಪ್ಪ ಕಾರಿಮುಂಗಿ ದಂಪತಿಗಳಿಂದ ನಾಡ ದೇವಿಗೆ ಭಕ್ತಿ ಭಾವದಿಂದ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿ ನಂತರ ಅನ್ನ ದಾಸೋಹ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ನೆರವೇರಿತು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಡ ದೇವಿ ಉತ್ಸವ ಸಮಿತಿ ಗುಬ್ಬೇವಾಡ ಇವರ ವತಿಯಿಂದ ನಾಡ ದೇವಿ ಪುರಾಣ ಕಾರ್ಯಕ್ರಮ ಮತ್ತು ಗ್ರಾಮದ ಮುದ್ದು ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮಗಳು ಜರುಗಿದವು.

ಮತ್ತು ತುಂಬಾ ವಿಶೇಷವಾಗಿ ಎಸ್.ಎಸ್.ಎಲ್.ಸಿ ಯಲ್ಲಿ ಮತ್ತು ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸಿದ್ದು ತುಂಬಾ ವಿಶೇಷವಾಗಿತ್ತು.

ಮತ್ತು ಈ ವರ್ಷ ಸರ್ಕಾರಿ ನೌಕರಿಯಿಂದ ವಯೋ ನಿವೃತ್ತಿ ಹೊಂದಿದ ಶಿಕ್ಷಕರನ್ನು ಕೂಡ ಸನ್ಮಾನಿಸಿ ಗೌರವಿಸಿದ್ದು ತುಂಬಾ ವಿಶೇಷವಾಗಿತ್ತು.

ಮತ್ತು ಗ್ರಾಮದ ಗಣ್ಯ ಮಾನ್ಯರಿಗೆ ಸನ್ಮಾನಿಸಿ ಗೌರವಿಸಿದ್ದು ಕೂಡ ತುಂಬಾ ವಿಶೇಷವಾಗಿತ್ತು. ಒಟ್ಟಾರೆಯಾಗಿ ಹೇಳ ಬೇಕೆಂದರೆ ಮೈಸೂರು ದಸರಾ ಗುಬ್ಬೇವಾಡ ಗ್ರಾಮದಲ್ಲಿ ಜರುಗಿತು ಎಂದರೆ ತಪ್ಪಾಗಲಾರದು.
ಈ ಕಾರ್ಯಕ್ರಮದಲ್ಲಿ ಊರಿನ ಎಲ್ಲಾ ಹಿರಿಯರು ತಾಯಂದಿರು ಯುವಕರು ಮಾಜಿ ಸೈನಿಕರು ಪ್ರಗತಿಪರ ರೈತರು ಮುದ್ದು ಮಕ್ಕಳು ಭಾಗವಹಿಸಿದ್ದು ತುಂಬಾ ವಿಶೇಷವಾಗಿತ್ತು.
ನಾಡ ದೇವಿ ಉತ್ಸವ ಸಮಿತಿಯ ಅಧ್ಯಕ್ಷರು ಶಿವಗಣಯ್ಯ ಕೊಂಡಗೂಳಿ. ಪಿ.ಕೆ.ಪಿ.ಎಸ್ ಮಾಜಿ ಅಧ್ಯಕ್ಷರು ದೇವೇಂದ್ರ ಬಡಿಗೇರ್. ಪಿ.ಕೆ.ಪಿ.ಎಸ್ ಮ್ಯಾನೇಜರ್ ರಮೇಶ್.ಮ ಈಜೇರಿ. ನಾಡ ದೇವಿ ಉತ್ಸವ ಸಮಿತಿ ಖಜಾಂಚಿ ಬಸವರಾಜ್ ನರುಣಿ. ನಾಡ ದೇವಿ ಉತ್ಸವ ಸಮಿತಿ ಸಂಚಾಲಕರು ಕೆ.ಕೆ.ಆರ್.ಟಿ.ಸಿ ನಿವೃತ್ತ ನೌಕರರು ಆದ ಈರಣ್ಣ.ಸಿ ಹುಬ್ಬಳ್ಳಿ. ಗುಬ್ಬೇವಾಡ ಗ್ರಾಮದ ಗುರು ಹಿರಿಯರು ಹಾಗೂ ಸಮಸ್ತ ಸದ್ಭಕ್ತ ಮಂಡಳಿ ಹಾಗೂ ಅಕ್ಕ ಪಕ್ಕದ ಗ್ರಾಮದ ಸಮಸ್ತ ಸದ್ಭಕ್ತ ಮಂಡಳಿ ಪಾಲ್ಗೊಂಡು ತುಂಬಾ ಭಕ್ತಿ ಭಾವದಿಂದ ನಾಡ ದೇವಿ ಉತ್ಸವ ಹಾಗೂ ಸಾಂಸ್ಕೃತಿಕ ಚಟುವಟಿಕೆಯ ಕಾರ್ಯಕ್ರಮಗಳು ತುಂಬಾ ಅಚ್ಚುಕಟ್ಟಾಗಿ ಜರುಗಿದವು.
ವರದಿ:ಶ್ರೀಶೈಲ್.ಗೊರಗುಂಡಗಿ