ಶ್ರೀ ಅಂಬಾ ಭವಾನಿ ದೇವಿ ನವರಾತ್ರಿ ಉತ್ಸವ ನಿಮಿತ್ತವಾಗಿ – ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರಗಿತು.
ದೇವಣಗಾಂವ ಅ.04





ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ಸೇವಾ ಸಮೀತಿ ವತಿಯಿಂದ ಶ್ರೀ ಅಂಬಾ ಭವಾನಿ ದೇವಿ ನವರಾತ್ರಿ ಉತ್ಸವ ನಿಮಿತ್ಯವಾಗಿ ಮುತ್ತೈದೆಯರಿಗೆ ಊಡಿ ತುಂಬಿವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಜರುಗಿತು.
ಈ ಮುತ್ತೈದೆಯರಿಗೆ ಊಡಿ ತುಂಬುವ ಕಾರ್ಯಕ್ರಮದಲ್ಲಿ 300 ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಪಾಲ್ಗೊಂಡಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನವರಾತ್ರಿ ಉತ್ಸವ ಸಲುವಾಗಿ 9 ದಿನಗಳ ಕಾಲ ಶ್ರೀದೇವಿ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಪುರಾಣ ವಚನಕಾರದ ಶಿವಬಸಯ್ಯ ಸ್ವಾಮಿ ಹಿರೇಮಠ ಶಾಸ್ತ್ರಿಗಳು ಕುಕನೂರು ಪೂರಾಣ ನಡೆಸಿ ಕೊಟ್ಟರು. ಅದೇ ರೀತಿಯಾಗಿ ಸಂಗೀತ ಕಾರ್ಯಕ್ರಮವನ್ನು ಲಕ್ಷ್ಮಿಕಾಂತ ವಿಶ್ವಕರ್ಮ ನಡೆಸಿ ಕೊಟ್ಟರು ಮತ್ತು ತಬಲವಾದಕರಾಗಿ ಜಗದೀಶ ಕಲ್ಲೂರ ವಹಿಸಿದ್ದರು.
ಈ ನವರಾತ್ರಿ ಉಸ್ತವ ಪುರಾಣ ಮಹಾ ಮಂಗಲ ಕಾರ್ಯಕ್ರಮದಲ್ಲಿ ಚಿಣಮಗೆರಿಯ ಶ್ರೀ ವೀರಮಹಾಂತ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿಕೊಂಡು ಮಾತನಾಡಿದ ಶ್ರೀಗಳು. ದೇಶ ಕಾಯೋ ಯೋಧನಿಗೆ ಅನ್ನ ಕೊಡುವ ರೈತನಿಗೆ ಯಾವುದೇ ಕಷ್ಟಗಳು ಬರದಿರಲಿ ಬಂದಿರುವ ಕಷ್ಟಗಳನ್ನು ನೀಗಿಸುವ ಶಕ್ತಿಯನ್ನು ಶ್ರೀ ಅಂಬಾಭವಾನಿ ಹಾಗೂ ವೀರ ಮಹಾಂತ ಶಿವಾಚಾರ್ಯರು ಆಶೀರ್ವಾದಿಸಲಿ ಎಂದು ಹಾರೈಸಿದರು.
ಹಾಗೂ ಮುತ್ತೈದೆಯರಿಗೆ, ಭಕ್ತರಿಗೆ ಅನ್ನ ಪ್ರಸಾದ ಸೇವೆಯನ್ನು ಭಗವಂತ ಅಮ್ಮಾನೆ ಮಾಡಿದರು. ಈ 9 ದಿನಗಳ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿ ಸೇವಾ ಸಮಿತಿ ಸದಸ್ಯರು ಹಾಗೂ ಊರಿನ ಹಿರಿಯರು ಯುವಕರು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹೀರೆಮಠ ಆಲಮೇಲ