ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿದ – ಶಾಸಕ ರಾಜುಗೌಡ ಪಾಟೀಲ.
ವಿಜಯಪುರ ಅ.04





ವಿಜಯಪುರ ಜಿಲ್ಲೆಯ 12 ತಾಲೂಕಗಳು ಹೊಂದಿದ ನಮ್ಮ ಜಿಲ್ಲೆಗೆ ಒಂದು ಸರಕಾರಿ ವೈದ್ಯಕೀಯ ಕಾಲೇಜ ಸ್ಥಾಪನೆ ಆಗಬೇಕು ಮುಂಬರುವ ಅಧಿವೇಶನದಲ್ಲಿ ನಾನು ಸರಕಾರದ ಮೇಲೆ ಒತ್ತಡ ಹಾಕುತ್ತೇನೆ ಎಂದ ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಯವರು ಹೇಳಿದರು. ವಿಜಯಪುರದ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತದ ಹತ್ತಿರ ಸರಕಾರಿ ವೈದ್ಯಕೀಯ ಕಾಲೇಜ ಸ್ಥಾಪನಾ ಸಮಿತಿಯವರು ವತಿಯಿಂದ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು.

ನಮ್ಮ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದರಿಂದ ಹಾಗೂ ವೈದ್ಯಕೀಯ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಿಗೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುತ್ತದೆ ಕಾಲೇಜು ಸ್ಥಾಪನೆ ಅತ್ತೀ ಅವಶ್ಯಕತೆ ಇದೆ ನಾನು ಸರಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಧರಣಿ ಸತ್ಯಾಗ್ರಹದ ಹೋರಾಟದ ಅರವಿಂದ ಕುಲಕರ್ಣಿ ಶ್ರೀನಾಥ್ ಪೂಜಾರಿ ಸುರೇಶ ಬಿಜಾಪುರ ಹಾಗೂ ಮುಖಂಡರಾದ ನಿಂಗನಗೌಡ ಸೋಲಾಪುರ ಹಾಗೂ ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.
ತಾಲ್ಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ