ನೆರೆ ಪೀಡಿತ ಪ್ರದೇಶಗಳಿಗೆ ಬಿಜೆಪಿ – ನಿಯೋಗ ಭೇಟಿ.
ಆಲಮೇಲ ಅ.05





ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಹಾಗೂ ದಕ್ಷಿಣದ ಮಲೆನಾಡು ಭಾಗದಲ್ಲಿ ಪ್ರವಾಹ ಹಾಗೂ ಮಳೆಯಿಂದ ಜನರು, ರೈತರು ಸಂಕಷ್ಟದಲ್ಲಿದ್ದಾರೆ.ಹಬ್ಬವನ್ನು ನವರಾತ್ರೀ ಮಾಡದೇ ರಾತ್ರೀ ಗಂಜಿ ಕೇಂದ್ರದಲ್ಲಿ ಕಳೆಯುವ ಪರಿಸ್ಥಿತಿ ಇದೆ, ಆದರೆ ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ.ನಿದ್ದೆ ಮಾಡುವ ಹಾಗೂ ಮಂತ್ರಿಗಳು ಸಹಿತ ಜನರು ಸಮಸ್ಯೆ ಆಲಿಸಿಲ್ಲ ಉಳಿದ ಮಂತ್ರಿಗಳು ಹುಡುಕಿ ಕೊಡಿ ಎಂಬ ಪರಿಸ್ಥಿತಿ ಇದೆ. ಪರಿಹಾರ ಕೊಡುತ್ತೇನೆ ಎಂದು ಹೇಳುವರು ಯಾರೂ ಬಂದಿಲ್ಲ.
ಆಫಿಸರ್ ಗಳು ಸಹಿತ ಹೊಲಗಳಿಗೆ ಬಂದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಪರಿಹಾರದ ವಿಚಾರ ಮಾದ್ಯಮದಲ್ಲಿ ಬಂದಿದೆ ಆದರೆ ಪೀಲ್ಡ್ ನಲ್ಲಿ ಕಾಣುತ್ತಿಲ್ಲ. ನಾನು ಸರ್ಕಾರಕ್ಕೆ ನೇರ ಸವಾಲು ಹಾಕುವೆ. ಬಿಜೆಪಿಗಿಂತ ನಾವು ಬಡವರ ಪರ ರೈತರ ಪರ ಎಂದು ಹೇಳುವ ನೀವು. ಈಗ ಸವಾಲು ಹಾಕಿ.ಯಡಿಯೂರಪ್ಪ ನವರಿದ್ದಾಗ ಎಷ್ಟು ಕೊಟ್ಟರು ನೀವೆಷ್ಟು ಕೊಡುತ್ತಿದ್ದೀರಾ ಅದನ್ನು ಹೇಳಿ. ಪ್ರಾಮಾಣಿಕವಾಗಿ ಈ ವಿಚಾರ ಹೇಳಿ. ಕೇಂದ್ರ ಸರ್ಕಾರ ಕೊಟ್ಟಿಲ್ಲ, ಎಂ.ಪಿ ಗಳು ಏನು ಮಾಡುತ್ತಿದ್ದಾರೆ ಎಂದು ಹೇಳುತ್ತೀರಿ.ನಮ್ಮ ಎಂ.ಪಿ ಗಳು ನಿರಂತರವಾಗಿ ಸುತ್ತುತ್ತಿದ್ದಾರೆ.ನಮಗೆ ಜನ ಎಲ್ಲೆಡೆ ಕರೆದುಕೊಂಡು ಹೋಗುತ್ತಿದ್ದಾರೆ.ಸೂರ್ಯಕಾಂತಿ ಸಂಪೂರ್ಣವಾಗಿ ಕಪ್ಪಾಗಿದೆ, ಈರುಳ್ಳಿ ಕಿತ್ತಿ ಬೀಸಾಕಿದ್ದಾರೆ.
ಹತ್ತಿ ನೀರಲ್ಲಿ ತೇಲಿ ಹೋಗುತ್ತಿದೆ. ಪ್ರಕೃತಿ ವಿಕೋಪ ಎಂದು ಕೆಲ ಮಂತ್ರಿಗಳು ಹೇಳುತ್ತಾರೆ. ನಾವು ಮನೆ ಬಿದ್ದರೆ 5 ಲಕ್ಷ ಕೊಟ್ಟಿದ್ದೇವು, ನೀವೆಷ್ಟು ಕೊಟ್ಟೀರಿ 1 ಲಕ್ಷ 20 ಸಾವಿರ.

ಪಾರ್ಷಿಯಲ್ ಮನೆ ಬಿದ್ದರೆ ನಾವು ಮೂರು ಲಕ್ಷ. ನಾವು ಕೊಟ್ಟರೆ ನೀವು 50 ಸಾವಿರ ಕೊಡುತ್ತಿದ್ದೀರಾ. ಮೋದಿ ಬಜೆಟ್ ವಿಚಾರವಾಗಿ ಮಾತುನಾಡುವ ನೀವು ನಿಮ್ಮ ಬಜೆಟ್ ಕೂಡಾ ಹೆಚ್ಚಾಗಿದೆ.
ನೀವು ಕೂಡಾ ಹೆಚ್ಚಿನ ಪರಿಹಾರ ಕೊಡಿ. ಸರ್ಕಾರ ಬದುಕಿದ್ದರೆ ರೈತರ ಪರವಾದ ಕೆಲಸ ಮಾಡಿ. ಸಂತೋಷ ಹಡಪದ ಎಂಬಾತ ದೋಣಿಯಲ್ಲಿ ಕೊಚ್ಚಿ ಹೋದರೆ ಇನ್ನೊರ್ವ ಮೊಸಳೆಗೆ ಬಲಿಯಾಗಿದ್ದಾನೆ. ಈ ಸರ್ಕಾರ ಅವರ ಕುಟುಂಬಕ್ಕೆ ಪರಿಹಾರ ಕೊಡುತ್ತಿಲ್ಲ. ಸರ್ಕಾರ ಕೊಡಬೇಕಾಗಿದ್ದು ಐದು ಗ್ಯಾರಂಟಿ ಅಲ್ಲ, 50 ಗ್ಯಾರಂಟಿ ಕೊಡಿ ನಮ್ಮದೇನು ಸಮಸ್ಯೆ ಇಲ್ಲ. ಗ್ಯಾರಂಟಿಗೆ ನಾವು ವಿರೋಧಿಗಳಲ್ಲ. ಆ ಹೆಸರು ಹೇಳಿಕೊಂಡು ರೈತರಿಗೆ ಪರಿಹಾರ ಕೊಡದೇ ಇರುವುದು ಎಷ್ಟು ಸೂಕ್ತ. ಬೆಳೆ ಹಾನಿಯಾಗಿದೆ ಪರಿಹಾರ ಕೊಡಿ ಎಂದು ಯಾರಾದರೂ ಕೇಂದ್ರ ಮಂತ್ರಿಗಳಿಗೆ ಕೇಳಿದ್ದೀರಾ ಅಲ್ಲಿಗೆ ಹೋಗಲು ಆಗದಿದ್ದರೆ ಇಲ್ಲೆ ಇರುವ ಪ್ರಹ್ಲಾದ್ ಜೋಶಿ, ಕುಮಾರಸ್ವಾಮಿ, ಸೋಮಣ್ಣ ಅವರಿಗೆ ಕೊಡಬಹುದಿತ್ತು.ಜನರ ಪಾಲಿಗೆ ಈ ಸರ್ಕಾರ ಸತ್ತೋಗಿದೆ. ಸಿದ್ದರಾಮಯ್ಯ ನವರು ವೈಮಾನಿಕ ಸಮಿಕ್ಷೆ ಮಾಡಲು ಕಾರಣ ಗುಂಡಿ ಬಿದ್ದ ರಸ್ತೆಗಳಲ್ಲಿ ಓಡಾಡಲು ಆಗಲ್ಲ ಎಂದು. ಸಿ.ಎಂ ಎಸ್ಕೇಪ್ ಆಗುತ್ತಿದ್ದಾರೆ.
ಸಿ.ಎಂ ಅವರಿಗೆ ನವ್ಹಂಬರ್ ನಲ್ಲಿ ಶನಿಕಾಟ ಶುರುವಾಗತ್ತೆ.ಅವರಿಗೆ ಡಿ.ಕೆ.ಶಿ, ಎಂ.ಬಿ ಪಾಟೀಲ, ಪರಮೇಶ್ವರ ಅವರ ಕಾಟ ಶುರುವಾಗತ್ತೆ. ಹೀಗಾಗಿ ಅವರು ರೈತರಿಗೆ ಕಾಟ ಕೊಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ. ಭೀಮಾ ತೀರದ ಪ್ರವಾಹ ಪೀಡಿತ ಸ್ಥಳಗಾಳಿಗೆ ಹಾಗೂ ದೇವಣಗಾವ ಸೇತುವೆ ವೀಕ್ಷಿಸಿ ನಂತರ ಅತಿವೃಷ್ಟಿಯಿಂದ ಹಾಗೂ ಭೀಮಾ ನದಿಯ ಪ್ರವಾಹದಿಂದ ತತ್ತರಿಸಿರುವ ಗ್ರಾಮಗಳಾದ ಕಡ್ಳೆವಾಡ ಕುಮಸಿಗಿ ಗ್ರಾಮಗಳಿಗೆ ಭೇಟಿ ನೀಡಿ ಹಾನಿಯಾದ ತೊಗರಿ ಹತ್ತಿ ಕಬ್ಬು ಉಳ್ಳಾಗಡ್ಡಿ ಸೂರ್ಯಕಾಂತಿ ಇನ್ನಿತರ ಬೆಳೆಗಳನ್ನು ಅತಿವೃಷ್ಟಿಯಿಂದ ಹಾಗೂ ಭೀಮಾ ನದಿಯ ಪ್ರವಾಹದಿಂದ ಸಂಪೂರ್ಣ ಬೆಳೆಗಳನ್ನು ಹಾಳಾಗಿರುವುದು ವೀಕ್ಷಿಸಿದರು ರೈತರಿಗೆ ಸರಕಾರದಿಂದ ಬರತಕ್ಕಂತಹ ಪರಿಹಾರವನ್ನು ರೈತರಿಗೆ ಕುಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರ ಜಮೀನುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಕಟಕ್ಕೆ ಒಳಗಾದ ರೈತರಿಂದ ಮನವಿ ಸ್ವೀಕರಿಸಿದರು ನಂತರ ರೈತರ ವಿಷಯದಲ್ಲಿ ಸರ್ಕಾರ ರಾಜಕೀಯ ಮಾಡದೆ ಹಿತ ರಕ್ಷಣೆ ಕಾಪಾಡಲು ಅಗತ್ಯ ನೆರವು ನೀಡುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಂಸದರಾದ ಶ್ರೀ ರಮೇಶ ಜಿಗಜಿಣಗಿ ಪಿ.ಸಿ ಗದ್ದಿಗೌಡರ್. ಮಾಜಿ ಸಚಿವರಾದ ಎಸ್.ಕೆ ಬೆಳ್ಳುಬ್ಬಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ಎನ್.ರವಿಕುಮಾರ್. ರೈತ ಮೋರ್ಚಾ ರಾಜ್ಯದ ಅಧ್ಯಕ್ಷರಾದ ಶ್ರೀ ಎ.ಎಸ್ ನಡಹಳ್ಳಿ ಶ್ರೀ ರಮೇಶ ಭೂಸನೂರ್ ಮಾಜಿ ಶಾಸಕರು ಸಿಂದಗಿ. ಗುರುಲಿಂಗಪ್ಪ ಅಂಗಡಿ ಜಿಲ್ಲಾ ಅಧ್ಯಕ್ಷರು ವಿಜಯಪುರ ಶ್ರೀ ಉಮೇಶ್ ಕಾರಜೋಳ ಬಿಜೆಪಿ ಮುಖಂಡರು ಶ್ರೀ ಕಾಸುಗೌಡ ಬಿರಾದಾರ ಬಿಜೆಪಿ ಮುಖಂಡರು ಶ್ರೀ ಸಂಜೀವ್ ಐಹೊಳೆ ಶ್ರೀ ಆರ್.ಎಸ್ ಪಾಟೀಲ್ ಕುಚಬಾಳ್ ಬಿಜೆಪಿ ಮುಖಂಡರು ಶ್ರೀ ಸಂತೋಷ್ ಪಾಟೀಲ್ ಡಂಬಳ ಬಿಜೆಪಿ ಮಂಡಲ ಅಧ್ಯಕ್ಷರು ಸಿಂದಗಿ ಶ್ರೀ ಗುರು ತಳವಾರ ಸಿಂದಗಿ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ರಾಜಕೀಯ ಮುಖಂಡರ ರೈತರು ಭಾಗಿಯಾಗಿದ್ದಾರೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಸೂಕ್ತ ಬಂದೋಬಸ್ತ್ ನೀಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ