ಶ್ರೀ ಮಲ್ಲಯ್ಯ ರಾವುತರಾಯ ಜಾತ್ರಾ – ಮೊಹೋತ್ಸವ ಜರುಗಿತು.
ದೇವರ ಹಿಪ್ಪರಗಿ ಅ.04





ಅಖಿಲ ಕೋಟಿ ಭ್ರಮಾಂಡ ನಾಯಕ ಕಲಾ ವೈಭವ ಬಂಡಾರದ ಒಡೆಯ ಶ್ರೀ ರಾವುತರಾಯ ಮಲ್ಲಯ್ಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಮೆರವಣಿಗೆ ಬಂಡಿ ರಥೋತ್ಸವ ನಗರ ಪಟ್ಟಣದ ರಾವುತರಾಯ ದೇವಸ್ಥಾನ ದಿಂದ ಶ್ರೀ ಮಲ್ಲಯ್ಯ ದೇವಸ್ಥಾನದ ವರೆಗೆ ಸಕಲ ವಾದ್ಯ ಮೇಳ ಡೊಳ್ಳು ಭಾಜ ಭಜಂತ್ರಿ ಸಾವಿರಾರು ಭಕ್ತ ಸಮೂಹ ಮತ್ತು ಸುಮಂಗಲೆಯರಿಂದ ಕಳಸಗಳೊಂದಿಗೆ ಮಲ್ಲಯ್ಯನ ದೇವಸ್ಥಾನದ ವರೆಗೆ ರಥೋತ್ಸವ ನಡೆಯಿತು.

ಇತಿಹಾಸ ಪ್ರಸಿದ್ದ ಐತಿಹಾಸಿಕ ಹಿನ್ನಲೆ ಪರಂಪರೆಯಿಂದ ನಡೆದು ಕೊಂಡ ಬಂದ ಶ್ರೀ ಕಲಿಯುಗದ ಮಾರ್ತಾಂಡ. ಶ್ರೀ ರಾವುತ ರಾಯ ಮಹಾರಾಜರ ಜಾತ್ರಾ ಮಹೋತ್ಸವವು ಒಂದು ಪೌರಾಣಿಕ ಹಿನ್ನಲೆ ಕಥೆಯುಳ್ಳ ಶ್ರೀ ಗಂಗಿ ಮಾಳಮ್ಮ.

ದೇವಿ ಜೊತೆ ಶ್ರೀ ರಾವುತರಾಯ ವಿವಾಹ ಮಹೋತ್ಸವ ಏಳು ಕೋಟಿ ಜನ ಕುಡಿದಾಗ ಲಗ್ನ ನೆರವೇರುವುದು ಕಥಾ ಇತಿಹಾಸ ಸುಮಾರು 5 ನೂರು ವರ್ಷಗಳ ಅನಾದಿ ಕಾಲದಿಂದಲೂ ಇದು ವರೆಗೂ ನಡೆದು ಬಂದ ಭಕ್ತಿ ಭಾವ ಜಾತ್ರಾ ಮಹೋತ್ಸವವು.

ಏಳು ಕೋಟಿ ಏಳು ಏಳು ಕೋಟಿಗೆ ಎನ್ನುವ ವೇದ ಘೋಷಯೊಂದಿಗೆ. ರಾವುತಾರಾಯ ಮಲ್ಲಯ್ಯನ ದೇವಸ್ಥಾನದಲ್ಲಿ ಬಂದು 5 ದಿನಗಳ ವರೆಗೆ ಜಾತ್ರೆ ನಡೆದು ಭಕ್ತರಿಂದ ಸಕ್ಕರಿ ಲೋಭಾನ್ ಸ್ವೀಕರಿಸಿ ಮತ್ತೆ ರಾವುತರಾಯ ದೇವಸ್ಥಾನಕ್ಕೆ ಹಿಂದಿರುಗುತ್ತಾನೆ.

ಈ ಬಾರಿ ಮಲ್ಲಯ್ಯನ ದೇವಸ್ಥಾನದ ಕಮೀಟಿ ದೇವಸ್ಥಾನದ ಸ್ವಚ್ಛತೆ ಮತ್ತು ಬಂದ ಭಕ್ತಾಧಿಗಳಿಗೆ ಯಾವದೇ ಅನಾನುಕೂಲವಾಗದಂತೆ.

ವ್ಯವಸ್ಥೆ ಮಾಡಿದ್ದು ಭಕ್ತಾದಿಗಳು ಶ್ಲಾಘನೀಯ ಹೇಳಿದ್ದಾರೆ. ದೇವಸ್ಥಾನ ಕಮೀಟಿಯ ಬಗ್ಗೆ ಭಕ್ತಾಧಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಚಿದಾನಂದ.ಬಿ ಉಪ್ಪಾರ ಸಿಂದಗಿ