ಪ್ರತಿಯೊಬ್ಬರು ಕೂಡ ಲಿಂಗ ಧೀಕ್ಷೆಯನ್ನು ಪಡೆದು ಲಿಂಗ ಪೂಜೆಯನ್ನು ಮಾಡಿ ಕೊಳ್ಳಬೇಕು – ಶ್ರೀ ಶೈಲ ಜಗದ್ಗರುಗಳು.
ಮಾನ್ವಿ ಅ.05





ಪಟ್ಟಣದ ಶ್ರೀ ಕಲ್ಮಠದ ಆವರಣದಲ್ಲಿನ ಗುರು ಭವನದಲ್ಲಿ ಶ್ರೀ ಕಲ್ಮಠ ದಸರಾ ಸುವರ್ಣ ಮಹೋತ್ಸವ ಅಂಗವಾಗಿ ಶನಿವಾರ ಶ್ರೀಶೈಲಂ ಶ್ರೀಶೈಲ ಮಹಾ ಪೀಠದ ಜಗದ್ಗರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಭಗವತ್ಪಾದಂಗಳವರು ಇಷ್ಟಲಿಂಗ ಮಹಾ ಪೂಜೆಯನ್ನು ನೆರವೇರಿಸಿ ಆರ್ಶೀವಚನ ನೀಡಿ ನಮ್ಮ ವೀರಶೈವ ಧರ್ಮದಲ್ಲಿ ತಾಯಿ ಗರ್ಭದಲ್ಲಿನ ಗರ್ಭಸ್ಥ ಶಿಶುವಿಗೂ ಕೂಡ ಲಿಂಗಾಧೀಕ್ಷೆಯ ಸಂಸ್ಕಾರವನ್ನು ನೀಡುವ ಪರಂಪರೆ ಇದೆ ಅದ್ದರಿಂದ ಪ್ರತಿಯೊಬ್ಬರು ಕೂಡ ಹುಟ್ಟಿನಿಂದ ಸಾಯುವ ವರೆಗೂ ನಮೋಂದಿಗೆ ಇರುವ ಲಿಂಗವನ್ನು ಗುರುಗಳಿಂದ ಪಡೆದು ಪೂಜಿಸ ಬೇಕು. ಇಷ್ಟಲಿಂಗ ಪೂಜೆಯಿಂದ ಶಿವ ಮತ್ತು ಶಕ್ತಿಯನ್ನು ಹಾಗೂ ಇಡೀ ಬ್ರಹ್ಮಾಂಡವನ್ನು ಪೂಜಿಸುವ ಯೋಗ ವೀರಶೈವ ಲಿಂಗಾಯತ ಸಮಾಜಕ್ಕೆ ಇದೆ. ಆದ್ದರಿಂದ ಪ್ರತಿಯೊಬ್ಬರು ಕೂಡ ಲಿಂಗ ಧೀಕ್ಷೆಯನ್ನು ಪಡೆದು ಲಿಂಗ ಪೂಜೆಯನ್ನು ಮಾಡಿ ಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮಿಗಳು ಜಂಗಮ ವಟ್ಟುಗಳಿಗೆ ಅಯ್ಯಚಾರ ಧೀಕ್ಷೆ ಹಾಗೂ ಸಾವಿರಾರು ಸರ್ವ ಜನಾಂಗದವರಿಗೆ ಹಾಗೂ ಹೆಣ್ಣು ಮಕ್ಕಳಿಗೂ ಕೂಡ ಲಿಂಗ ಧೀಕ್ಷೆಯನ್ನು ನೀಡಿ ಪಂಚಾಕ್ಷರಿ ಪ್ರಣಾವ ಮಂತ್ರವನ್ನು ಭೋದಿಸಿದರು.

ಬೃಹನ್ಮಠ ನೀಲಗಲ್ ಸಂಸ್ಥಾನ ಮಠದ ಶ್ರೀ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಮಹಾ ಸ್ವಾಮಿಗಳು ಸಿಂಧನೂರಿನ ರಂಭಾಪುರಿ ಶಾಖಾ ಮಠದ ಶ್ರೀ ಸೋಮನಾಥ ಶಿವಾಚಾರ್ಯ ಮಹಾ ಸ್ವಾಮಿಗಳು, ಅನ್ನದಾನ ಸ್ವಾಮಿಗಳು ಸೇರಿದಂತೆ ಸಾವಿರಾರು ಭಕ್ತರು ಇಷ್ಟಲಿಂಗ ಮಹಾ ಪೂಜೆಯಲ್ಲಿ ಭಾಗವಹಿಸಿದರು.
ಬಾಕ್ಸ್ ನ್ಯೂಸ್:-
ಪಟ್ಟಣದ ಶ್ರೀ ಕಲ್ಮಠದಲ್ಲಿ ಶ್ರೀಶೈಲಂ ಶ್ರೀಶೈಲ ಮಹಾ ಪೀಠದ ಜಗದ್ಗರು ಡಾ, ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಭಗವತ್ಪಾದಂಗಳವರ ಇಷ್ಟಲಿಂಗ ಮಹಾಪೂಜೆ ನಡೆಯಿತು.
ಬಾಕ್ಸ್ ನ್ಯೂಸ್:-
ಪಟ್ಟಣದ ಶ್ರೀ ಕಲ್ಮಠದಲ್ಲಿ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೆಣ್ಣು ಮಗುವಿಗೆ ಲಿಂಗಧೀಕ್ಷೆಯನ್ನು ನೀಡಿ ಪಂಚಾಕ್ಷರಿ ಪ್ರಣಾವ ಮಂತ್ರವನ್ನು ಭೋದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ