“ಸಮಯಕ್ಕಾದವನೇ ಮಹಾ ದೇವನು”…..

ವಿದ್ಯಗೆ ಗುರು ಬುದ್ಧಿಗೆ ಹೆತ್ತವರು




ಶುದ್ಧತೆಗೆ ಹೃದಯವು ಸ್ವಚ್ಛತೆಗೆ ಮನವು
ಶಕ್ತಿ ಯುಕ್ತಿಗೆ ಸಹೋದರರು
ಭಕ್ತಿ ಮುಕ್ತಿಗೆ ದೈವ ಪ್ರಾರ್ಥನೆ
ಹಾರೈಕೆಗೆ ಅಕ್ಕತಂಗಿಯರು
ಕಕುಲತೆಗೆ ಬಂಧುಗಳು
ಸಹಕಾರಕ್ಕೆ ನೆರೆಹೊರೆಯವರು
ನೋವು ನಲಿವುಗೆ ಸನ್ಮಿತ್ರರು
ಪರಿವರ್ತನೆಗೆ ವಿರೋಧಿಗಳು
ನೆಮ್ಮದಿಗೆ ನಿಷ್ಠೆ ದುಡಿಮೆಯು
ದೂರಾವರ್ತನೆಗೆ ದುಶ್ಚಟಗಳು
ಬಾಳಿಗೆ ಉತ್ತಮ ಜೀವನ ಶೈಲಿ
ನೈಸರ್ಗಿಕ ಫಲವು ಆರೋಗ್ಯದ ಗುಟ್ಟು
ಮುಖದ ನಗುವು ಹರುಷದ ಹೊನಲು
ಊಟದ ಸಮಯದಿ ಬರುವವರು ನಿಜ
ಮಿತ್ರರು
ನಗುವಾಗ ನೋವು ನೆನಪಿಸುವವ ಆಜನ್ಮಶತ್ರು
ನೆಪ ಹೇಳಿ ಪಾರಾಗುವವ ರಕ್ಕಸನು
ಸಮಯಕ್ಕಾದವನೇ ಮಹಾ ದೇವನನು
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ