ಆರ್.ಟಿ.ಪಿ.ಎಸ್ ಯೋಜನಾ ಪ್ರದೇಶದಲ್ಲಿ – ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಯಶಸ್ವಿಯಾಗಿ ಜರುಗಿತು.
ರಾಯಚೂರು ಅ.07





ಇಂದು ಆರ್.ಟಿ.ಪಿ.ಎಸ್ ಯೋಜನಾ ಪ್ರದೇಶದಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಯೋಜನಾ ಪ್ರದೇಶದ ಮುಖ್ಯಸ್ಥರಾದ ಶ್ರೀ ಸೂರ್ಯಕಾಂತ ಆರ್ ಕಬಾಡೆ, ಕಾರ್ಯನಿರ್ವಾಹಕ ನಿರ್ದೇಶಕರು, ಶ್ರೀ ಕೆ.ಕೆ ಕೃಷ್ಣ ರಾಜ್, ಮುಖ್ಯ ಅಭಿಯಂತರು (ಚಾ&ನಿ) ಶ್ರೀ ಶಂಕರ ನಾಯ್ಕ ಮುಖ್ಯ ಅಭಿಯಂತರು (ಇ/ನಿ) ಮಾನವ ಸಂಪನ್ಮೂಲ ಅಧಿಕಾರಿ, ನಿಗಮದ ಅಧಿಕಾರಿಗಳು, ಸಿ.ಐ.ಎಸ್.ಎಫ್ ಅಧಿಕಾರಿ, ಸಿಬ್ಬಂದಿಗಳು ಹಾಗೂ ನಿಗಮದ ಸಂಘ ಸಂಸ್ಥೆಗಳ ಅಧ್ಯಕ್ಷರು/ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು ಎಂದು ವರದಿಯಾಗಿದೆ.