“ನಮ್ಮ ಊರು ನಮ್ಮ ಹೆಮ್ಮೆ” ಗ್ರಂಥ ಲೋಕಾರ್ಪಣೆ ಹಾಗೂ ಗೌರವ ಸನ್ಮಾನ – ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ.
ದೇವರ ಹಿಪ್ಪರಗಿ ಅ.07






“ಸೈನಿಕನೆಲೆ ಪ್ರಕಾಶನ ಬೆಂಗಳೂರು” “ನಮ್ಮ ಊರು ನಮ್ಮ ಹೆಮ್ಮೆ” ಗ್ರಂಥ ಲೋಕಾರ್ಪಣೆ, ಹಾಗೂ ಗೌರವ ಸನ್ಮಾನ ಪ್ರತಿಭಾ ಪುರಸ್ಕಾರ ಸಮಾರಂಭವು, ರವಿವಾರ ದಿನಾಂಕ 12/10/2025 ರಂದು ಮುಂಜಾನೆ 10:00 ಘಂಟೆಗೆ ಶ್ರೀ ಕಲ್ಮೇಶ್ವರ ದೇವಾಲಯ ಮಂಗಲ ಭವನದಲ್ಲಿ ಪೂಜ್ಯ ಶ್ರೀಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ಶ್ರೀ ಸದ್ಗುರು ಭೀಮಾಶಂಕರ ಸ್ವಾಮಿಗಳ ದಿವ್ಯ ಸಾನಿದ್ಯ ವಹಿಸಲಿದ್ದಾರೆ ಹಾಗೂ ಅಧ್ಯಕ್ಷತೆಯನ್ನು ಶ್ರೀ ಮ.ನಿ.ಪ್ರ ಮಡಿವಾಳೇಶ್ವರ ಸ್ವಾಮಿಗಳು ಗದ್ದಿಗಿಮಠ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಗೋಪಾಲ ನಾಯಕ, ಡಾ, ಆರ್.ಆರ್ ಮಣ್ಣೂರ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಶ್ರೀಪ್ರಕಾಶ ಸಿಂದಗಿ ತಹಶೀಲ್ದಾರರು ದೇಹಿ, ಶ್ರೀ ಆರ್.ಆರ್ ಮಣ್ಣೂರ ವಿಶ್ರಾಂತ ತಹಶೀಲ್ದಾರರು, ಶ್ರೀ ನಿತಿನ ಕೃ ನಾಡಗೌಡ ಎನ್.ಟಿ.ಸಿ ಪಿನ್ಲ್ಯಾಂಡ್ ಸಂಸ್ಥಾಪಕರು ಆಗಮಿಸುವರು.”ನಮ್ಮ ಊರು ನಮ್ಮ ಹೆಮ್ಮೆ” ದೇವರ ಹಿಪ್ಪರಗಿಯ ಶ್ರೀಮತಿ ಲಕ್ಷ್ಮೀ ನಾಯಕ ವಿಜಯಲಕ್ಷ್ಮಿ ಮಮೆಟಗಾರ, ಶ್ರೀಯುತ ಶ್ರೀದೇಶಂಸು ಸುರೇಶ ಶಂಕ್ರೆಪ್ಪ ಅಂಗಡಿ ಆರೋಗ್ಯ ನಿರೀಕ್ಷಣಾಧಿಕಾರಿಗಳು ಅಮೀನಗಡ.

ಶ್ರೀಮತಿ ಮುರಗೇಂದ್ರ ವಾಲಿ ಉಪನ್ಯಾಸಕರು ಶ್ರೀಯುತ ದಾನಪ್ಪ ಸಜ್ಜನ ಮಾಜಿ ಯೋಧರು ಇವರಿಗೆ ನಮ್ಮ ಊರು ನಮ್ಮ ಹೆಮ್ಮೆ ದೇವರ ಹಿಪ್ಪರಗಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಗೌರವ ಸಂಪಾದಕರಾದ ಶ್ರೀ ರಾಜೇಂದ್ರ ಕೃ ನಾಡಗೌಡ, “ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಜನಗಳು” ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ಪ್ರಕಾಶಕರಾದ ಶ್ರೀ ನಿತಿನ ಆರ್ ನಾಡಗೌಡ ನೀಡುವರು. ಶ್ರೀ ಸುರೇಶ ಚ ಕುದರಿ, ಸದಾನಂದ ಬಬಲೇಶ್ವರ ಸಂಪಾದಕರು ಸಾಹಿತ್ಯ ಅಭಿಮಾಗಳು ಸನ್ಮಿತ್ರರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಲು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.