ಚಿತ್ರದುರ್ಗದಲ್ಲಿ ಎದ್ದೇಳು ಕನ್ನಡಿಗ, ಕೆ.ಆರ್.ಎಸ್ ಪಕ್ಷ – ಸೇರು ಬಾ ಅಭಿಯಾನ ಯಶಸ್ವಿ.

ಚಿತ್ರದುರ್ಗ ಅ.08

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಎದ್ದೇಳು ಕನ್ನಡಿಗ ಕೆ.ಆರ್.ಎಸ್ ಪಕ್ಷ ಸೇರು ಬಾ ಅಭಿಯಾನ ಯಶಸ್ವಿಯಾಗಿ ನಡೆಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಚಾಲನೆ ನೀಡಿ ಮದಕರಿ ಸರ್ಕಲ್, ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧೀ ವೃತ್ತ, ಗಾಯಿತ್ರಿ ಭವನ ಮೂಲಕ ಪಾದಯಾತ್ರೆ ಮಾಡಿ ಅಭಿಯಾನದ ಕುರಿತು ಜನ ಜಾಗೃತಿ, ಹಾಗೂ ಪಕ್ಷದ ಸದಸ್ಯತ್ವ ಮಾಡುವ ಮೂಲಕ ದೇಣಿಗೆ ಸಂಗ್ರಹಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ.ಆರ್.ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಸೋಮಸುಂದರ ಅವರು ಇತ್ತೀಚಿನ ದಿನಗಳಲ್ಲಿ ಕನ್ನಡಿಗರು ಅನುಭವಿಸುತ್ತಿರುವ ನೋವುಗಳಿಗೆ,ಕಷ್ಟ ಕಾರ್ಪಣ್ಯಗಳಿಗೆ ನಮ್ಮನ್ನು ಆಳುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳು ನೇರವಾಗಿ ಕಾರಣ. ಅವರವರ ಸ್ವಾರ್ಥದ ಮತ್ತು ಕುಟುಂಬದ ರಾಜಕಾರಣದಲ್ಲಿ ರಾಜ್ಯದ ಮತದಾರರನ್ನು ಮೂರ್ಖರನ್ನಾಗಿ ಮಾಡಿ ಜನರನ್ನು ವಂಚಿಸುತ್ತಿದ್ದಾರೆ ಜನಪರವಾದ ಆಡಳಿತ ನಡೆಸ ಬೇಕಾದ ಪಕ್ಷಗಳು ಜಾತಿ ರಾಜಕಾರಣ, ಹಣಬಲದ ರಾಜಕಾರಣದಲ್ಲಿ ತೊಡಗಿಸಿ ಕೊಂಡಿವೆ ಹಾಗಾಗಿ ನಮ್ಮ ಪಕ್ಷವು ಕನ್ನಡ ನಾಡಿನ ನೆಲ, ಜಲ, ಗಡಿ ಭಾಷೆಯ ಉಳಿವಿಗಾಗಿ ಮತ್ತು ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡುವಿಕೆಗಾಗಿ ಒತ್ತಾಯಿಸಿ ಮುಂದಿನ ನವಂಬರ್ ತಿಂಗಳಲ್ಲಿ ಒಂದು ದೊಡ್ಡ ಸಮಾವೇಶ ಆಯೋಜಿಸಲಾಗುತ್ತಿದ್ದು ಸಮಸ್ತ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕೆ.ಆರ್.ಎಸ್ ಪಕ್ಷದ ರಾಜ್ಯ ರೈತ ಘಟಕದ ಅಧ್ಯಕ್ಷ ಶ್ರೀ ಜೋಗನಹಳ್ಳಿ ಗುರುಮೂರ್ತಿ ಅವರು ಮಾತನಾಡಿ ರಾಜ್ಯದಲ್ಲಿ ರೈತರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಕೃಷಿ ಕಾರ್ಮಿಕರಿಗೆ ಉತ್ತಮವಾದ ಜೀವನ ನಿರ್ವಹಣೆಗೆ ಅನುನಕೂಲದ ವಾತಾವರಣ ನಿರ್ಮಾಣವಾಗಿದೆ ಈ ಎಲ್ಲಾ ಅವ್ಯವಸ್ಥೆಗಳನ್ನು ವಿರೋಧಿಸಿ ಪ್ರತಿಯೊಬ್ಬರು ಉತ್ತಮವಾದ ಜನ ಜೀವನ ಮಾಡುವಂತೆ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಜನರಿಗೆ ತಲುಪಿಸಿ ಕನ್ನಡಿಗರನ್ನು ಜಾಗೃತಿ ಮೂಡಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಇದಕ್ಕೆ ಕನ್ನಡಪರ, ರೈತಪರ, ಪ್ರಗತಿಪರ ಸಂಘಟನೆಗಳ ಮುಖಂಡರು, ನಾಯಕರು ಬೆಂಬಲಿಸ ಬೇಕೆಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ್, ಮಹೇಶ್ ನಗರಂಗೆರೆ, ರೈತ ಘಟಕದ ಕಾರ್ಯದರ್ಶಿ ನಿರುಪಾದಿ.ಕೆ ಗೋಮರ್ಸಿ, ಶಿವರಾಜ್ ಕಪಗಲ್, ಜಿಲ್ಲಾ ಮುಖಂಡರಾದ ನಾಗರೆಡ್ಡಿ, ಬಾಲರಾಜು, ಪುಟ್ಟಮ್ಮ, ಅಂಜನಪ್ಪ, ಜಬೀಮುಲ್ಲಾ, ಕೆಂಚಪ್ಪ, ಮಂಜಪ್ಪ, ಕೆಂಚಪ್ಪ ನಾಯಕ, ಕೃಷ್ಣಪ್ಪ, ರಮೇಶ್ ಮಹಿಳಾ ಘಟಕದ ಅಧ್ಯಕ್ಷರಾದ ಪ್ರೇಮ, ಉಪಾಧ್ಯಕ್ಷರಾದ ಮಮತಾ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಖಾ ಕಾರ್ಯದರ್ಶಿಗಳಾದ ಮಂಜುಳ, ಲಕ್ಷ್ಮೀಮ್ಮ, ಸುನೀತಾ, ಮಂಜುಳ, ರತ್ನಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್. ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button