ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಲ್ಲಿ ಬೌದ್ಧಿಕ ಶಕ್ತಿಯ ಪಾತ್ರ ಹಿರಿದು – ಯತೀಶ್.ಎಂ ಸಿದ್ದಾಪುರ ಅನಿಸಿಕೆ.
ಚಳ್ಳಕೆರೆ ಅ.08





ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಲ್ಲಿ ಬೌದ್ಧಿಕ ಶಕ್ತಿಯ ಪಾತ್ರ ಬಹಳ ಹಿರಿದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಹಾಗೂ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆಯನ್ನು ನಡೆಸಿಕೊಟ್ಟ ಅವರು ಸ್ವಾಮಿ ಪುರುಷೋತ್ತಮಾನಂದಜೀ ಮಹಾರಾಜ್ ಅವರು ಬರೆದಿರುವ “ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣ” ಎಂಬ ಪುಸ್ತಕದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.

ಬೌದ್ಧಿಕ ಶಕ್ತಿಯನ್ನು ಅವಧಾನ, ಅಧ್ಯಯನ, ಆಲೋಚನೆ ಮತ್ತು ಪ್ರಾರ್ಥನೆಗಳಿಂದ ವರ್ಧಿಸಿಕೊಳ್ಳಬಹುದು, ಪ್ರಾರ್ಥನೆಯ ಶಕ್ತಿಯ ಪರಿಣಾಮ ಬಹಳ ಅಗಾಧವಾದದ್ದು ಎಂದರು.

ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ, ವೆಂಕಟಲಕ್ಷ್ಮೀ, ಋತಿಕ್ ಕುಮಾರ್, ಚೇತನ್ , ಲೋಹಿತ್, ಜ್ಞಾನೇಶ್ವರಿ, ಸುದೀಪ್, ಸಂತೋಷ್ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.