ಸುಗೂರ.ಎನ್ ಗ್ರಾಮದಲ್ಲಿ ಶ್ರೀ ಭೋಜಲಿಂಗೇಶ್ವರ ಮತ್ತು ಅಂಭಾ ಭವಾನಿ – ಪಲ್ಲಕ್ಕಿ ಉತ್ಸವಕ್ಕೆ ಹರಿದು ಬಂದ ಭಕ್ತ ಸಾಗರ.
ಸುಗೂರ.ಎನ್ ಅ.08





ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಸುಗೂರ ಎನ್ ಗ್ರಾಮದ ಹೊರ ವಲಯದಲ್ಲಿರುವ ಸುಪ್ರ‍್ರಸಿದ್ಧ ಪವಾಡ ಪುರುಷ ಎಂದೇ ಖ್ಯಾತಿ ಪಡೆದ ಸದ್ಗುರು ಶ್ರೀ ಭೋಜಲಿಂಗೇಶ್ವರ ಮತ್ತು ಅಂಭಾ ಭವಾನಿ ದೇವಿಯ ಪಲ್ಲಕ್ಕಿ ಉತ್ಸವ, ಹಾಗೂ ಶ್ರೀಮಠದ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಭವ್ಯ ಮೆರವಣಿಗೆ ಮಂಗಳವಾರ ಸೀಗೆ ಹುಣ್ಣುಮೆ ದಿನದಂದು ಅಪಾರ ಜನಸಾಗರದ ಮಧ್ಯೆ ಅದ್ದೂರಿಯಾಗಿ ನಡೆಯಿತು.
ಮಧ್ಯಾಹ್ನ ಪೂಜ್ಯರ ನಿವಾಸದಲ್ಲಿ ಶ್ರೀ ಭೋಜಲಿಂಗೇಶ್ವರ ಹಾಗೂ ಅಂಭಾ ಭವಾನಿ ದೇವಿಯ ಪಲ್ಲಕ್ಕಿ ಪೂಜೆಯು ಹಾಗೂ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಜರುಗಿತು.
ಭಕ್ತರು ಮೆರವಣೆಗೆಯಲ್ಲಿ ದಾರಿಯೂದ್ದಕ್ಕೂ ಹೂಮಳೆಗೈದರು. ಪ್ರಮುಖರಾದ ಸೋಮಣ್ಣ ಗೌಡ ತುಮಕೂರು.ಶರಣಗೌಡ ಬೆನಕನಹಳ್ಳಿ.ಮಹೇಶ ಪಾಟೀಲ್.ಭೀಮರೆಡ್ಡಿಗೌಡ ಕುರಾಳ.ವಿಶ್ವನಾಥ ರೆಡ್ಡಿ ಸುಗೂರ ಎನ್.ಶರಣಗೌಡ ವಕೀಲರು.ಸಿದ್ದುಗೌಡ ಬೆನಕನಹಳ್ಳಿ.ಮಹಿಪಾಲ್ ರೆಡ್ಡಿ ಕರಣಗಿ.ಶರಣಗೌಡ ತುಮಕೂರು.ಸಂಗಾರೆಡ್ಡಿಗೌಡ ಮಾಲಿ ಪಾಟೀಲ್. ಡಾ, ವಿರೇಶ ಯಣ್ಣಿ ನಾಲವಾರ.ಪರ್ವತರೆಡ್ಡಿಗೌಡ ಕರಣಗಿ.ಬಸ್ಸುಗೌಡ ಮಾಲಿ ಪಾಟೀಲ್.ಮಹಾದೇವ ರೆಡ್ಡಿ ತುಮಕೂರು.ಈರಣ್ಣ ಬಲಕಲ್ ಎಲ್.ಐ.ಸಿ ಯಾದಗಿರ,ಎಸ್ ಎಸ್ ಜ್ಯುಗೇರಿ . ಬಸವರಾಜ ,ಪ್ರಭು ಹೂಗಾರ,ಮಲ್ಲಿಕಾರ್ಜುನ ವಿಶ್ವ ಕರ್ಮ. ಶಂಕರಗೌಡ ಮಾಸ್ತರ.ಮಹಾಂತೇಶ ಗೌಡ ಲಿಂಗಸುಗೂರ.ಚನ್ನು ಮಾಟ್ನಳ್ಖಿ.ನರೇಂದ್ರ ಗುತ್ತಿ, ಮಹಾದೇವಪ್ಪ ಸಾಹುಕಾರ್, ಭೋಜಲಿಂಗೇಶ, ಮಲ್ಲಿಕಾರ್ಜುನ ಚಿನ್ನಾಪೊಟೋ ಸ್ಟುಡಿಯೋ.ಬಸವರಾಜ ಹಡಪದ ಸುಗೂರ ಎನ್.ಸಾಬ್ಬಣ್ಣ ಹೂಗಾರ. ಸಿದ್ದು ಗೌಡ ಕುರಾಳ.ಪ್ರವೀಣ. ತುಮಕೂರು.ಭಾಬು ಪಾಟೀಲ್.ರಾಜೇಂದ್ರ ನಾಯ್ಕೊಡಿ.ಸಿದ್ದು ಸಾಹು ಕುಂಬಾರ.ಧನ್ನು ಚವ್ಹಾಣ.ಶಂಕರ ಬೇನಿಗಿಡ . ಚಾಂಧಪಾಷಾ ಬಂಟ್ನಳ್ಳಿ.ಕಾಸಿಂ ಬಾಪೂಜಿ.ಅಯ್ಯಪ್ಪ ಬೇನಿಗಿಡ. ಮಲ್ಲಿಕಾರ್ಜುನ ನಾನಾಕಳ್ಳಿ.ಯಮನಪ್ಪ ತಳವಾರ.ಭೋಜು ಚಿಗರಳ್ಳಿ. ಸೇರಿದಂತೆ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಇದ್ದರು.

ಸಕಲ ಮಂಗಳ ವಾಧ್ಯಗಳೊಂದಿಗೆ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ಹಾಗೂ ಅಂಭಾ ಭವಾನಿ ದೇವಿಯ ಮೂರ್ತಿಯು ಹೊತ್ತ ಪಲ್ಲಕ್ಕಿ ಉತ್ಸವನ್ನು ಪೂಜ್ಯರ ನಿವಾಸದಿಂದ ಆರಂಭಗೊಂಡು ಗ್ರಾಮದ ಪ್ರಮುಖ ರಸ್ತೆ.ಆಟೋ ಚೌಕ್, ಧ್ಯಾವಮ್ಮ ದೇವಸ್ಥಾನ ಚೌಕ, ಮಲ್ಕಣ್ಣಪ್ಪ ದೇವಸ್ಥಾನ ಹಾಗೂ ಊರ ಅಗಸಿ ಕಮಾನ ಸೇರಿದಂತೆ ವಿವಿಧ ಪ್ರಮುಖ ಬೀದಿಗಳ ಮೂಲಕ ಸಂಜೆ 6:30 ಕ್ಕೆ ಶ್ರೀ ಭೋಜಲಿಂಗೇಶ್ವರ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ಬ್ಯಾಂಡ್ ಬಾಜಾ ಭಜಂತ್ರಿ, ಡೊಳ್ಳು ಕುಣಿತ, ಲೇಜಿಮ್, ಕೋಲಾಟ, ಯುವಕರ ಕುಣಿತ, ಧ್ವಜಗಳು, ಭಜನೆ ಜನಮನ ಸೆಳೆದವು. ಸುಮಂಗಲೆಯರು ಹೊತ್ತ ಕಳಸ, ಕುಂಭ ಮೇಳ ಹಾಗೂ ಸುಗೂರ ಎನ್ ಗೆಳೆಯರ ಬಳಗದವರ ಕುಣಿತ ನೋಡುಗರಿಗೆ ಆಕರ್ಷಣೆಯಾಗಿದ್ದವು. ಸುಮಾರು 6 ತಾಸುಗಳವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಪಲ್ಲಕ್ಕಿಯು ದೇವಸ್ಥಾನದ ಗರ್ಭ ಗುಡಿಗೆ 5 ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ. ಮುಂಬಯಿ. ಸೇರಿದಂತೆ ನಾನಾ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದರು. ನೈವೆದ್ಯ ಸಲ್ಲಿಸಲು ಹಾಗೂ ದರ್ಶನ ಪಡೆಯಲು ಭಕ್ತರ ಸಾಲಿನಿಂದ ಕೂಡಿತ್ತು. ಕ್ಕಿಕ್ಕಿರಿದ ಜನಸ್ತೋಮದಿಂದಾಗಿ ದೇವಸ್ಥಾನ ಸೂತ್ತಲು ನೆರೆದಿದ್ದರು. ಸುಗಮ ದರ್ಶನಕ್ಕೆ ಪೋಲಿಸರು, ದೇವಸ್ಥಾನಕ್ಕೆ ದೀಪಾಲಂಕಾರಗಳಿಂದ ಕಂಗೊಳಿಸಿತ್ತು. ಅಪಾರ ಭಕ್ತರು ಆಗಮಿಸಿ ಶ್ರೀ ಮಠದ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ದರ್ಶನ ಪಡೆದು ಪುನೀತರಾದರು.
ಸಮಸ್ತ ಸುಗೂರ ಎನ್ ಗ್ರಾಮದ ಭಕ್ತರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಿದರು.ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ದೇವಸ್ಥಾನಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.