ವಕೀಲ ಕಿಶೋರ್ ಮೇಲೆ ದೂರ ದಾಖಲಿಸಲು – ಡಿ.ಕೆ ದ್ಯಾವಪ್ಪ ರಿಂದ ಆಗ್ರಹ.
ದೇವರ ಹಿಪ್ಪರಗಿ ಅ.08





ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದು ಅವಮಾನ ಮಾಡಿದ ಘಟನೆಗೆ ಭೀಮ್ ಆರ್ಮಿ ಭಾರತ್ ಏಕತ್ ಮಿಷನ್ ವಿಜಯಪುರ ಜಿಲ್ಲಾಧ್ಯಕ್ಷರು ಡಿ.ಕೆ ದ್ಯಾವಪ್ಪ ದೊಡ್ಡಮನಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನ್ಯಾಯಾಲಯಕ್ಕೆ ಅವಮಾನ ಮಾಡಿರುವ ಕಿಡಿಗೇಡಿ ವಕೀಲನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು. ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬುದ್ಧ ತತ್ವಗಳನ್ನು ಅನುಸರಿಸುವ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆಯ ಮೂಲಕ ಉನ್ನತ ಸ್ಥಾನಕ್ಕೇರಿದ್ದಾರೆ. ಜಾತಿ ಆಧಾರಿತ ಅಸಹನೆ ಮತ್ತು ಅಸಮಾನತೆ ಸಂವಿಧಾನ ಜಾರಿಗೆ ಬಂದ 75 ವರ್ಷಗಳಾದರೂ ಇನ್ನೂ ನಮ್ಮ ದೇಶದ ಕೆಲವರ ಮನಸ್ಸಿನಲ್ಲಿ ಜಾತಿ ಉಳಿದಿದೆ. ಹಾಗೂ ಇನ್ನೂ ಜೀವಂತವಾಗಿರುವುದನ್ನು ಈ ಘಟನೆ ತೋರಿಸುತ್ತದೆ ಎಂದು ಹೇಳಲಾಗಿದೆ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಯವರು ಯಾವುದೇ ಪಕ್ಷ ಅಥವಾ ಧರ್ಮಕ್ಕೆ ಸೇರಿದವರಲ್ಲ ಸಂವಿಧಾನದ ಹಾದಿಯಲ್ಲಿ ಹೋಗುವರು. ಈ ಘಟನೆ ಇಡೀ ಭಾರತ ದೇಶಕ್ಕೆ ಅಪಮಾನ ಹಾಗೂ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅವಮಾನವಾಗಿದೆ. ಆದ್ದರಿಂದ ಎಲ್ಲಾ ಜಾತಿ ಧರ್ಮ ಹಾಗೂ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಒಟ್ಟಾಗಿ ಈ ಘಟನೆಯನ್ನು ಖಂಡಿಸ ಬೇಕೆಂದು ಮನವಿ ಮಾಡುತ್ತೇನೆ. ಕೀಶೋರ ವಕೀಲನ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಿ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಆ ವಕೀಲನ ವಕೀಲರ ಸಂಘದಿಂದ ಖಾಯಂ ಸದಸ್ಯತ್ವವನ್ನು ರದ್ದು ಪಡಿಸಬೇಕು ಹಾಗೂ ಕೇಂದ್ರ ಸರ್ಕಾರವು ಜಾತಿ ದ್ವೇಷ ಪ್ರಕರಣವನ್ನು ಸ್ವಯಂ ಕೃತ ಪ್ರಕರಣ ಅಂತಾ ದಾಖಲಿಸ ಬೇಕೆಂದು ಆಗ್ರಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ.ದೇವರ ಹಿಪ್ಪರಗಿ