ಮಕ್ಕಳೊಂದಿಗೆ ಬಿಸಿಯೂಟ ಸವಿದ – ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು.
ಬಿದರಕುಂದಿ ಜು.31





ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಇಂದು ನೂತನ ಎಸ್.ಡಿ.ಎಂ.ಸಿಯ ಮೊದಲ ಸಭೆ ನಡೆಯಿತು. ಸಭೆಯಲ್ಲಿ ಶಾಲೆಗೆ ಸಿ.ಬಿ.ಝಡ್ ಇಂಗ್ಲೀಷ ವಿಷಯದ ಇಬ್ಬರು ಶಿಕ್ಷಕರು ಮತ್ತು ಪಿ.ಸಿ.ಎಂ ಇಂಗ್ಲೀಷ್ ಮಾಧ್ಯಮದ ಒಂದು ಹುದ್ದೆಯ ಅವಶ್ಯಕತೆ ಇದೆ. ಈ ಹುದೆಗಳ ನೇಮಕಾತಿಗೆ ವಿಳಂಬ ವಾಗುತ್ತಿರುವದರಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡುವ ಸಲುವಾಗಿ ಹುದ್ದೆಗಳನ್ನು ಆಹ್ವಾನಿಸಲು ನಿರ್ಧರಿಸಲಾಯಿತು. ಮತ್ತು ಶಾಲೆಗೆ ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ತೀವ್ರವಾಗಿ ಬಗೆ ಹರಿಸುವ ಕುರಿತು ಚಿಂತಿಸಲಾಯಿತು. ಇದೂ ಅಲ್ಲದೆ ಆಟದ ಮೈದಾನವೂ ಸೇರಿದಂತೆ ಊಟಕ್ಕಾಗಿ ದೊಡ್ಡ ಭೋಜನಾಲಯ ನಿರ್ಮಿಸಲು ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಲು ನಿರ್ಧರಿಸಿದರು. ನಂತರ ಬಿಸಿಯೂಟದ ಸಹಾಯಕ ನಿರ್ದೇಶಕರಾದ ಡಾ. ಎಂ.ಎಂ ಬೆಳಗಲ್ಲ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು ಶಾಲಾ ಮಕ್ಕಳ ಜೊತೆಗೆ ಕುಳಿತು ಕೊಂಡು ಮಧ್ಯಾಹ್ನದ ಬಿಸಿಯೂಟವನ್ನು ಸವಿದರು. ಮಧ್ಯಾಹ್ನದ ಊಟದ ನಂತರ ಬಿಸಿಯೂಟವು ಉತ್ತಮ ಗುಣಮಟ್ಟದ್ದಾಗಿತ್ತು ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷೆ ಪೂರ್ಣಿಮಾ ಬೆಳಗಲ್ಲ, ಮನೋಹರ ಪಾಟೀಲ, ಬಂದೆನಮಾಜ ಕುಮಸಿ, ನಿಂಗನಗೌಡ ಬಿರಾದಾರ, ಸಂಗನಗೌಡ ಪಾಟೀಲ, ಯಲ್ಲಪ್ಪ ಮ್ಯಾಗೇರಿ, ಗೀತಾ ನಾಲತವಾಡ, ಮಂಜುಳಾ ಹಡಗಲಿ ಶರಣಪ್ಪ ಸುತಗುಂಡರ, ಮತ್ತು ಎಚ್.ಆರ್ ಬಾಗವಾನ ಹಾಗೂ ಮುಖ್ಯ ಗುರುಗಳು ಅನೀಲಕುಮಾರ ರಾಠೋಡ ಮತ್ತು ಸಿಬ್ಬಂದಿಗಳಾದ ಎ.ಡಿ ಕೆರೂರ ಎನ್.ಎಸ್ ಬಿರಾದರ್ ಮುಂತಾದವರು ಇದ್ದರು
.ವರದಿ:ಜಿ.ಎನ್ ಬೀರಗೊಂಡ (ಮುತ್ತು) ಢವಳಗಿ