ಶ್ರೀರಾಮಕೃಷ್ಣರ ಉಪದೇಶಗಳ ಅನುಸರಣೆಯಿಂದ ಸಾರ್ಥಕ ಬದುಕು – ಯತೀಶ್.ಎಂ ಸಿದ್ದಾಪುರ ಅಭಿಪ್ರಾಯ.
ಚಳ್ಳಕೆರೆ ಅ.11





ಶ್ರೀರಾಮಕೃಷ್ಣರು ಉಪದೇಶಿಸಿದ ಸಂದೇಶಗಳ ಅನುಸರಣೆಯಿಂದ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಹಾಗೂ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀರಾಮಕೃಷ್ಣ ಉಪದೇಶಾಮೃತ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.

ಗುರುವಾಕ್ಯದಲ್ಲಿ ಶ್ರದ್ಧೆ,ಭಗವತ್ ಸ್ವರೂಪ, ಪ್ರಾರ್ಥನೆ, ಸಂಸಾರದಲ್ಲಿ ಸಾಧನೆ, ಅಭ್ಯಾಸ, ವೈರಾಗ್ಯ ಮುಂತಾದ ವಿಷಯಗಳ ಬಗ್ಗೆ ಅವರು ಮಾತನಾಡಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ಶ್ರೀಮತಿ ಮಂಜುಳ ಉಮೇಶ್ ಅವರಿಂದ ದಿವ್ಯತ್ರಯರಿಗೆ ಮಂಗಳಾರತಿ ಕಾರ್ಯಕ್ರಮ ನಡೆಯಿತು.
ಸತ್ಸಂಗದಲ್ಲಿ ಸದ್ಭಕ್ತರಾದ ಶ್ರೀಮತಿ ಎಂ.ಗೀತಾ ನಾಗರಾಜ್, ಕೆ.ಎಸ್ ವೀಣಾ, ಕವಿತಾ.ಗುರುಮೂರ್ತಿ, ವಾಸವಿ, ಅಂಬುಜಾ.ಶಾಂತಕುಮಾರ್, ವೆಂಕಟಲಕ್ಷ್ಮೀ, ಉಷಾ ಶ್ರೀನಿವಾಸ್, ಚೇತನ್, ಕಾವೇರಿ ಸುರೇಶ್, ಪುಷ್ಪಲತಾ, ಡಾ, ಭೂಮಿಕ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.