ಸಿಜೆಐ ಮೇಲೆ ಶ್ಯೂ ಎಸೆತ ಖಂಡಿಸಿ – ಸಮಾನ ಮನಸ್ಕರ ಒಕ್ಕೂಟದಿಂದ ಪ್ರತಿಭಟನೆ.
ದೇವರ ಹಿಪ್ಪರಗಿ ಅ.11





ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಅವರ ಮೇಲೆ ಕೋರ್ಟ್ ಹಾಲಿನಲ್ಲಿ ಶೂ ಎಸೆದ ಮನುವಾದಿ ಜಾತಿವಾದಿ ಮನಸ್ಸುಳ್ಳ ವಕೀಲ ಕಿಶೋರ್ ರಾಕೇಶ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಎಂದು ಪೂರ್ವಭಾವಿ ಸಭೆ ನಡೆಯಿತು. ಇದೇ ದಿ:- 13 ರಂದು ಸೋಮವಾರ ಬೆಳಿಗ್ಗೆ 11:00 ಗಂಟೆಗೆ ದೇವರ ಹಿಪ್ಪರಗಿ ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಿಂದ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ವೃತ್ತಿನ ವರೆಗೆ ಬೃಹತ್ ಪ್ರತಿಭಟನೆ ಹಾಗೂ ಮೆರವಣಿಗೆ ಮಾಡುವ ಸಲುವಾಗಿ ತಾಲ್ಲೂಕು ಸಮಾನ ಮನಸ್ಕರು ಒಕ್ಕೂಟಗಳಿಂದ ಪೂರ್ವಭಾವಿ ಸಭೆ ನಡೆಯಿತು, ಪಟ್ಟಣದ ಪ್ರವಾಸ ಮಂದಿರದಲ್ಲಿ ಪೂರ್ವಭಾವಿ ಸಭೆಯಲ್ಲಿ ಹಲವಾರು ಮುಖಂಡರು ಮಾತನಾಡಿದರು.

ಈ ಸಭೆಯ ನೇತೃತ್ವ ವಹಿಸಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಪ್ರಕಾಶ ಗುಡಿಮನಿ ಹಾಗೂ ಮುಖಂಡರಾದ ಗುರುನಾಥ ಮುರಡಿ ಬೀರು ಹಳ್ಳಿ ಪರಶುರಾಮ ನಾಯ್ಕೋಡಿ ಮುನ್ನಾ ಮಳಖೇಡ ರಾಜಕುಮಾರ ಸಿಂದಗೇರಿ ಸರಿತಾ ನಾಯಕ ಹುಯೋಗಿ ತಳ್ಳೋಳ್ಳಿ ಇಕ್ಬಾಲ್ ಬಿಜಾಪುರ ಮಲ್ಲಕಪ್ಪ ಬಾಗೇವಾಡಿ ಬಸವರಾಜ ಇಂಗಳಗಿ ಪರಸುರಾಮ ಬಡಿಗೇರ ಶಿವಾನಂದ ವಾಲಿಕಾರ ಸುನಿಲ ಮಾಗಿ ಚಂದ್ರ ಕಡಕೋಳ ಅಶೋಕ ಗುಡಸಲಮನಿ ದೇವೇಂದ್ರ ದೊಡ್ಡಮನಿ ದಾನೇಶ ಕೇಸರಿ ದಯಾನಂದ ರಾಠೋಡ ಮಹೇಶ ಗುಡಿಮನಿ ಶಂಕರ ಜಮಾದಾರ ಪ್ರಭು ಕಡಕೋಳ ಸಾಯಬಣ್ಣ ದಳಪತಿ ದಾದಾ ಶಪೂರ ರಾಘವೇಂದ್ರ ಪಡಗಾನೂರ ಶಿವರಾಜ್ ತಳವಾರ ಶಿವಾನಂದ ಹರಿಜನ ಪ್ರಶಾಂತ ಭೂತಾಳಿ ದಾದಾ ತಾಂಬೋಳ್ಳಿ ಆನಂದ ವಗ್ಗದ ನವೀನ ಗುತ್ತೇದಾರ ಹಾಗೂ ಇನ್ನೂ ಅನೇಕ ಮುಖಂಡರು ಈ ಪೂರ್ವ ಬಾವಿ ಸಭೆಯಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ