ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಿಸಿ – ಉಪ ವಿಭಾಗ ಅಧಿಕಾರಿ ಎನ್.ವಿ ನಟೇಶ್.
ತರೀಕೆರೆ ಅ.11





ನಗರ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರಿಗೆ ಪುರಸಭೆ ಪಟ್ಟಣ ಪಂಚಾಯಿತಿಯವರು ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕೆಂದು ಉಪ ವಿಭಾಗ ಅಧಿಕಾರಿ ಎನ್.ವಿ ನಟೇಶ್ ಹೇಳಿದರು. ಅವರು ಇಂದು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಏರ್ಪಡಿಸಿದ್ದ ಉಪ ವಿಭಾಗ ಮಟ್ಟದ ಸಪಾಯಿ ಕರ್ಮಚಾರಿ ಪುನರ್ ವಸತಿ ಕಾಯ್ದೆಯ ವೆಜಿಲೆನ್ಸಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕುರಿತು ಸಮಿತಿ ಸದಸ್ಯರಾದ ತರೀಕೆರೆ ಎನ್.ವೆಂಕಟೇಶ್ ರವರು ಮಾತನಾಡುತ್ತಾ, ತರೀಕೆರೆ, ಬೀರೂರು, ಕಡೂರು ಪುರಸಭೆಗಳು ಮತ್ತು ಎನ್.ಆರ್ ಪುರ ಪಟ್ಟಣ ಪಂಚಾಯಿತಿ ಅಜ್ಜಂಪುರ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳು ಸ್ಥಳ ಗುರುತಿಸಿ ವಿಶ್ರಾಂತಿ ಗೃಹಗಳು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು. ಪೌರ ಕಾರ್ಮಿಕರು ವಾಸವಾಗಿರುವ ಬಡಾವಣೆಯಲ್ಲಿ ಶುದ್ಧಗಂಗಾ ನೀರಿನ ಘಟಕ ಸ್ಥಾಪಿಸಬೇಕು ಮತ್ತು ತರೀಕೆರೆ ಅಂಬೇಡ್ಕರ್ ನಗರದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಮತ್ತು ಹಳೆಯ ಸಂತೆ ಮೈದಾನದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣಕ್ಕೆ ನಿವೇಶನವನ್ನು ಪುರ ಸಭೆಯಿಂದ ನೀಡಬೇಕೆಂದು ಒತ್ತಾಯಿಸಿದರು. ಇನ್ನೋರ್ವ ಸಮಿತಿ ಸದಸ್ಯರಾದ ಕಡೂರಿನ ಸಚಿನ್ ಮಾತನಾಡಿ, ಕಡೂರು ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಶಿಥಿಲಗೊಂಡಿರುವ ಬಾಲವಾಡಿ ಕಟ್ಟಡವನ್ನು ಖುಲ್ಲಾ ಪಡಿಸಿ ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಿಸಲು ಕೋರಿದರು. ಸಮಿತಿ ಸದಸ್ಯರಾದ ಎಂ.ವಿ ಭವಾನಿ ಮಾತನಾಡಿ ಮನೆ ನಿವೇಶನ ರಹಿತರಿಗೆ ನಿವೇಶನ ನೀಡಿ. ಗೃಹ ಭಾಗ್ಯ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡಬೇಕು ಎಂದು ಹೇಳಿದರು. ಆಸ್ಪತ್ರೆ ಸ್ವಚ್ಛತೆ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿಗಳನ್ನು ಆಯಾ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು. ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ಸಪಾಯಿ ಕಾರ್ಮಿಕರ ಗುರುತಿನ ಚೀಟಿ ಕೊಡಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ಪೊಲೀಸ್ ಉಪಾ ಅಧೀಕ್ಷಕರಾದ ಪರಶುರಾಮಪ್ಪ, ತರೀಕೆರೆ ತಹಸಿಲ್ದಾರ್ ವಿಶ್ವಜಿತ್ ಮೆಹತಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್ ಮಂಜುನಾಥ್ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ, ದೇವೇಂದ್ರಪ್ಪ, ನವೀನ್ ಕುಮಾರ್ ಎನ್ ಆರ್ ಪುರ, ಪುರಸಭಾ ಮುಖ್ಯ ಅಧಿಕಾರಿಗಳಾದ ವಿಜಯ್ ಕುಮಾರ್ ತರೀಕೆರೆ, ಪ್ರಕಾಶ್ ಬೀರೂರು, ಮಂಜುನಾಥ್ ಎನ್ ಆರ್ ಪುರ, ಕಡೂರು ಮಂಜಯ್ಯ, ಅಜ್ಜಂಪುರ ಮುಖ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು