ಮತ ಕಳ್ಳತನ ವಿರುದ್ಧ ಕಾಂಗ್ರೇಸ್ – ಶಾಸಕ ಜಿ.ಎಚ್ ಶ್ರೀನಿವಾಸ್.

ತರೀಕೆರೆ ಅ.11

ಡಾ, ಬಿ.ಆರ್ ಅಂಬೇಡ್ಕರ್ ರವರು ಸಂವಿಧಾನ ಬದ್ಧವಾದ ಮತ ಚಲಾಯಿಸುವ ಹಕ್ಕನ್ನು ಕೊಟ್ಟಿದ್ದು, ಬಿಜೆಪಿ ಮತ ಕಳ್ಳತನ ಮಾಡುವ ಮುಖಾಂತರ ಮತ ಚಲಾವಣೆಯ ಹಕ್ಕನ್ನು ಕಿತ್ತು ಕೊಳ್ಳುತ್ತಿದ್ದಾರೆ ಎಂದು ತರೀಕೆರೆ ಶಾಸಕರಾದ ಜಿ.ಎಚ್ ಶ್ರೀನಿವಾಸ್ ಹೇಳಿದರು ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದ ಎದುರು ಬ್ಲಾಕ್ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಜನಾದೇಶದ ಕಗ್ಗೊಲೆ ನಿಲ್ಲಿಸಿ, ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹಿಸಿ, ಮತ ಕಳ್ಳತನ ನಿಲ್ಲಿಸಿ ಎಂಬ ಹೋರಾಟವನ್ನು ಉದ್ದೇಶಿಸಿ ಮಾತನಾಡಿದರು. ಅಸ್ಸಾಂನಲ್ಲಿ 40 ಲಕ್ಷ ಮತಗಳನ್ನು ರದ್ದು ಮಾಡಿದ್ದಾರೆ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳನ್ನು ರದ್ದು ಮಾಡಿದ್ದಾರೆ ಬಿಜೆಪಿಗೆ ಯಾರು ಮತ ಹಾಕುವುದಿಲ್ಲವೋ ಅಂತವರ ಮತಗಳನ್ನು ಕಳ್ಳತನ ಮಾಡುವ ಮೂಲಕ ಕಿತ್ತುಕೊಂಡಿದ್ದಾರೆ. ಸರ್ವಾಧಿಕಾರಿ ಧೋರಣೆಯನ್ನು ಮಾಡುತ್ತಿದ್ದಾರೆ ಬಿಜೆಪಿ ಸರ್ಕಾರದವರು. ಕೋಟ್ಯಂತರ ಉದ್ಯೋಗ ಸೃಷ್ಟಿ ಮಾಡುತ್ತೇವೆ ಹೊರ ದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ಸು ತರಿಸುತ್ತೇವೆ ಎಂದು ಸುಳ್ಳು ಸುಳ್ಳು ಹೇಳಿದ್ದಾರೆ.ಚುನಾವಣೆ ಪೂರ್ವ ಮತದಾರರಿಗೆ ಹಣ ನೀಡಿ ಭ್ರಷ್ಟಾಚಾರ ಮಾಡುತ್ತಿದ್ದಾರೆ, ಅದಾನಿ ಅಂಬಾನಿ ರವರ ಕೈ ಗೊಂಬೆಗಳಾಗಿದ್ದಾರೆ ಎಂದು ದೂರಿದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾದ ಬಿ ಆರ್ ಗವಾಯಿರವರ ಮೇಲೆ ಪಾದರಕ್ಷೆ ಎಸೆಯುವ ಮೂಲಕ ರಾಕೇಶ್ ಕಿಶೋರ್ ಎಂಬುವವನಿಂದ ಅವಹೇಳನಕಾರಿಯಾದ ಘಟನೆ ಮಾಡಿಸಿದ್ದಾರೆ, ಹಿಂದೂ ಮುಸ್ಲಿಂ ಗಲಾಟೆಗಳನ್ನು ಮಾಡಿಸುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಿದ್ದೇವೆ, ಪಂಚ ಗ್ಯಾರೆಂಟಿಗಳಿಂದ ಆರ್ಥಿಕ ಅಭಿವೃದ್ಧಿಯಾಗುತ್ತಿದೆ ಕಾಂಗ್ರೆಸ್ ಸರ್ಕಾರ ಜನಪರವಾದ ಕೆಲಸಗಳನ್ನು ಮಾಡುತ್ತಿದೆ ಆದ್ದರಿಂದ ಮತ ಕಳ್ಳತನ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಡಾ.ಅಂಶುಮಂತ್ ಮಾತನಾಡಿ ಬಿಜೆಪಿಯು ಅಧಿಕಾರ ಬರುವ ಸಂದರ್ಭಗಳಲ್ಲಿ ಆಪರೇಷನ್ ಕಮಲ ಹಾಗೂ ಮತ ಕಳ್ಳತನ ಮಾಡುತ್ತಾ ಅಧಿಕಾರ ಹಿಡಿಯುತ್ತಿದೆ, ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದೆ ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಸಮಾನವಾದ ಧ್ವನಿ ಕೊಡದೆ ಉದ್ಯಮಿಗಳಿಗೆ ಮಣೆ ಹಾಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಭಾರತ ಜೋಡು ಕಾರ್ಯಕ್ರಮ ಮಾಡಿ ಜನಜಾಗೃತಿ ಮೂಡಿಸುತ್ತಿದೆ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಬದ್ಧವಾದ ಮತ ಹಾಕುವ ಹಕ್ಕನ್ನು ಕಸಿಯುತ್ತಿದ್ದಾರೆ ಬಿಜೆಪಿಯವರು. ಸಂವಿಧಾನ ಉಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಮತ ಕಳ್ಳತನವನ್ನು ಬಯಲಿಗೆ ಎಳೆದು ಹೋರಾಟವನ್ನು ಮಾಡುತ್ತಿದ್ದಾರೆ ರಾಹುಲ್ ಗಾಂಧಿ ರವರು ಮತದಾರರಿಗೆ ಜಾಗೃತಿ ಮೂಡಿಸಿ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡಬೇಕು. ಶಾಸಕರಾದ ಜಿಎಚ್ ಶ್ರೀನಿವಾಸರವರು ಜನಸಾಮಾನ್ಯರ ಧೋನಿಯಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದಾರೆ, ಜನಪರವಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಕೆಜೆ ಜಾರ್ಜ್ ರವರು ಕಾಂಗ್ರೆಸ್ ಶಾಸಕರು ಅಭಿವೃದ್ಧಿ ಹರಿಕಾರರಾಗಿದ್ದಾರೆ ಎಂದು ಹೇಳಿದರು.

ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ ರವರು ಮಾತನಾಡಿ ಮತ ಕಳ್ಳರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಅಲ್ಲಿಯವರೆಗೂ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಯು ಫಾರೂಕ್ ಮಾತನಾಡಿ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿ ಕೊಂಡು ಕಳ್ಳತನ ಮಾಡಿ ಬಿಜೆಪಿಯವರು ಅಧಿಕಾರ ಹಿಡಿಯುತ್ತಿದ್ದಾರೆ ಎಂದು ಆರೋಪಿಸಿದರು. ಬಗರ್ ಹುಕುಂ ಸಮಿತಿ ಸದಸ್ಯರಾದ ಟಿಎನ್ ಜಗದೀಶ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತ ಕೆಲಸ ಮತ್ತು ಸಂವಿಧಾನ ಬಾಹಿರವಾದ ಕೆಲಸ ಮಾಡುತ್ತಿದ್ದಾರೆ ಬಿಜೆಪಿಯವರು.ಅವರ ವಿರುದ್ಧ ನಮ್ಮ ಹೋರಾಟ ದೇಶಾದ್ಯಂತ ನಡೆಯುತ್ತಿದೆ ಎಂದು ಹೇಳಿದರು. ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ವರ್ಮ ಮಾತನಾಡಿ ಜನಸಾಮಾನ್ಯರ ಮತ ಚಲಾಯಿಸುವ ಹಕ್ಕನ್ನು ಉಳಿಸಲು ಸಂವಿಧಾನ ಉಳಿಸಲು ನಾವೆಲ್ಲರೂ ಇಂದು ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು. ಈ ಹೋರಾಟದಲ್ಲಿ ಭಾಗಿಯಾಗಿದ್ದ ಕೆಪಿಸಿಸಿ ಸದಸ್ಯರಾದ ಎಚ್ ವಿಶ್ವನಾಥ್ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದಯಾನಂದ್, ಹೇಮಣ್ಣ,ಗೌರೀಶ, ಸೀತಾರಾಮ್, ವಿಜಯಭಾಯಿ, ಇರ್ಷದ್ ಪುರಸಭಾ ಸ್ಥಾಯಿ ಸಮಿತಿ ಅನಿಲ್ ಅಂಜಯ್ಯ ಪುರಸಭಾ ಸದಸ್ಯರಾದ ಶಶಾಂಕ್, ಗಿರಿಜಾ ಪ್ರಕಾಶ್ ವರ್ಮಾ ನಾಮಿನಿ ಸದಸ್ಯರಾದ ಟಿಜಿ ಮಂಜುನಾಥ್, ಆದಿಲ್ ಪಾಶ, ಮಂಜುನಾಥ್, ಪರಶುರಾಮ್ ಇನ್ನೂ ಮುಂತಾದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಭಾಗವಹಿಸಿ ಮಾತನಾಡಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button