🔥BIG BREAKING ನ್ಯೂಸ್ ‘ರಾಜ್ಯಕ್ಕೇ ಮಾದರಿ’ ಬ್ರಹ್ಮಾವರ ಕೃಷಿ ಮೇಳದಲ್ಲಿ ‘ನಕ್ಷತ್ರ ವನ’ ಲೋಕಾರ್ಪಣೆ, ಉಡುಪಿ ಜಿಲ್ಲಾ ಪರಿಸರ ಸಂರಕ್ಷಣಾ ಅಧಿಕಾರಿಗಳ ಕಾರ್ಯ ವೈಖರಿಗೆ – ಸಚಿವರಿಂದಲೇ ಭಾರಿ ಪ್ರಶಂಸೆ.
ಉಡುಪಿ ಅ.11





ಪರಿಸರ ಸಂರಕ್ಷಣೆ ಮತ್ತು ಅರಣ್ಯ ಜಾಗೃತಿ ವಿಚಾರದಲ್ಲಿ ಉಡುಪಿ ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗವು ರಾಜ್ಯಕ್ಕೇ ಮಾದರಿಯಾಗುವ ಹೆಜ್ಜೆಯನ್ನು ಇಟ್ಟಿದೆ. ಬ್ರಹ್ಮಾವರ ತಾಲೂಕಿನಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಾವರ ಕೃಷಿ ಮೇಳದಲ್ಲಿ, ಅತೀ ಮಹತ್ವದ ‘ನಕ್ಷತ್ರ ವನ’ (ರಾಶಿ ವನ) ವನ್ನು ಉದ್ಘಾಟಿಸುವ ಮೂಲಕ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ವಿಶಿಷ್ಟ ನಕ್ಷತ್ರ ವನವನ್ನು ಲೋಕಸಭಾ ಸದಸ್ಯರಾದ ಶ್ರೀನಿವಾಸ್ ಪೂಜಾರಿಯವರು ಉದ್ಘಾಟಿಸಿದರು.
ಜಾಗೃತಿ ಕಾರ್ಯಗಾರ ಮತ್ತು ಸಾರ್ವಜನಿಕ ಸ್ಪಂದನೆ:-
ಈ ಸಂದರ್ಭದಲ್ಲಿ, ಅರಣ್ಯ ಇಲಾಖೆಯ ಅಧಿಕಾರಿಗಳು ಮರ-ಗಿಡಗಳ ರಕ್ಷಣೆ, ಪೋಷಣೆ, ಅರಣ್ಯ ಸಂರಕ್ಷಣೆ ಮತ್ತು ಗಿಡಗಳನ್ನು ನೆಡುವುದರಿಂದ ಪರಿಸರಕ್ಕೆ ದೊರೆಯುವ ಆಮ್ಲಜನಕ, ಉತ್ತಮ ಗಾಳಿ ಹಾಗೂ ಪಕ್ಷಿ-ಪ್ರಾಣಿಗಳಿಗೆ ಆಶ್ರಯದ ಮಹತ್ವದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಯಶಸ್ವಿ ಕಾರ್ಯಾಗಾರಗಳನ್ನು ಆಯೋಜಿಸಿದರು.
ಶಾಲಾ-ಕಾಲೇಜುಗಳು ಮತ್ತು ವಿವಿಧ ಸಂಸ್ಥೆಗಳಲ್ಲಿ ಗಿಡಗಳನ್ನು ಪೋಷಿಸುವ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಅಧಿಕಾರಿಗಳು ನಿರಂತರವಾಗಿ ನಡೆಸುತ್ತಿದ್ದಾರೆ. ಪರಿಸರ ಉಳಿಸುವಲ್ಲಿ ಈ ಅಧಿಕಾರಿಗಳ ಪಾತ್ರ ಹೆಚ್ಚಿನದಾಗಿದೆ ಎಂಬ ಮೆಚ್ಚುಗೆ ವ್ಯಕ್ತವಾಗಿದೆ.
ಸಚಿವರಿಂದ ಭಾರಿ ಶ್ಲಾಘನೆಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿಗಳು ಹಮ್ಮಿಕೊಂಡಿರುವ ಈ ಅದ್ಭುತ, ಮಹತ್ವದ ಮತ್ತು ಸಾರ್ವಕಾಲಿಕ ಕಾರ್ಯಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಕೇವಲ ಸಾರ್ವಜನಿಕರಿಂದ ಮಾತ್ರವಲ್ಲದೆ, ಅಧಿಕಾರಿಗಳ ಈ ಪರಿಸರ ಸ್ನೇಹಿ ಕಾರ್ಯಕ್ರಮ ಮತ್ತು ದಕ್ಷ ಕಾರ್ಯವೈಖರಿಯನ್ನು ಸ್ವತಃ ಸಚಿವರು (ಮಂತ್ರಿಗಳು) ಕೂಡ ಶ್ಲಾಘಿಸಿದ್ದು, ಇಡೀ ಉಡುಪಿ ಜಿಲ್ಲಾ ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ರಾಜ್ಯಮಟ್ಟದಲ್ಲಿ ಮನ್ನಣೆ ದೊರೆತಿದೆ. ಜಿಲ್ಲೆಯ ಸಾರ್ವಜನಿಕರು ಇಂತಹ ದಕ್ಷ ಅಧಿಕಾರಿಗಳ ಕಾರ್ಯಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಮಹತ್ವದ ಕಾರ್ಯಕ್ರಮದಲ್ಲಿ ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (DFO) ರವೀಂದ್ರ ಕುಮಾರ್, ವಲಯ ಅರಣ್ಯಾಧಿಕಾರಿ ಅನುಷಾ ಭಟ್, ಉಪವಲಯ ಅರಣ್ಯಾಧಿಕಾರಿ ರಾವುತಪ್ಪ ಬಿರಾದರ್, ಉಪವಲಯ ಅರಣ್ಯಾಧಿಕಾರಿ ಸುರೇಶ್ ಗಾಣಿಗ,ಮತ್ತು ಸಿಬ್ಬಂದಿಗಳಾದ ಶಂಕರ, ದೇವರಾಜ,ಸುರೇಶ ಶೇಟ್, ಶಕುಂತಲಾ ಇವರುಗಳು ಉಪಸ್ಥಿತರಿದ್ದರು.
ವರದಿ:ಆರತಿ.ಗಿಳಿಯಾರು.ಉಡುಪಿ