ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಅವರಿಂದ – ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ.
ಸೂಲದಹಳ್ಳಿ ಅ.12





ಕೂಡ್ಲಿಗಿ ತಾಲೂಕಿನ ಸೂಲದಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ಶಾಸಕ ಮನೆ ಬಾಗಿಲಿಗೆ ಸರ್ಕಾರ ಕಾರ್ಯಕ್ರಮದ ನಿಮಿತ್ತವಾಗಿ ಬುಧವಾರ ಶಾಸಕ ಡಾ, ಎನ್.ಟಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ತಾಲೂಕ ಮಟ್ಟದ ಅಧಿಕಾರಿಗಳು, ಗ್ರಾ.ಪಂ ಸ್ವಚ್ಛತಗಾರರು, ಅಂಗನವಾಡಿ, ಆಶಾ ಕಾರ್ಯಕರ್ತರು, ಮನರೇಗಾ ಕಾಯಕ ಮಿತ್ರರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.ಸ್ವಚ್ಛತಾ ಶ್ರಮದಾನದಲ್ಲಿ ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಮಾತನಾಡಿ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸ್ಸು ನನಸಾಗಲಿ ಎಂಬ ಆಶಯದಂತೆ ನಮ್ಮ ಮನಸ್ಸು ಶುದ್ದಿ ಇರುವಂತೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ನಾವು ಸ್ವಚ್ಚತೆ ಯಿಂದ ಇಟ್ಟು ಕೊಳ್ಳಬೇಕು. ಆ ಮೂಲಕ ಇಂತಹ ಕಾರ್ಯಕ್ರಮಗಳನ್ನು ನಮ್ಮ ತಾಲೂಕಿನಲ್ಲಿ ಹೆಚ್ಚು ಹೆಚ್ಚು ಹಮ್ಮಿಕೊಳ್ಳುವ ಮೂಲಕ ಆರೋಗ್ಯದ ಮೂಲ ಆಶಯವನ್ನು ಉಳಿಸುವಂತಹ ಕೆಲಸವನ್ನು ನಾವು ಎಲ್ಲರೂ ಒಗ್ಗಟ್ಟಿನಿಂದ ಒಟ್ಟಾಗಿ ಮಾಡೋಣ ಎಂದರು. ನಾವು ಇಂತಹ ಸ್ವಚ್ಚತೆಯ ಕಾರ್ಯಕ್ರಮವನ್ನು ಆಯೋಜನೆ ಮಾಡವುದರಿಂದಾಗಿ ಮಕ್ಕಳು, ಯುವಕರು, ಮಹಿಳೆಯರು, ಸಾರ್ವಜನಿಕರು ನಮ್ಮನ್ನೂ ನೋಡಿ ಆದರೂ ಸ್ವಚ್ಚತೆಯನ್ನು ಈ ಮೂಲಕ ಮೈಗೂಡಿಸಿ ಕೊಳ್ಳುವಂತಾಗಲಿ ಎಂದೂ ಹೇಳಿದರು. ಜಿಲ್ಲಾ ಅಧಿಕಾರಿ ಕವಿತಾ ಮನ್ನಿಕೇರಿ, ತಹಶೀಲ್ದಾರ್ ವಿ.ಕೆ ನೇತ್ರಾವತಿ, ಇ.ಓ ನರಸಪ್ಪ, ಎಇಇ ನಾಗನಗೌಡ, ಎಇಇ ಮಲ್ಲಿಕಾರ್ಜುನ, ಬಿಒ ಮೈಲೇಶ ಬೆವೂರು, ಟಿ.ಹೆಚ್.ಓ ಪ್ರದೀಪ್, ಪ.ಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನ ಗೌಡ, ಹಿರಿಯ ಮುಖಂಡರಾದ ನಾಗರಕಟ್ಟೆ ರಾಜಣ್ಣ, ಶಶಿಧರ ಸ್ವಾಮಿ, ಅಜ್ಜನಗೌಡ, ಪಾತ್ರಿ ಸಿದ್ದಪ್ಪ, ಗಪ್ಪಣ್ಣ, ತಿಮ್ಮಣ್ಣ, ಮಹಾಲಿಂಗಪ್ಪ, ಬಸವರಾಜ, ವೃಷಭೇಂದ್ರ, ಡಾ, ಲಿಂಗನಗೌಡ, ಕೊಟ್ರೇಶ, ಕಲ್ಲೇಶ, ಮಲ್ಲೇಶ, ಬಸವರಾಜ ಜಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷರು ಸರ್ವ ಸದಸ್ಯರು, ಗ್ರಾಮಸ್ಥರು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನೆಲ್:ಕೆ.ಎಸ್ ವೀರೇಶ್ ಕೆ. ಹೊಸಹಳ್ಳಿ