ಹೂಡೇಂ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ – ಜಯಂತಿ ಆಚರಣೆ.
ಹೂಡೇಂ ಅ.12





ಕಾನ ಹೊಸಹಳ್ಳಿ ಸಮೀಪದ ಹೂಡೇಂ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವವನ್ನು ಗ್ರಾಮದ ವಾಲ್ಮೀಕಿ ಸಮುದಾಯದ ಮುಖಂಡರು, ಯುವಕರ ಸಂಘವು ಮಂಗಳವಾರ ಆಚರಿಸಿತು. ಇಲ್ಲಿನ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮುಖಂಡರು ಮತ್ತು ಸದಸ್ಯರು, ಗಣ್ಯರು ಮಾಲಾರ್ಪಣೆ, ಪೂಜೆ, ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ಜಿ. ಪಾಪ ನಾಯಕ ಮಾತನಾಡಿ ಈ ಜಗತ್ತಿನಲ್ಲಿ ಮನುಷ್ಯ ಕುಲ ಇರುವ ತನಕ ರಾಮಾಯಣ ಮಹಾಕಾವ್ಯದಲ್ಲಿನ ಎಲ್ಲ ಸಂದೇಶಗಳು ನಮ್ಮ ಬದುಕಿಗೆ ದಾರಿ ದೀಪವಾಗಲಿದೆ. ರಾಮರಾಜ್ಯ ಆಗಲಿ ಎಂಬುದು ಎಲ್ಲರ ಆಶಯವಾಗಿದ್ದು ಆ ರಾಮರಾಜ್ಯದ ಕಲ್ಪನೆ ಬಂದಿದ್ದು ರಾಮಾಯಣದಿಂದಲೆ ಎಂದರು. ಈ ವೇಳೆ ಅರ್ಚಕರಾದ ಜಗದೀಶ್ ಸ್ವಾಮಿಯವರು ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗೆ ಪೂಜೆ, ಪುಷ್ಪಾರ್ಚನೆ ಸಲ್ಲಿಸಿದರು. ನಂತರ ದಲಿತ ಕಾಲೋನಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ, ಪೂಜೆ, ಪುಷ್ಪಾರ್ಚನೆ ನೆರವೇರಿಸಿದರು. ಅಂತರ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಮೆರವಣಿಗೆ ಮೂಲಕ ಮುಖ್ಯ ರಸ್ತೆಗಳಲ್ಲಿ ಡಿಜೆ ಸೌಂಡ್‌ಗೆ ಯುವಕರು ಹೆಜ್ಜೆ ಹಾಕಿ ಮೆರವಣಿಗೆ ವೈಭವ ಹೆಚ್ಚಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮಿ ಬಾಯಿ, ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ.ರಾಮಚಂದ್ರಪ್ಪ, ಗ್ರಾ.ಪಂ ಸದಸ್ಯ ಸುಂದರಮ್ಮ ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ಬೋಸೆ ಮಲ್ಲಯ್ಯ, ಎ.ಎಸ್.ಐ ಗುರುಬಸವರಾಜ, ಪೊಲೀಸ್ ಸಿಬ್ಬಂದಿ ಕೊಟ್ರೇಶ್ ಅಂಗಡಿ, ಎಂ ಸಂದೀಪ್, ಅಜ್ಜಪ್ಪ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ, ವಾಲ್ಮೀಕಿ ಮುಖಂಡರಾದ ಜರುಗು ಬೋರಯ್ಯ, ಸೂರಯ್ಯ, ಬಿ.ಎಡ್ ಒಬ್ಬಣ್ಣ, ಬಾಗ್ಲರ್ ಪಾಪಣ್ಣ, ಜಿ. ಬೋಸಯ್ಯ, ಜೆ. ನಾಗೇಂದ್ರಪ್ಪ, ಮಾಂತೇಶ್, ನಿವೃತ್ತಿ ಗ್ರಂಥಪಾಲಕ ಟಿ ಗುರುರಾಜ್, ಬಿಜೆಪಿ ಯುವ ಮುಖಂಡ ಸುರೇಶ್, ತಮ್ಮಣ್ಣರು ನಾಗರಾಜ್, ಪೇಪರ್ ಮಲ್ಲಿಕಾರ್ಜುನ್ ಸೇರಿದಂತೆ ಶ್ರೀ ಮಹರ್ಷಿ ವಾಲ್ಮೀಕಿ ಯುವ ಬಳಗ ಹೂಡೇಂ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು, ಗ್ರಾ.ಪಂ ಸರ್ವ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಕಾನ ಹೊಸಹಳ್ಳಿ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನೆಲ್:ಕೆ.ಎಸ್ ವೀರೇಶ್ ಕೆ. ಹೊಸಹಳ್ಳಿ