🔥ರಾಜ್ಯಮಟ್ಟದ ಬಿಗ್ ಬ್ರೇಕಿಂಗ್ ನ್ಯೂಸ್ 🔥🔥ಹೆಬ್ರಿ ತಹಸೀಲ್ದಾರ್ ಹುಚ್ಚಾಟ, ಕಚೇರಿಯಲ್ಲಿ ಕರ್ತವ್ಯ ನಿರ್ಲಕ್ಷ್ಯ, ಖಾಸಗಿ ಕಾರ್ಯಕ್ರಮಗಳಲ್ಲಿ ಜೂ. ರಾಜ್‌ಕುಮಾರ್ ಗಾಯನ ಮೋಜು! ಸಚಿವರ ಕಡಕ್ ವಾರ್ನಿಂಗ್ ಲೆಕ್ಕಕ್ಕಿಲ್ಲ, ಕಂದಾಯ ಖಾತೆಯಲ್ಲಿ – ಅಧಿಕಾರಿಗಳ ಐಷಾರಾಮಿ ಮಸ್ತಿ….!
ಉಡುಪಿ/ಹೆಬ್ರಿ ಅ.12





ಉಡುಪಿ/ಹೆಬ್ರಿ (ದಿನಾಂಕ: 11/10/2025):-
ಕಂದಾಯ ಇಲಾಖೆಯ ಉಡುಪಿ ಜಿಲ್ಲೆ, ಹೆಬ್ರಿ ತಾಲೂಕಿನ ತಹಸೀಲ್ದಾರ್ ಎ. ಎಸ್. ಪ್ರಸಾದ್ ಅವರು ತಮ್ಮ ಕರ್ತವ್ಯ ನಿರ್ಲಕ್ಷ್ಯ ಹಾಗೂ ಐಷಾರಾಮಿ ಜೀವನ ಶೈಲಿಯಿಂದಾಗಿ ರಾಜ್ಯ ಮಟ್ಟದಲ್ಲಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಂದೆಡೆ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ತಾಂಡವವಾಡುತ್ತಿದ್ದರೆ, ಸಾರ್ವಜನಿಕರ ಕೆಲಸಗಳು ನೆನೆಗುದಿಗೆ ಬಿದ್ದಿವೆ. ಮತ್ತೊಂದೆಡೆ, ಇದೇ ಅಧಿಕಾರಿ ಖಾಸಗಿ ಕಾರ್ಯಕ್ರಮಗಳಲ್ಲಿ “ಉದಯೋನ್ಮುಖ ಗಾಯಕ”, “ಜೂ. ರಾಜಕುಮಾರ್” ಖ್ಯಾತಿಯಲ್ಲಿ ಕುಣಿದು ಕುಪ್ಪಳಿಸುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.
ಉದಯೋನ್ಮುಖ ಗಾಯಕರಾಗಿ ವೈರಲ್ ಆದ ತಹಸೀಲ್ದಾರ್ತಹಸೀಲ್ದಾರ್ ಎ.ಎಸ್ ಪ್ರಸಾದ್ ಅವರ ಗಾಯನದ ವೀಡಿಯೊವೊಂದು ಈಗ ರಾಜ್ಯಾದ್ಯಂತ ಹರಿದಾಡುತ್ತಿದೆ. ಖಾಸಗಿ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಅವರು ಹಾಡುತ್ತಿರುವ ದೃಶ್ಯಗಳನ್ನು ‘Kannada FM’ ಚಾನೆಲ್ ಪ್ರಕಟಿಸಿದೆ. ತಮ್ಮ ಮೂಲ ಕರ್ತವ್ಯಕ್ಕೆ ತಿಲಾಂಜಲಿ ನೀಡಿ, ಐಷಾರಾಮ್ಯವಾಗಿ ಎಲ್ಲೆಂದರಲ್ಲಿ ಮೋಜು ಮಸ್ತಿ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಚೇರಿಯಲ್ಲಿ ನಿರ್ಲಕ್ಷ್ಯ,
ಸಾರ್ವಜನಿಕರಿಗೆ ಅಲೆದಾಟದ ಶಿಕ್ಷೆಒಬ್ಬ ಸರ್ಕಾರಿ ಅಧಿಕಾರಿ, ಅದರಲ್ಲೂ ತಹಸೀಲ್ದಾರರಂತಹ ಮಹತ್ವದ ಹುದ್ದೆಯಲ್ಲಿರುವ ವ್ಯಕ್ತಿಯ ಕಾರ್ಯವೈಖರಿ ಸರಿಯಾಗಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು?:-
ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದ್ದರೂ, ಅದನ್ನು ತಡೆಯಲು ಅಧಿಕಾರಿಗಳು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ಗಂಭೀರ ಆರೋಪ.
ಕೆಲಸಗಳ ನಿರ್ಲಕ್ಷ್ಯ:-
ಸಾರ್ವಜನಿಕರಿಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸಗಳು ಸರಿಯಾದ ಕಾರ್ಯವೈಖರಿ ಇಲ್ಲದೆ ನನೆಗುದಿಗೆ ಬಿದ್ದಿವೆ. ತಹಸೀಲ್ದಾರ್ ಕಚೇರಿಗೆ ಬರುವ ಸಾರ್ವಜನಿಕರು ಕೆಲಸ ಮಾಡಿಕೊಡದೆ ಅಲೆದಾಟದಿಂದ ಬೇಸತ್ತು ಹೋಗಿದ್ದಾರೆ.
ತಹಸೀಲ್ದಾರ್ ಮೋಜು ಮಸ್ತಿ:-
ಸಾರ್ವಜನಿಕ ಸೇವೆ ನೀಡದೆ, ತಮ್ಮ ವೈಯಕ್ತಿಕ ಖುಷಿಗಾಗಿ “ಜ್ವಾಲೆಯಾಗಿ ಎಲ್ಲೆಂದರಲ್ಲಿ” ಐಶ್ಯಾರಾಮ್ಯವಾಗಿ ಕಾರ್ಯ ವೈಖರಿ ಮಾಡದೆ ಮೋಜು ಮಸ್ತಿ ಮಾಡುತ್ತಿದ್ದಾರೆ. ಯಾರಿಗೆ ಏನಾದರೂ ಚೆನ್ನಾಗಿದ್ದರೆ ಸಾಕು ಎಂದು ಎಲ್ಲೆಂದರಲ್ಲಿ ಕುಣಿದು ಕುಪ್ಪಳಿಸುತ್ತಿರುವ ಅವರ ಹುಚ್ಚಾಟದ ವೀಡಿಯೋಗಳೇ ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಜನರು ಹರಿಹಾಯ್ದಿದ್ದಾರೆ.
ಸಚಿವರ ಎಚ್ಚರಿಕೆಗೂ ಬೆಲೆ ಇಲ್ಲ!ಈ ಹಿಂದೆ, ಉಡುಪಿ ಜಿಲ್ಲೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಕಂದಾಯ ಸಚಿವರು ಸಹ ಹೆಬ್ರಿ ತಾಲೂಕಿನಲ್ಲಿ ಸಾಕಷ್ಟು ಕೆಲಸಗಳು ಮತ್ತು ಕಾರ್ಯವೈಖರಿಗಳು ಆಗುತ್ತಿಲ್ಲ ಎನ್ನುವ ಬಗ್ಗೆ ಕಡಕ್ ವಾರ್ನಿಂಗ್ ಮಾಡಿದ್ದರು. ಸಚಿವರ ಕಡೆಯಿಂದ ಎಚ್ಚರಿಕೆ ಸಿಕ್ಕಿದ್ದರೂ ಸಹ, ಕೆಲಸದ ಬಗ್ಗೆ ತಲೆಕೆಡಿಸಿಕೊಳ್ಳದೆ, ಅಧಿಕಾರಿಗಳು ತಮ್ಮ ವೈಯಕ್ತಿಕ ಮನರಂಜನೆಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದು ಇಲಾಖೆಯ ದಕ್ಷತೆಯ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.
ಸಾರ್ವಜನಿಕರ ನೇರ ಪ್ರಶ್ನೆ:-
ಸಚಿವರೇ, ಯಾವಾಗ ಕ್ರಮ?ಈ ಎಲ್ಲಾ ಬೆಳವಣಿಗೆಗಳಿಂದ ಕೆರಳಿರುವ ಸಾರ್ವಜನಿಕರು ಈಗ ನೇರವಾಗಿ ಕಂದಾಯ ಸಚಿವರ ಖಾತೆಯ ಮೇಲೆ ಪ್ರಶ್ನೆಗಳನ್ನು ಎಸೆದಿದ್ದಾರೆ.
“ಮಂತ್ರಿಗಳೇ, ಇಂತಹ ಅಧಿಕಾರಿಗಳ ಮೇಲೆ ಯಾವಾಗ ಕ್ರಮ? ಕಂದಾಯ ಸಚಿವರ ಖಾತೆಯಲ್ಲಿ ಅಧಿಕಾರಿಗಳ ಮೋಜು ಮಸ್ತಿ ಹೆಚ್ಚಾಗಿದ್ದು, ತಕ್ಷಣ ಅವರನ್ನು ಅಮಾನತುಗೊಳಿಸಬೇಕು” ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹುಚ್ಚಾಟದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಮತ್ತು ಕಂದಾಯ ಇಲಾಖೆ ತಹಸೀಲ್ದಾರ್ ಎ.ಎಸ್. ಪ್ರಸಾದ್ ಅವರ ವಿರುದ್ಧ ಯಾವ ರೀತಿಯ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ