ತಾಲೂಕಾ ಹಡಪದ ಅಪ್ಪಣ ಸಮಾಜದ ನಾನಾ ಬೇಡಿಕೆಗಳು ಈಡೇರಿಕೆಗೆ – ಆಗ್ರಹಿಸಿ ಬೃಹತ್ ಹೋರಾಟ ಜರುಗಿತು.
ಕಲಬುರಗಿ ಅ.11





ಹಡಪದ ಅಪ್ಪಣ್ಣ ಸಮಾಜದ ನಾನಾ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ತಿಮ್ಮಾಪೂರ ಸರ್ಕಲ್ ದಿಂದ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಮೂಲಕ ಸಮಾಜದ ಬೇಡಿಕೆಗಳ ಶ್ಲೋಘನ ಹಾಕುವುದರ ಮೂಲಕ ಕಾಲ್ನಡಿಗೆಯಲ್ಲಿ ಹೋರಾಟ ನಡೆಸಿ ನಂತರ ಜಿಲ್ಲಾಧಿಕಾರಿ ಗಳ ಮುಖಾಂತರ (ಹೆಚ್ಚುವರಿ ) ತಹಸೀಲ್ದಾರ ಸಮ್ಮುಖದಲ್ಲಿ ರಾಜ್ಯದ ಸಿ.ಎಮ್ ಸಿದ್ರಾಮಯ್ಯನವರಿಗೆ, ಮತ್ತು ಸಮಾಜ ಕಲ್ಯಾಣ ಸಚಿವರಿಗೆ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಕ್ಯಾಬಿನೆಟ್ ನಲ್ಲಿ ನಮ್ಮ ಸಮಾಜದ ಬಗ್ಗೆ ಧ್ವನಿಯಾಗಿ ಮಾತನಾಡುವ ಮೂಲಕ ಈ ಸಮುದಾಯದ ಬಗ್ಗೆ ಚರ್ಚೆ ಮಾಡಲು ಒತ್ತಡ ಹಡಪದ ಅಪ್ಪಣ್ಣ ಸಮಾಜದ ನಾನಾ ವಿಷಯ ಬಗ್ಗೆ ಪ್ರತಿಧ್ವನಿಯಾಗಿ ಮಾತನಾಡಿ ಸಮಾಜದ ಬಹು ದಿನಗಳ ಹೋರಾಟದ ಬೇಡಿಕೆಗಳು ಇಡೇರಿಸಿ ಎಂದು ಮನವಿ ಪತ್ರ ಕಲಬುರಗಿ ತಾಲೂಕು ಹಡಪದ ಅಪ್ಪಣ್ಣ ಸಮಾಜದ ಬಂಧುಗಳ ಸಮ್ಮುಖದಲ್ಲಿ ಸಲ್ಲಿಸಲಾಯಿತು. ಹಿಂದಿನ ಬಿಜೆಪಿ ಸರ್ಕಾರದ ಮಾಜಿ ಮುಖ್ಯಮಂತ್ರಿ ಬಸವರಾಜ ಭೊಮ್ಮಾಯಿ ಅವರು ಸಿಎಮ್ ಇದ್ದಾಗ ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಘೋಷಣೆ ಮಾಡಿ ಆದೇಶ ನೀಡಿದರು .ಈಗಿನ ಕಾಂಗ್ರೆಸ್ ಸರ್ಕಾರ ಈಗ ಕೆಲವೊಂದು ಸಮುದಾಯದ ನಿಗಮ ಮಂಡಳಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದು ಆಯಾ ನಿಗಮಕ್ಕೆ ಅಧ್ಯಕ್ಷರ ನೇಮಕಾತಿ ಆಯ್ಕೆ ಮಾಡುವ ಮೂಲಕ ಕೆಲಸ ಮಾಡುತ್ತಿದೆ.? ಆದರೆ ನಮ್ಮ ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರದೇ ಅನ್ಯಾಯ ಮಾಡುತ್ತಿದೆ. ? ಆದಷ್ಟು ಬೇಗ ಈ ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಡ ಹಾಕಿದರು. ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದು 100 ಕೋಟಿ ರೂ ಮೀಸಲಿಡಬೇಕು . ಹಾಗೆ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಕಾಯಕ ಬಂಧುಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆ ಸರ್ಕಾರದಿಂದ ಮಾನ್ಯತೆ ನೀಡಬೇಕೆಂದು ವಿನಂತಿ ಮಾಡಿದರು. ಬಸವಕಲ್ಯಾಣ ದಲ್ಲಿ ಇರುವ ಬಸವಣ್ಣನವರ ಅರಿವಿನ ಮನೆಯ ಪಕ್ಕದಲ್ಲಿ ಶರಣ ಹಡಪದ ಅಪ್ಪಣ್ಣ ನವರ ಅರಿವಿನ (ಗವಿ) ಬಿಕೆಡಿಬಿ ಗೇ ಸೇರ್ಪಡೆ ಮಾಡುವ ಮೂಲಕ ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಮತ್ತು ಇದೇ ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮ ಸಮಾಜದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಯಾವುದಾದರೂ ನಿಗಮ ಮಂಡಳಿ ಅಥವಾ ,ವಿಧಾನ ಪರಿಷತ್ ಸದಸ್ಯ, ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಬೇಕು. ಮತ್ತು ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಕಾಯಕ ಬಂಧುಗಳಿಗೆ ‘ಅಜಾಮ” ಎಂಬ ಪದಕ್ಕೆ ‘ಕಾನೂನು ಪ್ರಕಾರ “ಅಟ್ರಾಸಿಟಿ ‘ ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಯಿತು.ಇದೇ ಸಂಧರ್ಭದಲ್ಲಿ ಶ್ರೀ ಬಾಲ ಬ್ರಹ್ಮಚಾರಿ ರಾಜಶಿವಯೋಗಿ ಸ್ವಾಮಿಗಳು ಶಹಾಬಾದ ಹಾಗೂ ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಮಾಜಿ ಸಂ. ಕಾರ್ಯದರ್ಶಿ ಬಸವರಾಜ ಹಳ್ಳಿ ಶಹಾಬಾದ. ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಮಾಜಿ ಕಾನೂನು ಸಲಹೆಗಾರ ರಮೇಶ್ ಮಲಕೋಡ ,ಜಿಲ್ಲಾ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್, ಈರಣ್ಣ ಸಿ ಹಡಪದ ಸಣ್ಣೂರ ಜಿಲ್ಲಾಧ್ಯಕ್ಷರು,ಜಿಲ್ಲಾ ಕಾರ್ಯಾಧ್ಯಕ್ಷರು ಭಗವಂತ ಹಡಪದ ಶಿಕ್ಷಕರು ಕಿರಣಗಿ, ಜಿಲ್ಲಾ ಪ್ರಕಾರ್ಯದರ್ಶಿ ರಮೇಶ್ ಹಡಪದ ನೀಲೂರ.ಜಿಲ್ಲಾ ಉಪಾಧ್ಯಕ್ಷರು ರುದ್ರಮಣಿ ಅಪ್ಪಣ್ಣ ಬಟಗೇರಾ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಆನಂದ ಖೇಳಗಿ , ಜಿಲ್ಲಾ ಖಂಜಾಚಿ ಶಿವಾನಂದ ಬಬಲಾದಿ.ಹಾಗೂ ಪ್ರಕಾಶ ಕಟ್ಟಿಮನಿ ಸರ ಕಲಬುರಗಿ. ಕಲಬುರಗಿ ಜಿಲ್ಲೆಯ ತಾಲ್ಲೂಕಾಧ್ಯಕ್ಷ ಚಂದ್ರಶೇಖರ ತೊನಸನಹಳ್ಳಿ ಅವರ ನೇತೃತ್ವದಲ್ಲಿ ಈ ಹೋರಾಟ ನಡೆಯಿತು ಈ ಸಂಧರ್ಭದಲ್ಲಿ ಜಿಲ್ಲಾ ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಬನ್ನೂರ -ನಿಂಗಣ್ಣ ಯಾತನೂರ.ಸಮಾಜದ ಹಿರಿಯ ಮುಖಂಡರು ಮಲ್ಲಣ್ಣ ಹಡಪದ ಫರಹತಬಾದ.ನಾಗಣ್ಣ ಹಡಪದ ಮುತ್ತಕೋಡ್. ಸೋಮಣ್ಣ ಹಡಪದ ನರಿಬೋಳ.ಮುತ್ತಕೋಡ್. ಸುಭಾಷ್ ಹಡಪದ ಅಣದೂರ ಬೀದರ ಜಿಲ್ಲೆಯ ಪ್ರ.ಕಾರ್ಯದರ್ಶಿಗಳು, ತಾಲೂಕು ಕಾರ್ಯದರ್ಶಿ- ವಿನೋದ ಅಂಬಲಗಾ, ತಾ ಕಾರ್ಯಾಧ್ಯಕ್ಷರು ರಮೇಶ್ ಕವಲಗಾ, ಚಿತ್ತಾಪುರ ತಾಲೂಕಾಧ್ಯಕ್ಷ ರಮೇಶ್ ಕೊಲ್ಲೂರ.ಅಫಜಲಪುರ ತಾಲೂಕಾಧ್ಯಕ್ಷ ಮಹಾಂತೇಶ ಹವಳಗಾ ,ಶಹಾಬಾದ ತಾಲೂಕಾಧ್ಯಕ್ಷ ಸಿದ್ರಾಮ ಯಾಗಾಪೂರ. ನಗರದ ಘಟಕ ಪ್ರ.ಕಾರ್ಯದರ್ಶಿ ಶಂಭುಲಿಂಗ ಮುತ್ತಕೋಡ್. ಸಿದ್ದು ಹಡಪದ ಯಳಸಂಗಿ,ಸಂತೋಷ ಮದರಿ.ಮಲ್ಕಣ್ಣ ಜೇವರ್ಗಿ.ಸುನೀಲ್ ಕುಮಾರ ಭಾಗಹಿಪ್ಪರರ್ಗಾ,ಮಂಜು ಅವರಾದ.ಶಂಕರ ಹರವಾಳ. ಶಿವುಕುಮಾರ ಸಿಂದಗಿ.ಅನಿಲ ಯು ಲೈಕ್.ಕಂಠು ಹಡಪದ. ಹಣಮಂತ ನೆಲ್ಲೊಗಿ.ಮಹಾದೇವ ವಡಗೇರಿ ರಾವೂರ.ಬಸವರಾಜ ನಂದೆಳ್ಳಿ,ಅನಿಲ ಮಾರಡಗಿ, ಗೋಲ್ಲಾಳಪ್ಪ ಜೇರಟಗಿ.ಶಿವಪುತ್ರ ಜೇರಟಗಿ. ಶರಣು ಹಡಪದ ಕೊಲ್ಲೂರ.ಶಿವಲಿಂಗ ಹಡಪದ ಶಹಾಬಾದ,ಭಾಗಣ್ಣ ದಂಡಗುಂಡ. ಸಂಗಮೇಶ ಮಾರಡಗಿ.ಅರುಣ ಗೊಬ್ಬರ ಬಿ.ಗಣೇಶ ಮೇಳಕುಂದಾ.ರಮೇಶ ಕರಾರಿ. ಅಂಭ್ರೇಶ ಊಡಗಿ.ಬಸವರಾಜ ಕಲಗುರ್ತಿ,ಹಾಗೂ ಸಮಾಜದ ಅನೇಕ ಬಂಧುಗಳು ಈ ಹೋರಾಟದಲ್ಲಿ ಭಾಗವಹಿಸಿದರು. ಎಂದು ಕಲಬುರಗಿ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಡಪದ ತೊನಸನಹಳ್ಳಿ ತಿಳಿಸಿದರು.