ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾದ ಬಿ.ಆರ್ ಗವಾಯಿ ಯವರ ಮೇಲೆ – ಸಾಕ್ಸ್ ಎಸೆತ ಖಂಡಸಿ ಮನವಿ ಸಲ್ಲಿಕೆ.
ನರಗುಂದ ಅ.11





ಶನಿವಾರ ರಂದು ಗದಗ ಜಿಲ್ಲೆಯ ನರಗುಂದ ತಾಲೂಕಿನ ವಿವಿಧ ದಲಿತ ಸಂಘಟನೆ ಮತ್ತು ಕನ್ನಡ ಪರ ಸಂಘಟನೆ ವತಿಯಿಂದ ಸುಪ್ರೀಂಕೋರ್ಟಿನ ನ್ಯಾಯಾಧೀಶರಾದ ಬಿ.ಆರ್.ಗವಯಿಯವರ ಮೇಲೆ ಸಾಕ್ಸ್ ಎಸೆತ ಖಂಡಿಸಿ. ಮಾನ್ಯ ತಹಶೀಲ್ದಾರ ನರಗುಂದ ಅವರ ಮುಖಾಂತರ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಭಾರತ ದೇಶ ವಿವಿಧ ಧರ್ಮಗಳ, ವಿವಿಧ ಜಾತಿಗಳ, ವಿವಿಧ ಸಂಸ್ಕೃತಿಗಳ ಮತ್ತು ಆಚಾರ-ವಿಚಾರಗಳನ್ನು ಅಳವಡಿಸಿ ಕೊಂಡು ಸೌಹಾರ್ದತೆಯಿಂದ ಬದುಕುತ್ತಿರುವ ದೇಶ. ಇವಕ್ಕೆ ಪೂರಕವಾಗಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೇಶಕ್ಕೆ ನೀಡಿದ ಸಂವಿಧಾನದಲ್ಲಿ ಎಲ್ಲರೂ ಗೌರವದಿಂದ ಬದುಕಲು ಅವಕಾಶಗಳನ್ನು ಕಲ್ಪಿಸಿದ್ದಾರೆ. ಜಾತ್ಯಾತೀತ ಕಲ್ಪನೆಯನ್ನು ಸಹಿಸಲಾರದ ಮನುವಾದಿಗಳು. ಆಗಾಗ್ಗೆ ಸಂವಿಧಾನದ ಆಶಯಗಳಿಗೆ ಭಂಗ ತರುವ ತಂತ್ರಗಳು ನಡೆಯುತ್ತಿರುವುದು ಖಂಡನೀಯ ಉದಾರಣೆಗೆ ದಿನಾಂಕ 06-10-2025 ರಂದು ಸವೋಚ್ಚ ನ್ಯಾಯಾಲಯದಲ್ಲಿ ಸಂವಿಧಾನದ ಪ್ರಮುಖ ಕಂಬ ನ್ಯಾಯಾಂಗದ ಮೇಲೆ ಒಬ್ಬ ಮನುವಾದಿ ರಾಕೇಶ ಕಿಶೋರ ಎಂಬ ನ್ಯಾಯವಾದಿ ಸೋಗಿನ ಭಯೋತ್ಪಾದಕ ನ್ಯಾಯಾಧೀಶರಾದ ಬಿ.ಆರ್ ಗವಾಯಿ ಯವರ ಮೇಲೆ ತನ್ನ ಕಾಲಿನ ಬೂಟಿನ ಸಾಕ್ಸ್ ಎಸೆದಿರುವುದು ಭಾರತದ ಸಂವಿಧಾನಕ್ಕೆ ಅವಮಾನಿಸಿದಂತೆ ಯಾಗಿದೆ. ಈ ಭಯೋತ್ಪಾದನೆ ಘಟನೆಯನ್ನು ಖಂಡಿಸುವ ಮೂಲಕ ಸದರಿ ಕೋಮುವಾದಿ ಮತ್ತು ದೇಶದ್ರೋಹಿ ಗುಂಡಾ ನ್ಯಾಯವಾದಿಯನ್ನು ಯಾವುದೇ ಜಾಮೀನಿಗೆ ಅವಕಾಶವಿಲ್ಲದ ಕಾಯ್ದೆಯ ಮೂಲಕ ತಕ್ಷಣ ಪ್ರಮಾನ ಪತ್ರಗಳನ್ನು ಮುಟ್ಟುಗೋಲು ಹಾಕಿ ಕೊಳ್ಳಬೇಕು ಹಾಗೂ ಅವನ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಂಡು ಪುಂಡುಗಂಧಾಯ ವಿಧಿಸಿ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸುತ್ತಾ ಸಂವಿಧಾನದ ಆಶಯಗಳಿಗೆ ಭಂಗಬಾರದ ರೀತಿಯಲ್ಲಿ ಪ್ರಭುತ್ವ ಕ್ರಮ ಜರುಗಿಸಿ ಜಾತ್ಯಾತೀತ ರಾಷ್ಟ್ರ ನಿರ್ಮಾಣಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕೆಂದು ವಿವಿಧ ಸಂಘಟನೆಗಳು ಸೇರಿ ಮಾನ್ಯ ನರಗುಂದ ತಹಶೀಲ್ದಾರ ಮುಖಾಂತರ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ದತ್ತು ಜೋಗಣ್ಣವರ. ವಿಜಯ ಛಲವಾದಿ.ಶರಣಪ್ಪ ಛಲವಾದಿ ಮಂಜು ಜೋಗನ್ನವರ ಮಂಜುನಾಥ್ ಛಲವಾದಿ ಬಸು ಪೂಜಾರ ಸೇರಿದಂತೆ ಅನೇಕ ಸಂಘಟನಾತ್ಮಕ ಮುಖಂಡರು ಪಾಲ್ಗೊಂಡಿದ್ದರು.