“ಜಗದ ನಿಜವಾದುಗಳು ಜೀವನದ ಸಂದೇಶಗಳಾಗಿರಲಿ”…..

ಜ್ಞಾನ ಬುದ್ದಿ ಬಿತ್ತಿ ಹಂಚುತಲಿರಿ




ಹೇಳುವ ಕೇಳುವ ಮಾತು ಮೃದುವಾಗಿರಲಿ
ಕ್ಷಣ ಕ್ಷಣದ ಉಸಿರು ಹರುಷತನವಿರಲಿ
ವಿಶ್ರಾಂತಿಯ ನಿದ್ಧೆಯಲಿ ನಿಶ್ಚಿಂತತೆಯಿರಲಿ
ಶುಭ ಸಂಭ್ರಮದಲಿ ಉಡುಗೆ ಆಕರ್ಷಿತವಿರಲಿ
ದುರಾಭಿಮಾನದ ನಟನೆ ಯಾರ ಮನವು
ಗೆಲ್ಲದು
ಕಾಯಕ ಸಹಾಯದಲಿ ನಿಷ್ಠೆ ಪೂರ್ಣತೆಯಿರಲಿ
ಯೋಚನೆಗಳು ಮನವ ಕೆರಳಿಸದೇ ಅರಳಿಸಲಿ
ತನು ಮನದ ವರ್ತನೆಯಲಿ ಸಭ್ಯತೆ ಇರಲಿ
ವ್ಯವಹಾರದ ಗಳಿಕೆ ಉಳಿಕೆಯಲಿ
ನಿಯಮಿತವಿರಲಿ
ಮಾಡುವ ಖರ್ಚುಗಳಲಿ ಪ್ರಜ್ಞೆಯ ಅವಶ್ಯಕತೆ
ಇರಲಿ
ಜಗದ ನಿಜವಾದುಗಳು ಅನವರತ ಜೀವನದ
ಸಂದೇಶಗಳಾಗಿರಲಿ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.