ಶ್ರೀಮಾತೆ ಶಾರದಾದೇವಿಯವರ ಸಂಸಾರಿಕ ನಿರ್ಲಿಪ್ತತೆ ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶಿ – ಶ್ರೀಮತಿ ಕೆ.ಎಸ್ ವೀಣಾ ಅಭಿಮತ.
ಚಳ್ಳಕೆರೆ ಅ.13





ಶ್ರೀಮಾತೆ ಶಾರದಾದೇವಿಯವರ ಸಾಂಸಾರಿಕ ನಿರ್ಲಿಪ್ತತೆ ನಮ್ಮೆಲ್ಲರ ಬದುಕಿಗೆ ನಿತ್ಯ ಮಾರ್ಗದರ್ಶಿಯಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಕೆ.ಎಸ್.ವೀಣಾ ಅಭಿಪ್ರಾಯ ಪಟ್ಟರು.

ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಮಾತನಾಡುತ್ತಿದ್ದರು.

ಶ್ರೀಮಾತೆಯವರು ಆಧ್ಯಾತ್ಮಿಕ ಜೀವನದ ತುತ್ತತುದಿಯನ್ನು ತಲುಪಿದವರು. ಅವರ ಸಹನೆ, ಕರುಣೆ, ಸಾಮರಸ್ಯದ ಸದ್ಗುಣಗಳನ್ನು ಅನುಸರಿಸ ಬೇಕು ಎಂದು ಕಿವಿಮಾತು ಹೇಳಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀದೇವಿಸ್ತುತಿ” ಪಠಣ ಮತ್ತು ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಶಾಂತಮ್ಮ, ಕವಿತಾ ಗುರುಮೂರ್ತಿ, ವಿಜಯಲಕ್ಷ್ಮೀ, ಜಯಶೀಲಮ್ಮ, ಯತೀಶ್ ಎಂ ಸಿದ್ದಾಪುರ, ಶೈಲಜಾ, ಕೃಷ್ಣವೇಣಿ, ಸಂಗೀತ, ರಶ್ಮಿ, ಭ್ರಮರಂಭಾ, ವೀರಮ್ಮ, ಜಯಮ್ಮ, ದ್ರಾಕ್ಷಾಯಣಿ, ಮಂಗಳ, ಭಾಗ್ಯಲಕ್ಷ್ಮೀ, ಗೀತಾಲಕ್ಷ್ಮೀ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.