ಮಾನ್ವಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ – ಸಂಘದಿಂದ ಪಥ ಸಂಚಲನ.
ಮಾನ್ವಿ ಅ.13

ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಿಂದ ಪ್ರಮುಖ ವೃತ್ತಗಳ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಗಳು ಗಣವೇಶ ಧರಿಸಿ ಪಥ ಸಂಚಲನ ನಡೆಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಸಂಘದ ಶತಾಬ್ಧಿ ಅಂಗವಾಗಿ ನಡೆದ ಪಥ ಸಂಚಲನಕ್ಕೆ ಕಲ್ಮಠ ಸ್ವಾಮೀಜಿ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಗಂಗಾಧರ ನಾಯಕ ಸೇರಿದಂತೆ ಪ್ರಮುಖ ಮುಖಂಡರು ಇದ್ದರು.
ಪಟ್ಟಣದ ವಿವಿಧ ವಾರ್ಡಗಳಲ್ಲಿ ನಡೆದ ಪಥ ಸಂಚಲನದ ಮಾರ್ಗದುದ್ದಕ್ಕೂ ಹಾಗೂ ಪ್ರತಿ ಮನೆಗಳ ಮುಂದೆ ಮಹಿಳೆಯರು ರಂಗೋಲಿಗಳನ್ನು ಬಿಡಿಸಿ ಭಾಗವಧ್ವಜ ಹಾಗೂ ಗಣವೇಶಧಾರಿ ಸ್ವಯಂ ಸೇವಕರನ್ನು ಸ್ವಾಗತಿಸಿ ಪುಷ್ಪರ್ಚಾನೆ ಮಾಡಿ ಗೌರವಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ

