ಶ್ರೀ ಎಸ್.ಎಸ್ ಅಂಗಡಿ ಸಾಹಿತಿ ಬರಹಗಾರನಿಗೆ “ನಮ್ಮ ಊರು ನಮ್ಮ ಹೆಮ್ಮೆ” ದೇವರ ಹಿಪ್ಪರಗಿ – ಗೌರವ ಪ್ರಶಸ್ತಿ ಸನ್ಮಾನ.
ದೇವರ ಹಿಪ್ಪರಗಿ ಅ.15





ದೇವರ ಹಿಪರಗಿ “ನಮ್ಮ ಊರು ನಮ್ಮ ಹೆಮ್ಮೆ” ದೇವರ ಹಿಪ್ಪರಗಿ ಗ್ರಂಥಲೋಕಾರ್ಪಣೆ ಗೌರವ ಸನ್ಮಾನವನ್ನು ಸೈನಿಕ ನೆಲೆ ಪ್ರಕಾಶ ಬೆಂಗಳೂರು ಸಂಪಾದಕತ್ವದಲ್ಲಿ ಶ್ರೀಕಲ್ಮೇಶ್ವರ ದೇವಾಲಯದ ಸಭಾ ಭವನದಲ್ಲಿ ಶ್ರೀಮನಿಪ್ರ ಮಡಿವಾಳೇಶ್ವರ ಸ್ವಾಮಿಜಿಗಳು, ಹಾಗೂ ಪರಮ ಪೂಜ್ಯ ಸ್ವಾಮಿಗಳು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು. ಸಂಪಾದಕರಾದ ರಾಜೇಂದ್ರ ನಾಡಗೌಡ ಪ್ರಾಸ್ತಾವಿಕ ನುಡಿ ಹಾಲಿನಲ್ಲಿ ಬೆಣ್ಣಿತರಹ ಲೇಖಕರ ಸಾಹಿತ್ಯವಿರುತ್ತದೆ. ಎಂದರು ಕೃತಿ ಸ್ಮರಿಸಿದರು ಪರಮ ಪೂಜ್ಯರಾದ ಶ್ರೀಮಡಿವಾಳೇಶ್ವರ ಶ್ರೀಗಳು “ನಮ್ಮ ಊರು -ನಮ್ಮ ಹೆಮ್ಮೆ”ದೇವರ ಹಿಪ್ಪರಗಿ ಕೃತಿ ಬಿಡುಗಡೆಗೊಳಸಿ, ಒಂದು ಗ್ರಂಥ ನೂರು ತಾಯಿಂದಿರ ಗುಣ ಸ್ವಭಾವ ವಿಶ್ವದಿ ಬೆಳಗುವುದು ಕವಿ ಅಳಿದರೂ ಕೃತಿ ಕಾವ್ಯ ಅಮರ ಜಗದಲಿ ಸದಾ ಪ್ರಜ್ವಲಿಸುತ್ತದೆ. ಸರ್ವ ಸಭಿಕರಿಗೂ ಆಶೀರ್ವಚನ ನೀಡಿ ಶುಭ ಹಾರೈಸಿದರು.ಆರ್ ಆರ್ ಮಣ್ಣೂರವರು ಜಗವೆಲ್ಲ ಸುತ್ತಿ ಬಂದರು, “ನಮ್ಮ ಊರು- ನಮ್ಮ ಹೆಮ್ಮೆ” ದೇವರ ಹಿಪ್ಪರಗಿ ಅಭಿಮಾನ ಕೃತಿ ಪರಿಚಯ ಮಾಡಿದರು. ಗೌರವ ಸಂಪಾದಕರಾದ ಶ್ರೀ ರಾಜೇಂದ್ರ ಕೃ ನಾಡಗೌಡರವರು ತಮ್ಮ ಕೃತಿಯ ಕುರಿತು ಮಾತನಾಡಿದರು. ಸ್ಯೆನಿಕ ನೆಲೆ ಪ್ರಕಾಶನ ಬೆಂಗಳೂರ “ನಮ್ಮ ಊರು ನಮ್ಮ- ಹೆಮ್ಮೆ” ದೇವರ ಹಿಪ್ಪರಗಿ ಗ್ರಂಥಲೋಕಾರ್ಪಣೆ ಕಾರ್ಯಕ್ರಮದಲ್ಲಿ ವೃತ್ತಿಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೃತ್ತಿಯಲ್ಲಿ ಸಾಹಿತ್ಯ ಬರಹಗಾರರಾದ ಶ್ರೀದೇಶಂಸು ಸುರೇಶ ಶಂಕ್ರೆಪ್ಪ ಅಂಗಡಿ, ಸುಷ್ಮಾ ನಾಯಕ, ವಿಜಯಲಕ್ಷ್ಮಿ ಮೇಟಗಾರ, ಮುರಗೇಂದ್ರ ವಾಲಿ, ದಾನಪ್ಪ ಸಜ್ಜನರವರುಗಳಿಗೆ ಗೌರವ ಸಂಪಾದಕಾರದ ರಾಜೇಂದ್ರ ಕೃ ನಾಡಗೌಡ ಪರಮ ಪೂಜ್ಯ ಶ್ರೀಸದ್ಗುರು ದತ್ತಪ್ಪಯ್ಯ ಸ್ವಾಮಿಗಳು, “ನಮ್ಮ ಊರು- ನಮ್ಮ ಹೆಮ್ಮೆ” ದೇವರಹಿಪ್ಪರಗಿ ಊರಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಶುಭ ಹಾರೈಸಿದರು. ಸೈನಿಕ ನೆಲೆ ಪ್ರಕಾಶಕರಾದ ನಿತಿನ ರಾ ನಾಡಗೌಡ “ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು” ಕುರಿತು ಉಪನ್ಯಾಸ ನೀಡಿದರು. “ನಮ್ಮು ಊರು ನಮ್ಮ ಹೆಮ್ಮೆ” ದೇವರ ಹಿಪ್ಪರಗಿ ಕಾರ್ಯಕ್ರಮದಲ್ಲಿ ನಾಡಗೌಡರ ಪರಿವಾರ ಸಮಸ್ತ ಗೆಳಯರ ಬಳಗ, ಸಾಹಿತ್ಯಾಭಿಮಾನಿಗಳು ಪಟ್ಟಣದ ಪ್ರಮುಖ ಗಣ್ಯ ಮಾನ್ಯರು ಉಪಸ್ಥಿತರಿದ್ದರು. ವೈಷ್ಣವಿ ಪ್ರರ್ಥನೆ,ನಾಗರಾಜ ಬಿರಾದಾರ ನಿರೂಪಿಸಿದರು ಶ್ರೀಧರ ನಾಡಗೌಡ ವಂದಿಸಿದರು.