ದಲಿತ ವಿರೋಧಿ ಕುಕನೂರ ಠಾಣಾ ಪಿ.ಎಸ್.ಐ ಗುರುರಾಜ ಈ ಕೂಡಲೇ ಬಂಧನ ಮಾಡದಿದ್ದರೆ, ದಲಿತ ಸಂಘಟನೆಗಳ ಒಕ್ಕೂಟದ ಮೂಲಕ ಹೋರಾಟದ – ಎಚ್ಚರಿಕೆ ಮಂಜುನಾಥ್ ಬುರುಡಿ.
ಕುಕನೂರ ಅ.15





ಬಸವಣ್ಣ ನವರ, ಬಸವಾದಿ ಶರಣರ ಅನುಯಾಯಿ, ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅನುಯಾಯಿ, ಸಾಮಾಜಿಕ ನ್ಯಾಯದ ಪರವಾಗಿ ಸದಾ ಧ್ವನಿ ಮಾಡುವ ನಿಷ್ಟಾವಂತ ಹೋರಾಟಗಾರ, ಕೆ.ಪಿ.ಸಿ.ಸಿ ರಾಜ್ಯ ಕಾರ್ಯದರ್ಶಿ ಕಾರ್ಮಿಕ ವಿಭಾಗ ಹುದ್ದೆಯಲ್ಲಿರುವ ಆತ್ಮೀಯ ಸಹೋದರ ಹಿರೇಮನಿ ಗಾಳೆಪ್ಪ ಅವರು ಕೊಪ್ಪಳ ಜಿಲ್ಲಾ ಕುಕನೂರ ಪೋಲಿಸ್ ಠಾಣೆಗೆ ಅಕ್ಟೋಬರ್ 14 ರಂದು ಸಂಬಂಧಿಕರ ದೂರಿನ ವಿಚಾರಣೆಗೆ ಹೋದಾಗ ಕುಕನೂರ ಠಾಣಾ ಪಿ.ಎಸ್.ಐ ಗುರುರಾಜ ಅವರಿಂದ ಏಕಾಏಕೀ ಹಲ್ಲೆ ಮಾಡುವುದರ ಜೊತೆಗೆ ಅವಾಚ್ಯ ಶಬ್ಧಗಳಿಂದ ಜಾತಿ ನಿಂದನೆ ಮಾಡಿದ್ದು. ನಿಜಕ್ಕೂ ಇದೊಂದು ಸಮಾಜಕ್ಕೆ ಮಾರಕವಾದ ಸಂಗತಿ. ನ್ಯಾಯ ಕೇಳಲು ಠಾಣೆಗೆ ಹೋಗಿರುವ ಗಾಳೆಪ್ಪ ಅವರ ಮೇಲೆ ಪೊಲೀಸರು ಈ ರೀತಿಯ ಕೃತ್ಯವನ್ನು ಎಸೆಗಿರುವುದು ಎಷ್ಟರ ಮಟ್ಟಿಗೆ ಸರಿ.


ಜಾತಿವಾದಿ ಕ್ರಿಮಿ
ಎಂದು ತಕ್ಷಣವೇ ಎಚ್ಚೆತ್ತುಕೊಂಡ ದಲಿತ ಸಂಘಟನೆಗಳು ಹಾಗೂ ಮಾದಿಗ ಮುಖಂಡರು, ಹೋರಾಟಗಾರರು ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕುಕನೂರ ಠಾಣೆಯ ಪಿ.ಎಸ್ಐ ಗುರುರಾಜ ಅವರನ್ನು ತಕ್ಷಣವೇ ಅಮಾನತ್ತು ಮಾಡಬೇಕೆಂದು ಮತ್ತು ಅವರ ವಿರುದ್ಧ FIR ದಾಖಲಿಸಲೇ ಬೇಕು ಎಂದು ತಡರಾತ್ರಿ 12 ವರೆಗೂ ಹೋರಾಟ ಮಾಡಿದ್ದು.ಹೋರಾಟಕ್ಕೆ ಮಣಿದು ಪಿ.ಎಸ್.ಐ ಗುರುರಾಜ ಅವರನ್ನು ಅವನತ್ತು ಮಾಡಿದ್ದು ಹೋರಾಟಕ್ಕೆ ಸಂದ ಜಯ.ಸಹೋದರನಿಗೆ ಆದ ಅನ್ಯಾಯಕ್ಕೆ ನ್ಯಾಯ ಸಿಗಬೇಕು ಮತ್ತು ಈ ಕೂಡಲೇ ಪಿ.ಎಸ್.ಐ ನ್ನು ಜಾತಿ ನಿಂದನೆ ಕೇಸನ ಅಡಿಯಲ್ಲಿ ಬಂಧನ ಮಾಡಬೇಕು ನೊಂದು ಗಾಳೇಪ್ಪ ಹಿರೇಮನಿಯ ಅವರಿಗೆ ನ್ಯಾಯ ಕೊಡಬೇಕು.


ಅಂದಾಗ ಇಂತಹ ನೀಚ್ ಕೃತ್ಯ ಮಾಡುವ ಮುನ್ನ ಮುಂದಿನ ವ್ಯಕ್ತಿಗೆ ಎಚ್ಚರಿಕೆಯ ಘಂಟೆ ಯಾಗಬೇಕು ಅವರನ್ನು ಬಂಧನ ಮಾಡದಿದ್ದರೆ ಎಲ್ಲಾ ಕಡೆ ರಾಜ್ಯದಾದ್ಯಂತ ಬಂದ್ ಕರೆ ಕೊಡುತ್ತೇವೆ ಎಂದು ಈ ಮೂಲಕ ಎಚ್ಚರಿಕೆ ಹೇಳಬಯಸುತ್ತೇವೆ ಮಂಜುನಾಥ ಬುರಡಿ ಆದಿಜಾಂಬವ ಯುವ ಬ್ರಿಗೇಡ್ ಬೆಳಗಾವಿ ವಿಭಾಗೀಯ ಸಂಚಾಲಕರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.