ಆರ್.ಎಸ್.ಎಸ್ ಪಥ ಸಂಚಲನಕ್ಕೆ ಪರವಾನಿಗೆ ನೀಡಬಾರದು ಎಂದು ಸಿಂದಗಿ ತಹಶಿಲ್ದಾರರಿಗೆ ಮನವಿ.
ಸಿಂದಗಿ ಅ.15





ಪಟ್ಟಣದಲ್ಲಿ ಆರ್.ಎಸ್.ಎಸ್ ಸಂಘಟನೆಯ ಕಾರ್ಯಕರ್ತರು ಲಾಟಿ ಬಡಿಗೆ, ಕೋಲು ಕೈಯಲ್ಲಿ ಹಿಡಿದು ಕೊಂಡು ಪಥ ಸಂಚಲನ ಮಾಡುವುದನ್ನು ತಡೆಯ ಬೇಕು. ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ. ಸಿಂದಗಿ ಪಟ್ಟಣದಲ್ಲಿ ದಿನಾಂಕ 18/10/2025 ರಂದು ಆರ್.ಎಸ್.ಎಸ್ ಸಂಘಟನೆಯ ಕಾರ್ಯಕರ್ತರು ಹಾಗೂ ಮುಖಂಡರು ಸೇರಿಕೊಂಡು ಶತಾಬ್ದಿಯ ಹೆಸರಲ್ಲಿ ಕೈಯಲ್ಲಿ ಮಾರಕಾಸ್ತ್ರ ಲಾಟಿ ಕೋಲು, ಬಡಿಗೆ ಹಿಡಿದು ಕೊಂಡು ಬೀದಿಗಳಲ್ಲಿ ಜನರನ್ನು ಭಯ ಭೀತರನ್ನಾಗಿ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ದೇಶದಲ್ಲಿ ಸುಭದ್ರವಾದ ಸಂವಿಧಾನ ಇದೆ ಇಲ್ಲಿ ಎಲ್ಲರೂ ಸಂವಿಧಾನದ ಅಡಿಯಲ್ಲಿಯೇ ಧಾರ್ಮಿಕ, ಸಾಮಾಜಿಕ ರಾಜಕೀಯ ಕಾರ್ಯಕ್ರಮಗಳು ಮಾಡಬೇಕಾಗತ್ತೆ. ಆದ್ರೆ ಇಲ್ಲಿ ಈ ಸಂಘಟಬೆಯವರು ಕೈಯಲ್ಲಿ ಮಾರಾಕಾಸ್ತ್ರ ಹಿಡಿದುಕೊಂಡು ಬೀದಿ ಬೀದಿಗಳಲ್ಲಿ ಪಥ ಸಂಚಲನ ಅಥವಾ ಪ್ರಭಾತ ಪೇರಿ ಮಾಡುವುದು ಸಂವಿಧಾನ ವಿರೋಧಿ ಚಟುವಟಿಕೆ ಆಗಿದೆ. ಅಂಥವರ ಮೇಲೆ ತಾಲೂಕಾಡಳಿತ ಸೂಕ್ತ ಕ್ರಮ ಕೈಗೊಳ್ಳ ಬೇಕು. ಕಾನೂನಿನಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಪಥ ಸಂಚಲನ ಮಾಡಲು ಅವಕಾಶ ಇದ್ರೆ..! ನಮಗೂ ಕೂಡಾ ಪರವಾನಿಗೆ ಮತ್ತು ಸೂಕ್ತ ಬಂದೋಬಸ್ತ ನೀಡಬೇಕಾಗಿ ತಮ್ಮಲ್ಲಿ ಕೇಳಿ ಕೊಳ್ಳುತ್ತೇವೆ ದಯಾಳುಗಳಾದ ತಾವು ಈ ಸೂಕ್ಷ್ಮತೆಯನ್ನು ಅರ್ಥೈಸಿಕೊಂಡು ಆರ್.ಎಸ್.ಎಸ್ ಸಂಘಟನೆಯ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕೈಯಲ್ಲಿ ಲಾಟಿ ಹಿಡಿದುಕೊಂಡು ಪಥ ಸಂಚಲನ ಮಾಡಲಿಕ್ಕೆ ಪರವಾನಿಗೆ ನೀಡಬಾರದು ಹಾಗೇನೇ ಆ ಪಥ ಸಂಚಲನ ನಿಷೇಧಿಸಬೇಕು ಎಂದು ಸಿಂದಗಿ ತಹಶಿಲ್ದಾರರಿಗೆ ಟಿಪ್ಪು ಕ್ರಾಂತಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ದಸ್ತಗೀರ ಮುಲ್ಲಾ ಅವರು ಹಾಗೂ ಮುಖಂಡರು ಕೂಡಿ ಮನವಿ ಸಲ್ಲಿಸಿದರು.ರಜಾಕ.ನಾಟಿಕರ ಉತ್ತರ ಕರ್ನಾಟಕ ಅಧ್ಯಕ್ಷರು ಟಿ.ಕೆ.ಎಸ್ ಇಮ್ರಾನ್ ಬಳಗಾನೂರ್ ನಗರ ಘಟಕ ಅಧ್ಯಕ್ಷರು ಅರಿಫ್ ದೋನಿವಾಲೇ ಇಬ್ರಾಹಿಂ ನಾಟಿಕಾರ ಅಲ್ತಾಫ ಮುಗಳಿ. ಶಬ್ಬೀರ. ಪಟೇಲ್ ರಜಾಕ.ಪಟೇಲ್ ಅಮೀರ. ನಾಟಿಕಾರ ಝುಬೆರ ಬಾಗವಾನ ಅಬ್ಬಾಸ ಆಸಿಫ್ ಇಂಡೀಕರ್ ಹುಸೇನ್ ನದಾಫ್ ಹಾಗೂ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ