ವಿಜಯಪುರದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ , ಸುಧಾರಿಸದ ಸಮಾಜ?

ಇಂದು ಮುದ್ದೇಬಿಹಾಳ ತಾಲ್ಲೂಕಿನ ಬನೋಶಿಗ್ರಾಮದಲ್ಲಿ ಚಿಕ್ಕ ಕಂದಮ್ಮ ಕು.ಬಸಮ್ಮ ಮಾನಪ್ಪ ಚಲವಾದಿ ಅವಳ ಮೇಲಾದ ಅತ್ಯಾಚಾರ ಹಾಗೂ ಕೊಲೆ ಪ್ರಕರಣನಿಜಕ್ಕೂ ಅವಮಾನವೀಯ ಹಾಗೂ ಖಂಡನೀಯವಾಗಿದೆ ಇಂತಹ ಪೈಶಾಚಿಕ ಕೃತ್ಯ ನಮ್ಮ ಜಿಲ್ಲೆಯಲ್ಲಿ ನಡೆದಿರುವುದು ಎಲ್ಲರಿಗೂ ನಾಚಿಕೆಗೇಡಿನ ಸಂಗತಿಯಾಗಿದೆ ಯಾರೆ ಈ ಪ್ರಕರಣದಲ್ಲಿ ಹಾಗೂ ಎಷ್ಟೇ ಪ್ರಭಾವಿಗಳಿದ್ದರೂ ಅವರನ್ನು ಉಗ್ರವಾದ ಶಿಕ್ಷೆಗೆ ಗುರಿಪಡಿಸುವ ಹಾಗೆ ಆಗಬೇಕು ಹಾಗೂ ತಾಲೂಕಾ ಆಡಳಿತ ಮತ್ತು ಪೊಲೀಸ ಇಲಾಖೆ ಅಪರಾಧಿಗಳನ್ನು ಹೆಡೆಮುರಿಕಟ್ಟಿ ಆದಷ್ಟು ಬೇಗ ಬಂಧಿಸಲೇಬೇಕು…

‘ಹೆಣ್ಣು ಸಮಾಜದ ಕಣ್ಣು’ನಿಜವಾಗಿಯೂ ಹೆಣ್ಣು ಸಮಾಜದ ಕಣ್ಣಷ್ಟೆ ಅಲ್ಲ ಹೆಣ್ಣು ಜಗತ್ತಿನ ಸೃಷ್ಟಿ ಮೂಲರೂಪ ‘ಹೆಣ್ಣು’ ಇಂದೆಲ್ಲ ಬಾಹ್ಯಪ್ರಪಂಚದಲ್ಲಿ ಮನುಷ್ಯ ಏನೇ ಆಗಿದ್ದರೂ ಅದಕ್ಕೆ ಮೂಲಕಾರಣಿಕರ್ತಳೂ ಹೆಣ್ಣು!ಇಂದಿನ ಈ ಯುಗದಲ್ಲಿ ಸಮಾಜದಲ್ಲಿ ಸಮಾನತೆ ಪ್ರಾಧಾನ್ಯತೆಯಾದರೂ ಹೆಣ್ಣು- ಗಂಡು ಸಮಾನರು ಎಂದಾದರೂ ಹೆಣ್ಣಿನ ಶೋಷಣೆ ಮಾತ್ರ ನಿಲ್ಲುತ್ತಿಲ್ಲ,ಅತ್ಯಾಚಾರ, ಅನಾಚಾರಗಳಿಂದಷ್ಟೇ ಅಲ್ಲದೇ ಸಮಾಜದಲ್ಲಿ ಎಲ್ಲ ಸ್ಥರ ಆಯಾಮಗಳಿಂದಲೂ ಹೆಣ್ಣು ಶೋಷಣೆಗೊಳಪಡುತ್ತಿದ್ದಾಳೆ

ಇದೊಂದು ಅತೀ ಅಮಾನವೀಯವಾಗಿದ್ದು ಅತ್ಯಾಚಾರ ಪ್ರಕರಣಗಳು ನಡೆದಾಗ ಬಲವಾದ ಕಾನೂನಿನ ಕೊರತೆ ಒಂದೆಡೆಯಾದರೆ,ಬಲವಾದ ಶಿಕ್ಷೇ ಅತ್ಯಾಚಾರ ಅಪರಾಧಿಗಳಾಗದಿರುವವರಿಗೆ ನೀಡದಿರುವುದ ಸಹ ಅಂತಹ ಅಮಾನುಷ ಘಟನೆಗಳಾದ ಬರಿ ಮೊಂಬತ್ತಿ ಬೆಳಗಿ ಪ್ರತಿಭಟನೆಗೈದು ಬರಿ ಸಾಂತ್ವಾನಗಳಿಗಷ್ಟೇ ಸೀಮಿತವಾಗಿದೆ,ಮರುಕಪಟ್ಟು ನಾಲ್ಕು ದಿನ ಕೊರಗಿ ಸರ್ವೇಸಾಧಾರಣ ಜೀವನ ಸಾಗಿಸುವುದು ಸದ್ಯದ ಪರಿಸ್ಥಿತಿಯಾಗಿದೆ,ಇದು ನಿಜಕ್ಕೂ ಅತ್ಯಾಚಾರದಂತಹ ಹೀನ ಪ್ರಕರಣಗಳು ಹೆಚ್ಚಲು ಇದು ಕೂಡಾ ಒಂದು ಕಾರಣವಾಗಿದೆ..ಹೆಣ್ಣು ಶಿಶುವಾಗಿದ್ದಾಗಲೇ ಭ್ರೂಣ ಹತ್ಯೆ,ಶಿಶು ಹತ್ಯೆ ಒಂದೆಡೆಯಾದರೆ ಯವ್ವಾನವಸ್ಥೆಯಾಗೆ ಬರುತ್ತಿದ್ದಂತೆ ಹೆಣ್ಣುಬಾಕ ಅತ್ಯಾಚಾರಿಗಳ ಕಾಟ,ಮದುವೆ ಮಾಡಿದಾಗ ವರದಕ್ಷಿಣೆ ಕಿರುಕುಳ,ಇತ್ತಿಚೆಗೆ ಬಂಗಾಳದಲ್ಲಿ ಜರುಗಿದ ವೈದ್ಯ ಹತ್ಯೆ ”ವೈದೋ ನಾರಾಯಣ ಹರಿ’ ಎನ್ನುವ ಜೀವ ಉಳಿಸುವ ವೈದ್ಯೆಯನ್ನು ಅಮಾನುಷವಾಗಿ ಅತ್ಯಾಚಾರಗೈದು ಬರ್ಬರವಾಗಿ ಹತ್ಯೆಗೈದ ಪ್ರಸಂಗ ನಿಜಕ್ಕೂ ನಾಗರಿಕ ಸಮಾಜತಲೆತಗ್ಗಿಸುವ ಕೆಲಸವಾಗಿದೆ,ದೆಹಲಿಯ ನಿರ್ಭಯಾ ಪ್ರಕರಣ,ವಿಜಯಪುರದ ದಾನಮ್ಮ ಪ್ರಕರಣ,ಹೆಣ್ಣುಬಾಕರ ಉದಾಹರಣೆಗೆ ಹುಬ್ಬಳ್ಳಿಯ ನೇಹಾಪ್ರಕರಣ,ಅಂಜಲಿ ಅಂಬಿಗೇರ ಪ್ರಕರಣ ಒಂದೇ ಎರಡೇ ,ಭಾರತವೂ ಯಾವಾಗಲೂ ಅಹಿಂಸೆ ಪ್ರತಿಪಾದಿತ ರಾಷ್ಟ್ರವಾಗಿದ್ದು ಇಲ್ಲಿ ಇಂತಹ ಹೀನ ಕೃತ್ಯಗಳಿಗೆ ಅರಬ್ ರಾಷ್ಟ್ರಗಳ ಮಾದರಿಯ ಶಿಕ್ಷೇ ಅವಶ್ಯಕವಾಗಿದೆ ಆದರೂ ಕೆಲವೊಮ್ಮೆ ಶಿಕ್ಷೆಯೊಂದೆ ಇದಕ್ಕೆ ತಕ್ಕ ಪರಿಹಾರವಲ್ಲವೆನಿಸಿದರೂ,ಹೀನ ಕೃತ್ಯಗಳನ್ನು ಅನುಭವಿಸಿದವರ ಮೂಕರೋಧನೆ ಕಂಡಾಗ ನಿಜಕ್ಕೂ ಇಂತಹ ಕಾನೂನಿನ ಅನವಶ್ಯಕತೆ ಇದೆ ಎನಿಸುತ್ತದೆ ಹೈದರಾಬಾದನ ಅತ್ಯಾಚಾರ ಪ್ರಕರಣದಲ್ಲಿ ಶಿವರಾಜ್ ಸಜ್ಜನರವರು ತೋರಿದ ದಿಟ್ಟತನ ನಿಜಕ್ಕೂ ಆ ವ್ಯಕ್ತಿಯ ಧೈರ್ಯದಿಂದ ಆ ಸಾವಿಗೆ ನ್ಯಾಯ ದೊರಕಿದಂತಾಯ್ತು ಎನ್ನುವ ನೆಮ್ಮದಿಯ ನಿಟ್ಟುಸಿರಿನ ಭಾವನೆ ನಿಜಕ್ಕೂ ಆ ಸಮಯದಲ್ಲಿ ವ್ಯಕ್ತವಾಗಿತ್ತು..

ಈಗಿನ ಕಾಲದಲ್ಲಿ ಕಾಮತೃಷೇ ಎನ್ನುವುದು ಹೆತ್ತ ಮಕ್ಕಳನ್ನ ಸಹಬಿಡದಂತ ಕಾಮುಕರ ಅಟ್ಟಹಾಸದ ಸಮಾಜದಲ್ಲಿ ಇಂತಹ ಕಾನೂನಿನ ನಿಜಕ್ಕೂ ಮುಂಬರುವ ಪೀಳಿಗೆಯಲ್ಲಿ ಅತ್ಯಾಚಾರದ ಕುರಿತು ಅದರ ಅಪರಾಧದ ಕುರಿತು ಇಂತಹ ಕಾನೂನಿನ ಅರಿವಿನಿಂದ ಭಯಹುಟ್ಟಿಸುವಂತಿರಬೇಕು ಅಂದಾಗ ಮಾತ್ರ ಅತ್ಯಾಚಾರ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತ ಸಾಗುತ್ತದೆ..ದಯವಿಟ್ಟು ನಾಲ್ಕು ಸಾಂತ್ವನ ಮಾತುಗಳಿಂದ ಹೆತ್ತ ಕರುಳಲ್ಲಿ ನಾವು ನ್ಯಾಯ ದೊರಕಿಸಿ ಕೊಡಲು ಸಾಧ್ಯವಿಲ್ಲ ಆ ಅಪರಾಧಿ ಕೊಲೆಗಡುಕರನ್ನು ಗಲ್ಲಿಗೇರಿಸುವಂತಹ ಹೀನ ಕೃತ್ಯ ಕೈಗೊಂಡಾಗ ಮಾತ್ರ ಅ ತಾಯಿ ಆತ್ಮಕ್ಕೆ ಶಾಂತಿ ಸಿಗಲಿ ..ಬಸಮ್ಮ ಸಾವಿಗೆ ನ್ಯಾಯ ಸಿಗಲಿ..

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button