“ಸ್ವಚ್ಛ ಮನ ಶುದ್ಧ ಹೃದಯವೇಜೀವನ ಕವನ”…..

ಏಕಾಂಗಿಯಾದರೂ ಪರವಾಗಿಲ್ಲ




ಶಾಂತಿ ನೆಮ್ಮದಿ ಇರುತ್ತೆ
ಅಂವ ನಮ್ಮವ ಇಂವ
ಅವಶ್ಯಕ ಇರುವಡೆ ಮಾತ್ರ
ಮನವೆ ಸುಮ್ಮನೆ ಕೊರಗಿ
ಸೊರಗದಿರು
ಅವರಿಂದಲೆ ಎಲ್ಲಾ ಅಲ್ಲ
ಇಚ್ಛೆ ಮೆಚ್ಚಿಗೆ ಇರುವವನೇ ನಿಜನು
ದೂರ ಇದ್ದವನು ಹೃದಯವಂತ
ಸದಾ ನೆನಪಿನಂಗಳದಲಿ
ಕಾರಣವಿಲ್ಲದೇ ದ್ವೇಷಿಸುವರು
ಹತ್ತಿರವೇ ಬೇಡ
ಜಗದಲ್ಲಿ ಯಾವ ಜೀವಿಯೂ
ಶಾಶ್ವತ ಅಲ್ಲ
ಸರ್ವ ಸಿರಿಯ ಸಂತೃಪ್ತಿ ನೆಮ್ಮದಿ
ಜೀವನ ನಮ್ಮದು
ಸ್ವಚ್ಛ ಮನ ಶುದ್ಧ ಹೃದಯವೇ
ಜೀವನ ಕವನ.
ಶ್ರೀ ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ