ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ರೈತ ಮೋರ್ಚಾ ನಡೆಸಿದ ಧರಣಿ ಸತ್ಯಾಗ್ರಹ – ಎರಡನೇ ದಿನಕ್ಕೆ ಕಾಲಿಟ್ಟಿದು.
ಸಿಂದಗಿ ಅ.16





ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಆಲಮೇಲ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕಾಗಿ ಆಹೋರಾತ್ರಿ ಧರಣಿ ಸತ್ಯಾಗ್ರಹ ಇಂದು ಎರಡನೇ ದಿನಕ್ಕೆ ಬಾರಿ ಬೆಂಬಲ ವ್ಯಕ್ತಪಡಿಸಿದರು.ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಆಲಮೇಲ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೆ ಒಳಗಾದ ಪ್ರತಿ ರೈತರಿಗೂ ಒಂದು ಎಕರೆಗೆ 50 ಸಾವಿರ ರೂಪಾಯಿ ನೀಡಬೇಕು, ರೈತರು ಕಬ್ಬಿಗೆ ಪ್ರತಿ ಟನ್ ಗೆ 4.500 ಬೆಂಬಲ ಬೆಲೆ ನೀಡಬೇಕು, ಮಳೆಯಿಂದ ಬಿದ್ದ ಮನಗಳಿಗೆ 5 ಲಕ್ಷ ರುಪಾಯಿ ನೀಡಬೇಕು, ಭೀಮಾ ಪ್ರವಾದಿಯಿಂದ ಬಾಧಿತವಾದ ಗ್ರಾಮಗಳನ್ನು ಸ್ಥಳಾಂತರಸ ಬೇಕು,ಬಹು ವಾರ್ಷಿಕ ತೋಟಗಾರಿಕೆ ಬೆಳೆಗಳಿಗೆ ಒಂದು ಎಕರೆಗೆ 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು,

ಸಿಂದಗಿ ಮತ್ತು ಆಲಮೇಲ ತಾಲೂಕಿನ ಹದಗಟ್ಟ ರಸ್ತೆಗಳನ್ನು ಕೂಡಲೇ ಸುಧಾರಣೆ ಮಾಡಬೇಕು, ಈ 6 ಬೇಡಿಕೆಗಳನ್ನು ಈಡೇರಿಸುವರಿಗೆ ನಮ್ಮ ಧರಣಿ ಸತ್ಯಾಗ್ರಹ ಮುಂದುವರೆಯುವುದು ಎಂದು ಸಿಂದಗಿ ಮತ ಕ್ಷೇತ್ರದ ಮಾಜಿ ಶಾಸಕರಾದ ರಮೇಶ ಭೂಸನೂರ್ ಹೇಳಿದರು.ಇಂದು ಎರಡನೇ ದಿನದ ಧರಣಿ ಸತ್ಯಾಗ್ರಹಕ್ಕೆ ಆಲಮೇಲ.ದೇವಣಗಾಂವ. ಕಡಣಿ. ತಾವರಖೇಡ. ತಾರಾಪುರ. ಮದನಹಳ್ಳಿ ಗುಂದಗಿ. ಕನ್ನೊಳ್ಳಿ ಬೋರಗಿ ಬಂದಾಳ ಹಾಗೂ ಸಿಂದಗಿ ಮತ ಕ್ಷೇತ್ರದ ವಿವಿಧ ಗ್ರಾಮದಿಂದ ನೂರಾರು ರೈತರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ರಮೇಶ ಭೂಸನೂರ್ ಮಾಜಿ ಶಾಸಕರು ಸಿಂದಗಿಸಂತೋಷ್ ಪಾಟೀಲ್ ಡಂಬಳ ಮಂಡಲ ಅಧ್ಯಕ್ಷರು ಸಿಂದಗಿ ಪಿ.ಎಚ್ ಬಿರಾದಾರ ಮಡಿವಾಳಪ್ಪ ಗೌಡ ಪಾಟೀಲ ಪೀರು ತಳವಾರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರುಗುರು ತಳವಾರ ಸಿಂದಗಿ ಮಂಡಲ ಪ್ರಧಾನ ಕಾರ್ಯದರ್ಶಿಸಿದ್ದು ಅನಗೊಂಡ ಶಂಕ್ರಪ್ಪ ಬಗಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಯಲ್ಲಪ್ಪ.ಹಾದಿಮನಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಸಿದ್ದು ಬುಳ್ಳ ಬಸವರಾಜ್ ಹೂಗಾರ್ ಡಾ, ಸಂಜು ಕುಮಾರ್ ಎಂಟಮಾನ ಶ್ರೀಶೈಲ್ ಭೋವಿ ಹರೀಶ್ ಎಂಟಮಾನ ವಿಶ್ವನಾಥ್ ಹಿರೇಮಠರಾಜಕೀಯ ಹಿರಿಯ ಮುಖಂಡರು ಪಕ್ಷದ ಕಾರ್ಯಕರ್ತರು ಭಾಗವಹಿಸಿ ತಮ್ಮ ಬೆಂಬಲವನ್ನು ನೀಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ