ನ್ಯಾಯಮೂರ್ತಿ ಸಿ.ಜೆ.ಐ ಬಿ.ಆರ್ ಗವಾಯಿ ಮೇಲೆ ಶ್ಯೂ ಎಸೆತಕ್ಕೆ – ಕಠಿಣ ಕ್ರಮಕ್ಕೆ ಆಗ್ರಹ.
ನರಸಿಂಹರಾಜಪುರ ಅ.15





ಭಾರತ ದೇಶದ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗಗಳು ಸರ್ವ ಶ್ರೇಷ್ಠವಾದವು ಆದರೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಿ.ಜೆ.ಐ ಬಿ.ಆರ್ ಗವಾಯಿ ರವರ ಮೇಲೆ ಶ್ಯೂ ಎಸೆದ ರಾಕೇಶ್ ಕಿಶೋರನ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಕೇಸು ದಾಖಲಿಸಬೇಕು ಎಂದು ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿಯಾದ ಎಂ.ವಿ ಭವಾನಿ ರವರು ಒತ್ತಾಯಿಸಿದರು. ಅವರು ಇಂದು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಹಸಿಲ್ದಾರ್ ನೂರುಲ್ ಉದ್ ರವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ರಾಜೇಶ್ ಮಾತನಾಡಿ ರಾಕೇಶ್ ಕಿಶೋರ್ ನನ್ನು ದೇಶದ್ರೋಹಿ ಎಂದು ಪರಿಗಣಿಸಿ ಪ್ರಕರಣ ದಾಖಲಿಸಬೇಕು ನ್ಯಾಯಾಂಗ ವ್ಯವಸ್ಥೆಗೆ ನ್ಯಾಯಾಧೀಶರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಹೇಳಿದರು. ಜಿಲ್ಲಾ ಸಂಘಟನಾ ಸಂಚಾಲಕರಾದ ಅಬ್ದುಲ್ ರೆಹಮಾನ್ ಮಾತನಾಡಿ ದಲಿತರು ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯ ನೀಡುವುದನ್ನು ವಿಕೃತ ಮನಸ್ಸಿನ ಕೋಮುವಾದಿ ವಕೀಲ ಸಹಿಸದೆ ಈ ಕೃತ್ಯ ವ್ಯಸಗಿದ್ದು ಈತನನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಹೇಳಿದರು. ತಾಲೂಕು ಸಂಚಾಲಕರಾದ ಸೀಜು ಮಾತನಾಡಿ ಈ ಘಟನೆ ಅತ್ಯಂತ ಖಂಡನೀಯವಾದದ್ದು ಆದ್ದರಿಂದ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ.ಎನ್ ವೆಂಕಟೇಶ್ ನೇತೃತ್ವದ ಸಂಘಟನೆ ಇಂದು ರಾಜ್ಯಾದ್ಯಂತ ಪ್ರತಿಭಟನೆ ಮೂಲಕ ರಾಷ್ಟ್ರಪತಿಗಳಿಗೆ ಮನವಿ ನೀಡುತ್ತಿದ್ದೇವೆ ಎಂದು ಹೇಳಿದರು. ತಾಲೂಕು ಸಂಘಟನಾ ಸಂಚಾಲಕರಾದ ರಾಜು, ಸಿದ್ದಪ್ಪ, ಮೀನು ಕ್ಯಾಂಪಿನ ರವಿ ಮತ್ತು ಕುಮಾರ್ ಉಪಸಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್. ತರೀಕೆರೆ ಚಿಕ್ಕಮಗಳೂರು