ರೈತರ ಹಿತಕ್ಕಾಗಿ ಜನಸೇವಾ ಫೌಂಡೇಶನ್ – ಹೋರಾಟದ ಎಚ್ಚರಿಕೆ.
ಮಾನ್ವಿ ಅ.16





ತಾಲೂಕಿನ ಶ್ರೀ ರಾಘವೇಂದ್ರ ಟ್ರೇಡಿಂಗ್ ಕಂಪನಿ ಹಾಗೂ ಶ್ರೀ ಸೂಗುರೇಶ್ವರ ಟೆಂಡರ್ಸ್ ಮಾನ್ವಿ ಇವರಿಂದ ಆಂಧ್ರಪ್ರದೇಶ ಮೂಲದ ನೀಲಕಂಠೇಶ್ವರ ಸೀಡ್ಸ್ ಕಾರ್ಪೊರೇಷನ್ ಸಂಸ್ಥೆಯ ಕಳಪೆ ಗುಣಮಟ್ಟದ ಬತ್ತದ ಬೀಜ ರೈತರಿಗೆ ಮಾರಾಟವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬೀಜಗಳು ರೋಗ ನಿರೋಧಕ ಶಕ್ತಿ ಕಳೆದುಕೊಂಡಿದ್ದು, ಇಳುವರಿ ತೀವ್ರವಾಗಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಜನಸೇವಾ ಫೌಂಡೇಶನ್ ತಾಲೂಕು ಅಧ್ಯಕ್ಷ ತಾಜುದ್ದೀನ್ ಚೀಕಲಪರ್ವಿ ಹೇಳಿದರು.

ಅವರು ಇಂದು ಪಟ್ಟಣದ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಹಾಗೂ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡುತ್ತಾ “ಕಳಪೆ ಬೀಜ ಮಾರಾಟದ ಪರಿಣಾಮ ಸಾವಿರಾರು ರೈತರು ಬೆಳೆ ಹಾನಿಯ ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ತಪ್ಪಿತಸ್ಥ ಬೀಜ ಮಾರಾಟಗಾರರ ವಿರುದ್ಧ ತಕ್ಷಣ ಕ್ರಮ ಕೈಗೊಂಡು, ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು,” ಎಂದು ಹೇಳಿದರು.ಕಳಪೆ ಬತ್ತದ ಬೀಜ ಮಾರಾಟ ಮಾಡಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಅಂಗಡಿಗಳ ಎದುರು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ತಾ.ಪ್ರ.ಕಾ ಹಸನ್ ಚಿಕಲಪರ್ವಿ, ಕಾರ್ಯದರ್ಶಿ ರಾಜಾಸಾಬ್ ನೀರಮಾನ್ವಿ, ಸಂ.ಕಾ ಸಿದ್ದರೆಡ್ಡಿ, ಸದಸ್ಯರಾದ ಮೌಲ, ಆಜೀತ್, ಗೊಕುಲ್ ಸೇರಿದಂತೆ ಅನೇಕ ರೈತರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ. ನಕ್ಕುಂದಿ.ಮಾನ್ವಿ