ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಮಗ್ರ ಮಾಹಿತಿ ಸಂಗ್ರಹಿಸುವ, ಸಮೀಕ್ಷೆದಾರರಿಗೆ ಪೂರ್ಣ ಗೊಳಿಸಲು ಶ್ರಮಿಸಿರಿ ಎಂದು – ಟಿ.ಪಿ ಇ.ಓ ರಾಮುಜಿ.ಅಗ್ನಿ ಸೂಚಿಸಿದರು.

ದೇವಣಗಾಂವ ಅ.17

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಹಿನ್ನೆಲೆಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎಲ್ಲರೂ ಸೇರಿ ಸಮೀಕ್ಷೆ ಪೂರ್ಣ ಗೊಳಿಸಲು ಶ್ರಮಿಸಬೇಕು ಎಂದು ಸಿಂದಗಿ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರಾಮುಜಿ ಅಗ್ನಿ ಸೂಚಿಸಿದರು.

ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವಣಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಗಣತಿದಾರ ಶಿಕ್ಷಕರ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು.

ಇನ್ನೂ ಮೂರು ದಿನಗಳಲ್ಲಿ ಗಣತಿಯನ್ನು ಪೂರ್ಣ ಗೊಳಿಸ ಬೇಕಿದೆ, ಸಮೀಕ್ಷೆ ಪೂರ್ಣ ಗೊಳಿಸಲು ಆಗುತ್ತಿರುವ ಅಡೆ ತಡೆಗಳು ಯಾವುವು ಅವುಗಳನ್ನು ಯಾವ ರೀತಿಯಲ್ಲಿ ಬಗೆಹರಿಸಿ ಕೊಳ್ಳಬೇಕೆಬುದನ್ನು ಇದೇ ಸಂದರ್ಭದಲ್ಲಿ ವಿವರಿಸಿದರು.ತಾಂತ್ರಿಕ ಅಡೆ ತಡೆಗಳಿರುವ ಸಮೀಕ್ಷೆಯನ್ನು ಪಂಚನಾಮಿ ಮಾಡುವ ಮೂಲಕ ಇತ್ಯರ್ಥ ಪಡಿಸಿ ಕೊಳ್ಳಬೇಕೆಂದು ಸೂಚಿಸಿದರು.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಸಮೀಕ್ಷೆ ಪೂರ್ಣ ಗೊಳಿಸುವ ಉದ್ದೇಶದಿಂದ ಅವರನ್ನು ಬಳಸಿ ಕೊಂಡು ಶೇ.100 ಗುರಿಯನ್ನು ಸಾಧಿಸಿ ಎಂದು ಹೇಳಿದರು.

ದೇವಣಗಾಂವ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ ದೊಡಮನಿ ಮಾತನಾಡಿ ಸಮೀಕ್ಷೆದಾರರಿಗೆ ಎಲ್ಲ ರೀತಿಯ ಸಹಾಯ ಸೌಕರ್ಯಗಳನ್ನು ಗ್ರಾಮ ಪಂಚಾಯಿತಿ ಯಿಂದ ಮಾಡಿ ಕೊಡಲಾಗಿದೆ ಹಾಗೂ ಡಂಗುರ ಸಾರುವ ಮೂಲಕ ಮತ್ತಷ್ಟು ಜನರಿಗೆ ಸಮೀಕ್ಷೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ವಿವರಿಸಿದರು.

ಸಿ.ಆರ್.ಪಿ ಎಸ್.ಆರ್. ಮುಲ್ಲಾ ಮಾತನಾಡಿ ಸಮೀಕ್ಷೆದಾರರಿಗೆ ಆಗುತ್ತಿರುವ ತಾಂತ್ರಿಕ ಅಡೆ ತಡೆಗಳನ್ನು, ತೊಂದರೆಗಳನ್ನು ಸಭೆಯಲ್ಲಿ ವಿವರಿಸಿದರು.

ಆಲಮೇಲ ತಾಲೂಕು ಪಂಚಾಯತ ಎ.ಡಿ ಸಿದ್ದು ಅಂಕಲಗಿ, ಶಿಕ್ಷಕರಾದ ಗುರುಲಿಂಗಪ್ಪ ಸಿಂಪಿ, ಎಸ್.ಎಸ್ ಕರ್ನಾಳ, ಎಸ್.ವಿ ಪಾಟೀಲ, ಲಕ್ಷ್ಮಿಪುತ್ರ ಹಾಳಕಿ, ಜಿ.ಆರ್ ಹಿರೇಮಠ, ಚಂದು ಪೂಜಾರಿ, ಎಸ್.ಎ ಹರವಾಳ, ಎಂ.ಎಂ ಕಲಶೆಟ್ಟಿ, ಎ.ಎ ಸಿಂದಗಿಕರ, ಚಾಂದಸಾಬ ಅಡಾಡಿ, ಭಗವಂತ ಅತಾಪಿ ಖಾಜೆಸಾಬ ಚೌದರಿ, ಎಂ.ಎ ಜೋಶಿ, ಎಸ್.ಎಸ್ ಸಾಲೋಟಗಿ, ಎಂ.ಎಸ್ ಜೋಗುರ, ಆಯ್.ಕೆ ಪತ್ತಾರ, ಎಂ.ಆರ್ ನಾಗಾವಿ, ಶಾಂತಾಬಾಯಿ ಹಿಂಚಿಗೇರಿ, ಗಂಗಾಬಾಯಿ ಬಾನಾಳ, ಕವಿತಾ ಬೋಗಾರ, ಸಂಗೀತ ರಜಪೂತ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button