ಶ್ರೀ ಭೂತಾಳ ಸಿದ್ದೇಶ್ವರ ಅ. 21 ಕ್ಕೆ – ಜಾತ್ರಾ ಮಹೋತ್ಸವವು ಜರುಗುವುದು.
ಗುಂಡಕರ್ಜಗಿ ಅ.17





ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಭೂತಾಳ ಸಿದ್ದೇಶ್ವರ ಜಾತ್ರಾ ಮಹೋತ್ಸವು. ಅಕ್ಟೋಬರ್ 21-10-2025 ಮಂಗಳವಾರ ದಂದು ಬೆಳಗ್ಗೆ 10-00 ಗಂಟೆಗೆ ವಾದ್ಯ ವೈಭವಗಳೊಂದಿಗೆ ಗಂಗಾ ಸ್ಥಳಕ್ಕೆ ಹೋಗಿ ಬರುವುದು ನಂತರ ಶ್ರೀ ಭೂತಾಳ ಸಿದ್ದೇಶ್ವರ ಗದ್ದುಗೆಗೆ ಪಟ್ಟಣದ ಹೂವು ಏರಿಸಲಾಗುತ್ತದೆ. ನಂತರ ಮಧ್ಯಾಹ್ನ 1:00ಗೆ ಮಹಾ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದೇ ರಾತ್ರಿ 10-00 ಗಂಟೆಗೆ ಸುಪ್ರಸಿದ್ಧ ಡೊಳ್ಳಿನ ಪದಗಳು ನಡೆಯುತ್ತವೆ. ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘ ಸಾ:ಸಂಖ ತಾ:ಜತ್ತ ಜಿ:ಸಾಂಗ್ಲಿ ಮುಖ್ಯ ಗಾಯಕರು ಶ್ರೀಶೈಲ್ ಗೌಡ್ರು ಹಾಗೂ ಶ್ರೀ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಸಾ:ಸಂಕನಾಳ ತಾ:ಬ ಬಾಗೇವಾಡಿ ಜಿ:ವಿಜಯಪುರ, ಮುಖ್ಯ ಗಾಯಕರು ಗುರುಲಿಂಗ ಮಾಸ್ಟರ್, ಈ ಎರಡು ತಂಡಗಳಿಂದ ರಾತ್ರಿ ಸುಪ್ರಸಿದ್ಧ ಡೊಳ್ಳಿನ ಪದಗಳು ಜರುಗುತ್ತವೆ. ಈ ಪ್ರಕಾರ ಜಾತ್ರೆ ನಡೆಯಲಾಗುತ್ತದೆ ಎಂದು ಜಾತ್ರಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ