ತರೀಕೆರೆ ಪುರ ಸಭೆಗೆ ನೂತನ ಉಪಾಧ್ಯಕ್ಷರಾಗಿ – ಗಿರಿಜಾ ಗಿರಿರಾಜ ಆಯ್ಕೆ.
ತರೀಕೆರೆ ಅ.17





ಪುರ ಸಭೆಯ ಎಲ್ಲಾ ವಾರ್ಡುಗಳಲ್ಲೂ ಉತ್ತಮ ಕಾಮಗಾರಿಗಳನ್ನು ಮಾಡಿಸಿದ್ದೇನೆ ಎಂದು ಶಾಸಕರಾದ ಜಿ.ಎಚ್ ಶ್ರೀನಿವಾಸ್ ಹೇಳಿದರು. ಅವರು ಇಂದು ಪಟ್ಟಣದ ಪುರ ಸಭಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಉಪಾಧ್ಯಕ್ಷರಾದ ಗಿರಿಜಾ ಗಿರಿರಾಜ್ ರವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ತರೀಕೆರೆ ಕ್ಷೇತ್ರಕ್ಕೆ 200 ಕೋಟಿ ಅನುದಾನದಿಂದ ಅಭಿವೃದ್ಧಿ ಕಾಮಗಾರಿಗಳಾಗುತ್ತಿವೆ ಬಿ.ಎಚ್ ರಸ್ತೆ ಅಭಿವೃದ್ಧಿ ಕಾಮಗಾರಿಯು ಐದು ಜನ ಗುತ್ತಿಗೆದಾರರಿಂದ ವೇಗವಾಗಿ ನಡೆಯುತ್ತಿದೆ ತರೀಕೆರೆ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮಾನ್ಯ ಮುಖ್ಯಮಂತ್ರಿಗಳನ್ನು ಕರಿಸುತ್ತೇನೆ ಎಂದು ಹೇಳಿದರು. ಪುರ ಸಭಾ ಅಧ್ಯಕ್ಷರಾದ ವಸಂತಕುಮಾರ್ ಕವಾಲಿ ಮಾತನಾಡಿ ನಾನು ಎರಡು ವರ್ಷಗಳಿಂದ ಉತ್ತಮ ಕೆಲಸ ಮಾಡಲು ಎಲ್ಲಾ ಸದಸ್ಯರು ಮತ್ತು ಶಾಸಕರು ತುಂಬಾ ಸಹಕಾರ ನೀಡಿದ್ದಾರೆ ನನಗೆ ಕೆಲಸ ಮಾಡಲು ಉತ್ಸಾಹದಿಂದ ಪ್ರೋತ್ಸಾಹಿಸಿದ್ದಾರೆ ಎಂದು ಹೇಳಿದರು. ಪಂಚ ಗ್ಯಾರಂಟಿಗಳ ಜಿಲ್ಲಾ ಅಧ್ಯಕ್ಷರುರಾದ ಶಿವಾನಂದ ಸ್ವಾಮಿ ಮಾತನಾಡಿ, ತರೀಕೆರೆ ಪಟ್ಟಣಕ್ಕೆ ಶಾಸಕರು ಸುಸಜ್ಜಿತವಾದ ತಾಯಿ ಮಗು ಆಸ್ಪತ್ರೆ ನಿರ್ಮಾಣ ಮಾಡಿಸಿದ್ದಾರೆ. ಪುರಸಭಾ ಕಟ್ಟಡ ಪರಿಸರಕ್ಕೆ ತೊಂದರೆ ಆಗದಂತೆ ನಿರ್ಮಾಣವಾಗುತ್ತಿದೆ ಅದೇ ರೀತಿ ಸಾರಿಗೆ ಬಸ್ ನಿಲ್ದಾಣ ಕಟ್ಟಡ ನಿರ್ಮಾಣವಾಗುತ್ತಿದೆ ಶಾಸಕರು ತರೀಕೆರೆ ಕ್ಷೇತ್ರಕ್ಕೆ ತುಂಬಾ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದಾರೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಯು ಪಾರುಕ್ ಮಾತನಾಡಿ ಮಾನ್ಯ ಶಾಸಕರಾದ ಜಿ.ಎಸ್ ಶ್ರೀನಿವಾಸ್ ರವರು ಮುಂದಿನ ದಿನಗಳಲ್ಲಿ ಸಚಿವರಾಗುವ ಸಂಭವವಿದೆ ಎಂದು ಹೇಳಿದರು. ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಗಿರಿಜಾ ಗಿರಿರಾಜರವರು ಮಾತನಾಡಿ ನಾನು ಶಾಸಕರು ಇರುವ ವಾರ್ಡಿನ ಸದಸ್ಯರಾಗಿದ್ದೇನೆ ಅವರ ಸಹಕಾರದಿಂದ ಪಟ್ಟಣದ ಎಲ್ಲಾ ವಾರ್ಡಿಗೂ ಸಹ ಸಮಾನವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸಿತರಿದ್ದ ಪುರಸಭಾ ಸದಸ್ಯರಾದ ಭೋಜರಾಜ್, ಲೋಕೇಶ್, ಶಶಾಂಕ್, ದಾದಾಪೀರ್, ರಂಗನಾಥ, ಟಿ.ಜಿ ಮಂಜುನಾಥ್, ಮಾಜಿ ಪುರಸಭಾ ಅಧ್ಯಕ್ಷರಾದ ಟಿ.ಎಸ್ ರಮೇಶ್, ಎಂ.ನರೇಂದ್ರ, ಮಾತನಾಡಿದರು. ಪುರ ಸಭಾ ಸದಸ್ಯರಾದ ಪರಮೇಶ್, ಅನಿಲ್ ಅಂಜಯ್ಯ, ಬಸವರಾಜ್, ಚಂದ್ರಶೇಖರ್ ಚೇತನ್, ಕುಮಾರಪ್ಪ, ಆದಿಲ್ ಪಾಶ, ಮಂಜುನಾಥ, ವಸಂತಮ್ಮ ಹಾಗೂ ಕಾಂಗ್ರೆಸ್ಸಿನ ಮಹಿಳಾ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ, ಮುಖ್ಯ ಅಧಿಕಾರಿ ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು